December 19, 2024

Bhavana Tv

Its Your Channel

ಅರಣ್ಯವಾಸಿ ಹೋರಾಟ: ೩೦ ನೇ ವರ್ಷಕ್ಕೆ ಪಾದಾರ್ಪಣೆ. ಸಾಂಘಿಕ ಹೋರಾಟದೊಂದಿಗೆ ಕಾನೂನಾತ್ಮಕ ಹೋರಾಟ.

ಶಿರಸಿ: ಸ್ವತಂತ್ರ ನಂತರದ ಜಿಲ್ಲೆಯ ಇತರ ಸಮಸ್ಯೆಗಳೊಂದಿಗೆ ಜ್ವಲಂತ ಸಮಸ್ಯೆಗಳಲ್ಲಿ ಒಂದಾದ ಅರಣ್ಯ ವಾಸಿಗಳ ಅರಣ್ಯ ಭೂಮಿ ಹಕ್ಕಿನ ಸಮಸ್ಯೆ ಇಂದಿಗೂ ಪ್ರಮುಖವಾದ ಸಮಸ್ಯೆಯಾಗಿ ಉಳಿದುಕೊಂಡಿದೆ.

ಅನೇಕ ಸಂಘಟನೆಗಳು ತನ್ನದೇ ಆದಂತಹ ನೆಲೆಯಲ್ಲಿ ಪರಿಣಾಮಕಾರವಾಗಿ ಅರಣ್ಯ ಹಕ್ಕಿಗೆ ನಿರಂತರ ಹೋರಾಟ ಸಂಘಟನೆ ಜರುಗಿದ್ದು ಇರುತ್ತದೆ. ಇಂತಹ ಅರಣ್ಯ ಭೂಮಿ ಹಕ್ಕಿಗಾಗಿ ಜರುಗಿದ ಹೋರಾಟದಲ್ಲಿ ವಕೀಲ, ಸಾಮಾಜಿಕ ಚಟುವಟಿಕೆಯ ಚಿಂತಕ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲಿ,್ಲ ಸಾಮಾಜಿಕ ಚಿಂತಕ ಕಾಗೋಡ ತಿಮ್ಮಪ್ಪ ಅವರ ಮಾರ್ಗದರ್ಶನದಲ್ಲಿ ಜರುಗಿದ ಹೋರಾಟಕ್ಕೆ ಸಪ್ಟೆಂಬರ್ ೧೩ ರಂದು ೩೦ ನೇ ವರ್ಷ ಪಾದಾರ್ಪಣೆ ಮಾಡುತ್ತಿರುವುದು, ಜಿಲ್ಲೆಯ ವಿವಿಧ ಹೋರಾಟದಲ್ಲಿ ಈ ಹೋರಾಟವು ಇತಿಹಾಸ ಪುಟಕ್ಕೆ ಸೇರ್ಪಡೆಗೊಳ್ಳುತ್ತದೆ. 

ಉತ್ತರ ಕನ್ನಡ ಜಿಲ್ಲೆಯ ಬೌಗೋಳಿಕ ೧೦,೫೭೧ ಚದರ್ ಕಿಲೋ ಮೀಟರ್ ನಲ್ಲಿ ೮,೫೦೦ ಚದರ್ ಕಿಲೋ ಮೀಟರ್ ಅರಣ್ಯದಿಂದ ಆವೃತ್ತವಾಗಿರುವ ಜಿಲ್ಲೆಯು ಭೌಗೋಳಿಕ ಹಿನ್ನೆಲೆಯಲ್ಲಿ ವಾಸಿಸಿರುವ ೧೪ ಲಕ್ಷ ಜನಸಂಖ್ಯೆಯ ಜನಜೀವನಕ್ಕೆ ಅರಣ್ಯ ಭೂಮಿಯ ವಾಸ್ತವ್ಯ ಹಾಗೂ ಸಾಗುವಳಿಗೆ ಅನಿವಾರ್ಯವಾಗಿದೆ. ಇಂದು ಅರಣ್ಯ ಭೂಮಿ ಅರಣ್ಯ ವಾಸಿಗಳಿಗೆ ಪರ್ಯಾಯ ಜೀವನದ ವ್ಯವಸ್ಥೆಯ ಅಂಗವಾಗಿದೆ.

ಕಾನೂನಿನ ತೊಡಕಿನಲ್ಲಿ ಅರಣ್ಯ ವಾಸಿಗಳ ಕಬಜಾ ಭೋಗ್ವಟೆ ಹಾಗೂ ಭೂಮಿಯ ಹಕ್ಕಿಗೆ ೨೯ ವರ್ಷದಿಂದ ನಿರಂತರ ಜಾಗೃತಿ, ಸಂಘಟನೆ, ಹೋರಾಟ ಮುಂದುವರೆದು ಹೋರಾಟದ ೩ನೇ ದಶಕದ ಅಂತ್ಯದಲ್ಲಿ ಜನಾಂದೋಲನವಾಗಿ ಸಂಘಟನೆ ಬಲಗೊಂಡಿರುವುದು ಸಂಘಟನೆಯ ಶಕ್ತಿಗೆ ಪೂರಕವಾಗಿದೆ.

ಸೆಪ್ಟೆಂಬರ್ ೧೨, ೧೯೯೧ ರಂದು ಹೋರಾಟಕ್ಕೆ ನಾಂದಿ ಹಾಡಿದ ವೇದಿಕೆ ಇಂದು ೩೦ ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ನಿರಂತರ ೨೯ ವರ್ಷ ಹೋರಾಟದಲ್ಲಿ ಜಿಲ್ಲೆಯಲ್ಲಿರುವ ಅರಣ್ಯ ವಾಸಿಗಳಿಗೆ ಶೇಕಡಾ ೪ ರಷ್ಟು ಅರಣ್ಯ ಹಕ್ಕು ಪ್ರಾಪ್ತವಾಗಿದ್ದಲ್ಲಿ, ಅರಣ್ಯ ವಾಸಿಗಳಿಗೆ ಕಾನೂನಾತ್ಮಕ ಜಾಗೃತಿ, ಅರಣ್ಯ ವಾಸಿಗಳ ಒಕ್ಕಲೆಬ್ಬಿಸುವಿಕೆ, ಅರಣ್ಯ ಅಧಿಕಾರಿಗಳ ದೌರ್ಜನ್ಯ ಹಾಗೂ ಕಾನೂನಾತ್ಮಕ ಜಾಗೃತಿ ಉಂಟುಮಾಡುವಲ್ಲಿ ಹೋರಾಟಗಾರರ ವೇದಿಕೆ ಪರಿಣಾಮಕಾರವಾಗಿ ಕಾರ್ಯನಿರ್ವಹಿಸಿರುತ್ತದೆ.

ಇಂದಿನವೆರೆಗೆ ಜಿಲ್ಲೆಯಲ್ಲಿ ೧೯೭೮ ರ ಪೂರ್ವದ ಅರಣ್ಯವಾಸಿಗೆ ಮಂಜೂರಿಗೆ ಕೇಂದ್ರ ಸರಕಾರ ೨,೫೩೧ ಅರಣ್ಯ ಭೂಮಿಯ ಹಕ್ಕು ಮಂಜೂರಿಗೆ ಆದೇಶಿಸಿದ್ದು, ಅದರಂತೆ ಅರಣ್ಯ ಭೂಮಿ ಹಕ್ಕು ಕಾಯಿದೆ ಅಡಿಯಲ್ಲಿ ಪಾರಂಪರಿಕ ಅರಣ್ಯವಾಸಿ, ಬುಡಕಟ್ಟು ಹಾಗೂ ಸಮೂಹ ಉದ್ದೇಶಕ್ಕೆ ಇಂದಿನವರೆಗೆ ೨,೮೦೭ ಹೀಗೆ ಒಟ್ಟು ಇಂದಿನವರೆಗೆ ೫,೩೩೮ ಹಕ್ಕುಪತ್ರ ಅರ್ಹಆಗಿದ್ದು ಇನ್ನುಳಿದ ೮೦ ಸಾವಿರಕ್ಕಿಂತ ಮಿಕ್ಕಿ ಅರಣ್ಯ ವಾಸಿಗಳಿಗೆ ನ್ಯಾಯ ಕೊಡುವ ದಿಶೆಯಲ್ಲಿ ಕಾನೂನಾತ್ಮಕ ಸಮಸ್ಯೆಗೆ ಪರಿಹಾರ ರೂಪವಾಗಿ ಅರಣ್ಯ ವಾಸಿಗಳ ಪರವಾಗಿ ಸರ್ವೋಚ್ಛ ನ್ಯಾಯಾಲಯ ನ್ಯೂಡೆಲ್ಲಿ ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯ ಬೆಂಗಳೂರಿನಲ್ಲಿ ಸಾರ್ವಜನಿಕ ಹಿತಾಸಕ್ತಿಯ ರಿಟಪೀಟೇಷನ್ ಹೋರಾಟಗಾರರ ವೇದಿಕೆ ದಾಖಲಿಸಿದ್ದು, ಅರಣ್ಯ ವಾಸಿಗಳ ನೈತಿಕ ಸ್ಥೆರ್ಯ ಹೆಚ್ಚಿಸಿದೆ.

೫ ಸಾವಿರಕ್ಕಿಂತ ಮಿಕ್ಕಿ ಪ್ರತಿಭಟನೆ:

ಹೋರಾಟಕ್ಕೆ ಮಾದರಿ ರೀತಿಯಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ೫ ಬೃಹತ್ ಪ್ರಮಾಣದ ಪಾದಯಾತ್ರೆ, ಕಾರವಾರ ಚಲೋ, ಜೈಲ್‌ಬರೋ, ರ‍್ಯಾಲಿ, ಉರುಳುಸೇವೆ, ಸಾಮಾವೇಶ, ದೌರ್ಜನ್ಯ ವಿರುದ್ಧ ಅರಣ್ಯ ಅಧಿಕಾರಿಗಳ ಕಛೇರಿಗೆ ಮುತ್ತಿಗೆ, ಮೇಲ್ಮನವಿ ಅಭಿಯಾನ, ಬೆಂಗಳೂರು ಚಲೋ, ಕಾನೂನು ಜಾಗೃತಿ ಕಾರ್ಯಕ್ರಮ, ೫ ಲಕ್ಷ ಅರಣ್ಯ ಹಕ್ಕು ಕಾಯಿದೆಯ ಮುಖ್ಯಾಂಶದ ಕರಪತ್ರ ಪ್ರಕಟಣೆ, ಅರಣ್ಯ ಅಧಿಕಾರಿಗಳೊಂದಿಗೆ ಸಮಸ್ಯೆಗಳ ಸ್ಫಂದನೆ ಮುಂತಾದ ೫,೦೦೦ ಕ್ಕಿಂತ ಮಿಕ್ಕಿ ವಿವಿಧ ರೀತಿಯ ವಿಭಿನ್ನ ಹಾಗೂ ಪರಿಣಾಮಕಾರಿ ೨೯ ವರ್ಷ ಹೋರಾಟದ ಪ್ರಮುಖ ಹೆಜ್ಜೆಗಳೆಂದು ಗುರುತಿಸಿಕೊಳ್ಳಲಾಗಿದೆ.

ಹೋರಾಟಕ್ಕೆ ಕಾಗೋಡ ತಿಮ್ಮಪ್ಪ ಅವರ ಮಾರ್ಗದರ್ಶನ, ನಿವೃತ್ತ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಹೆಚ್ ಎನ್ ನಾಗ ಮೋಹನದಾಸ ಅವರ ಕಾನೂನಾತ್ಮಕ ಬೆಂಬಲ, ರವೀಂದ್ರ ನಾಯ್ಕರ ನೇತ್ರತ್ವದಲ್ಲಿ ಸಂಘಟನಾತ್ಮಕ ಹೋರಾಟಕ್ಕೆ ಗಟ್ಟಿತನಕ್ಕೆ ಪ್ರಮುಖ ಶಕ್ತಿ ಎಂದರೆ ತಪ್ಪಾಗಲಾರದು.

ಜಿಲ್ಲೆಯ ಇತಿಹಾಸದಲ್ಲಿ ನಿರಂತರ, ಸತತ ೩೦ ವರ್ಷದ ಹೋರಾಟದಲ್ಲಿ ಅರಣ್ಯ ವಾಸಿಗಳು ಹಕ್ಕಿನ ನೀರಿಕ್ಷೆಯಲ್ಲಿ ಅರಣ್ಯವಾಸಿ ಅತಿಕ್ರಮಣದಾರರು ಇದ್ದಾರೆ. ರಾಜಕೀಯ ಇಚ್ಛಾಶಕ್ತಿ, ಜನಪ್ರತಿನಿಧಿಗಳಿಗೆ ಕಾನೂನು ಅಜ್ಞಾನದ ಕೊರತೆಯಿಂದ ಅರಣ್ಯ ಭೂಮಿ ಮಂಜೂರಿಯಲ್ಲಿ ಹಿನ್ನೆಡೆಯಾಗಿದೆ ಎಂದು ರವೀಂದ್ರ ನಾಯ್ಕ ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.

error: