May 4, 2024

Bhavana Tv

Its Your Channel

ಹೊನ್ನಾವರ ಹೆದ್ದಾರಿ ಮೇಲ್ ಸೇತುವೆ ಹೋರಾಟ ಸಮಿತಿ ಸಚಿವ ಶಿವರಾಮ್ ಹೆಬ್ಬಾರ್‌ನ್ನು ಬೇಟಿ

ಹೊನ್ನಾವರ: ಹೆದ್ದಾರಿ ಮೇಲ್ ಸೇತುವೆ ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್‌ನ್ನು ಕುಮಟಾ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಭೆÃಟಿಯಾಗಿ ಹೊನ್ನಾವರ ಹೆದ್ದಾರಿ ಮೇಲ್ ಸೇತುವೆ ಅವಶ್ಯಕತೆಯ ಕುರಿತು ಒತ್ತಾಯಿಸಿದರು.
ಸಮಿತಿಯ ಪದಾಧಿಕಾರಿಗಳೊಂದಿಗೆ ಮಾತನಾಡಿದ ಸಚಿವ ಶಿವರಾಮ್ ಹೆಬ್ಬಾರ್ ಹಿಂದಿನ ಸರ್ಕಾರವು ಯೋಜನೆಯಲ್ಲಿದ್ದ ೪೫ ಮೀ. ಭೂ ಸ್ವಾಧೀüನವನ್ನು ಕೈ ಬಿಟ್ಟು ೩೦ ಮೀ. ಗೆ ಸಿಮಿತಗೊಳಸಿದ್ದರಿಂದ ಸರ್ವಿಸ್ ರಸ್ತೆಯನ್ನು ಹಾಗೂ ಮೇಲ್ ಸೇತುವೆಯನ್ನು ಕೈ ಬಿಡುವಂತಾಗಿದೆ. ಆದರೆ ಸ್ಥಳಿಯವಾಗಿ ಮೇಲ್ ಸೇತುವೆ ರಚಿಸಿದರೆ ಜನರಿಗೆ ಅನುಕೂಲ ಆಗುತ್ತಿತ್ತು. ಹೆದ್ದಾರಿ ಗುತ್ತಿಗೆ ಕಂಪನಿಯು ೩೦ ಮೀ. ಅಗಲದಲ್ಲಿ ಮಾಡಬೇಕಾದ ರಸ್ತೆ ಕಾಮಗಾರಿಗೆ ಕೇಂದ್ರದ ಅನುಮೋದನೆ ಪಡೆದುಕೊಂಡಿದೆ. ಅದರಂತೆ ರಸ್ತೆ ಕಾಮಗಾರಿ ಮುಂದುವರೆಯುತ್ತದೆ. ಕಾಮಗಾರಿಯ ಬದಲಾವಣೆ, ಮೇಲ್ ಸೇತುವೆ ರಚನೆಗೆ ಪುನಃ ಭೂಮಿ ವಶಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದು ಸರ್ಕಾರದ ಮಟ್ಟದಲ್ಲಿ ನಿರ್ಣಯ ಆಗಬೇಕಾದ ಕೆಲಸ. ತಾನು ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ತಜ್ಞರ ಕಮಿಟಿಯ ಮೂಲಕ ಕೇಂದ್ರಕ್ಕೆ ಕಳುಹಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸುದಾಗಿ ತಿಳಿಸಿದರು. ಶರಾವತಿ ನದಿಗೆ ಇನ್ನೋಂದು ಸೇತುವೆ ಹೆದ್ದಾರಿಗಾಗಿ ನಿರ್ಮಾಣ ಆಗುತ್ತಿದೆ ಎಂದ ಅವರು ಹಿಂದಿನ ಸರ್ಕಾರ ವಿವಿಧ ಕಾರಣಕ್ಕಾಗಿ ಯೋಜನೆಯಲ್ಲಿ ಬದಲಾವಣೆ ಮಾಡಿದರೂ ಅದು ಸರ್ಕಾರದ ನಿರ್ಣಯ ಆಗಿದ್ದು ಅದನ್ನು ಸರಿಪಡಿಸಲು ಜನರ ಪರವಾಗಿ ರೂಪಿಸುವ ಜವಬ್ದಾರಿ ನಮ್ಮ ಮೇಲೆ ಇದೆ ಎಂದರು.
ಶಾಸಕ ದಿನಕರ್ ಶೆಟ್ಟಿ ಮಾತನಾಡಿ ವಿಶಿಷ್ಟ ಬೌಗೋಳಿಕ ಪ್ರದೇಶವಾದ ಹೊನ್ನಾವರದಲ್ಲಿ ಮೇಲ್ ಸೇತುವೆ ನಿರ್ಮಾಣ ಅನಿವಾರ್ಯ ಉಸ್ತುವಾರಿ ಸಚಿವರು ಪಟ್ಟಣದಲ್ಲಿ ಮೇಲ್ ಸೇತುವೆಗೆ ಅವಶ್ಯಕ ಕ್ರಮ ಜರುಗಿಸಬೇಕೆಂದರು. ಜಿಲ್ಲಾಧಿಕಾರಿ ಮುಲ್ಲಾಹಿ ಮುಹಿಲಿನ್, ಡಿ.ಎಫ್.ಒ ವಸಂತ ರೆಡ್ಡಿ, ಡಿ,ಎಫ್.ಒ ಗಣಪತಿ ನಾಯ್ಕ, ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರದ ಪ್ರೋಜೇಕ್ಟ ಡೈರೆಕ್ಟರ್ ಶಿಸು ಮೋಹನ್, ಐಆರ್‌ಬಿ ಅಧಿಖಾರಿ ಮೋಹನ್ ದೋಸ್, ಭೂ ಸ್ವಾಧಿನ ಅಧಿಖಾರಿ ಸಾಜೀದ್ ಮುಲ್ಲಾ, ಹೊನ್ನಾವರ ಪ.ಪಂ ಅಧ್ಯಕ್ಷ ಶಿವರಾಜ್ ಮೇಸ್ತ, ಮೇಲ್ ಸೇತುವೆ ಹೋರಾಟ ಸಮಿತಿಯ ಅಧ್ಯಕ್ಷ ಎಂ. ಎನ್ ಸುಬ್ರಹ್ಮಣ್ಯ, ಸಂಚಾಲಕ ಲೋಕೇಶ ಮೇಸ್ತ, ಆರ್ ಜಿ ಪೈ ಎಂ, ಎಸ್ ಹೆಗ್ಡೆ ಕಣ್ಣಿ, ನ್ಯಾಯವಾದಿ ಸೂರಜ್ ನಾಯ್ಕ ಹಾಗೂ ಇನ್ನೀತರರು ಉಪಸ್ಥಿತರಿದ್ದರು.

error: