April 26, 2024

Bhavana Tv

Its Your Channel

ಭಟ್ಕಳ ಪಟ್ಟಣದ ರಾಜಾಂಗಣದ ಬಳಿ ನಾಗಬನದ ಕಂಪೌಡ್ ನಿರ್ಮಾಣ ವಿವಾದ ತಾರಕಕ್ಕೆ,ಶನಿವಾರ ರಾತ್ರಿ ವರೆಗೂ ೧೪೪ಸೆಕ್ಷನ್. ನಿಷೇದಾಜ್ಞೆ ಜಾರಿಗೆ

ಭಟ್ಕಳ ; ಪಟ್ಟಣದ ರಾಜಾಂಗಣದ ಬಳಿ ನಾಗಬನದ ಕಂಪೌಡ್ ನಿರ್ಮಾಣ ವಿವಾದ ತಾರಕ್ಕಕೇರಿ ಬಿಗುವಿನ ವಾತಾವರಣ ನಿರ್ಮಾಣವಾದ ಬೆನ್ನಲ್ಲಿ ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ವರೆಗೂ ೧೪೪ಸೆಕ್ಷನ್. ನಿಷೇದಾಜ್ಞೆ ಜಾರಿಗೆ ಗೊಳಿಸಿ ತಹಸೀಲ್ದಾ ಎಸ್ ರವಿಚಂದ್ರ ಆದೇಶ ನೀಡಿದ್ದಾರೆ.

ನಾಗಬನ ನಿರ್ಮಾಣದ ವಿಚಾರದಲ್ಲಿ ಶುಕ್ರವಾರ ಉಭಯ ಕೋಮುಗಳ ನಡುವೆ ವಿವಾದ ನಡೆದು ಮಾತಿನ ಚಕಮಕಿ ನಡೆದಿತ್ತು. ನಂತರ ಭಟ್ಕಳ ಉಪವಿಭಾಗಾಧಿಕಾರಿ ಮಮತಾದೇವಿ ಎಸ್ ಅವರ ಮದ್ಯಸ್ಥಿಕೆಯಲ್ಲಿ ಸಂಧಾನ ಸಭೆ ನಡೆದಿತ್ತು. ಅಲ್ಲೂ ವಾದ ವಿವಾದಗಳು ನಡೆದು ಉಭಯ ಕೋಮಿನ ಮುಖಂಡರು ಸಭೆ ಬಿಟ್ಟು ಹೊರಗೆ ಬಂದಿದ್ದರು. ಮತೀಯವಾಗಿ ಭಟ್ಕಳ ಅತಿ ಸೂಕ್ಷö ಪ್ರದೇಶವಾಗಿದ್ದು ಸಣ್ಣ ಘಟನೆಗಳು ಕೋಮು ಗಲಭೆ ಆಗುವ ಸಾದ್ಯತೆಗಳಿರುವೆ. ಪ್ರಸ್ತುತ ನಾಗಬನದ ಬಳಿ ಮುಸ್ಲಿಂ ಸಮುದಾಯ ಬಹುಳ್ಯವಿದೆ. ಅಲ್ಲದೆ ಈ ವಿಷಯದಲ್ಲಿ ವಿವಾದವಿದೆಯೆಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತೆರಳದಂತೆ ಭಟ್ಕಳ ಶಾಂತಿ ಸೌಹಾರ್ದತೆಯನ್ನು ಕಾಪಾಡಲು ನಿಷೇದಾಜ್ಞೆ ಹೊರಡಿಸಿ ಆದೇಶ ನೀಡಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಿ ನಿಷೇದಾಜ್ಞೆಯನ್ನು ಮುಂದುವರೆಸುವದಾಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

error: