December 21, 2024

Bhavana Tv

Its Your Channel

ಪೌರಕಾರ್ಮಿಕರಿಗೆ ಸಮವಸ್ತ್ರ ಮತ್ತು ಪ್ರೊಟೆಕ್ಟಿವ್ ಕಿಟ್

ಇಳಕಲ್ಲ: ನಗರಸಭೆಯಲ್ಲಿ ಕಾರ್ಯನಿರ್ವಹಿಸುವ ಪೌರಕಾರ್ಮಿಕರುಗಳಿಗೆ ಕರೋನಾ ಭೀಕರತೆಯ ಅರಿತು ಪೌರಕಾರ್ಮಿಕರಿಗೆ ಸಮವಸ್ತ್ರ ಮತ್ತು ಪ್ರೊಟೆಕ್ಟಿವ್ ಕಿಟ್ ವಿತರಿಸಲಾಯಿತು.

ಕೋವಿಡ್ ಸೋಂಕಿನ ಆತಂಕದ ನಡುವೆಯೂ ಕೂಡ ನಮ್ಮ ನಗರವನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿರುವ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ.

ಪೌರಕಾರ್ಮಿಕರು ಎರಡು ಡೋಸ್ ಕೋವಿಡ್ ಲಸಿಕೆ ಯನ್ನು ತಪ್ಪದೇ ಪಡೆಯುವಂತೆ ನಗರಸಭೆ ಅಧ್ಯಕ್ಷರಾದ ಶೋಭಾ ಸಿದ್ದಣ್ಣ ಅಮದಿಹಾಳ ಹಾಗೂ ಪೌರಾಯುಕ್ತರಾದ ಜಗದೀಶ್ ಹುಲಗೆಜ್ಜಿ ಮತ್ತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ (ಪರಿಸರ) ಆನಂದ್ ಬದಿ ತಿಳಿಸಿದರು . ಸುರಕ್ಷತಾ ಕ್ರಮಗಳನ್ನು ಅನುಸರಿಸಿ ದಿನ ನಿತ್ಯ ಕಾರ್ಯನಿರ್ವಹಿಸಲು ಮತ್ತು ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ತಿಳಿಸಿದರು.

ವರದಿ ಮಹಂತೇಶ್ ಕುರಿಕಾಗಲಕೋಟೆ

error: