December 21, 2024

Bhavana Tv

Its Your Channel

ಗಾಳೆ ಮಳೆಯ ರಭಸಕ್ಕೆ ಹತ್ತಾರು ಎಕರೆ ಬಾಳೆ ತೋಟ ನಾಶ

ಬಾಗಲಕೋಟೆ: ಕಳೆದ ಎರಡು ದಿನದಿಂದ ಮಳೆ ಗಾಳಿ ರಭಸಕ್ಕೆ ಬಾಳೆ ತೋಟ ನೆಲಕಚ್ಚಿ ನಾಶವಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಗ್ರಾಮದಲ್ಲಿ ನಡೆದಿದೆ. ಜನತಾ ಕಪ್ಯೂ೯ ಮತ್ತು ಲಾಕ ಡೌನನಿಂದಾಗಿ ರೈತನಿಗೆ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದು, ಇದರ ಮಧ್ಯ ಬೀಳಗಿ ತಾಲೂಕಿನ ಸುನಗ ಗ್ರಾಮದ ಕೆಲ ಪ್ರದೇಶಗಳಲ್ಲಿ ಗಾಳೆ ಮಳೆಯ ರಭಸಕ್ಕೆ ಹತ್ತಾರು ಎಕರೆ ಬಾಳೆ ತೋಟ ಸಂಪೂರ್ಣ ನಾಶವಾಗಿದೆ.ಒಂದು ಕಡೆ ಲಾಕ ಡೌನ ಇನ್ನೊಂದು ಕಡೆ ಮಳೆಗೆ ಬೆಳೆ ನಾಶದಿಂದ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಇನ್ನೇನೂ ಕೈಗೆ ಬಂತು ಎನ್ನುವಷ್ಟರಲ್ಲಿ ಲಾಕ್ ಡೌನ್ ಜಾರಿಯಾಗಿದೆ ಆಗಿದೆ. ಬೆಳೆ ನಾಶದಿಂದ ಸುಮಾರು ೨೦ ಲಕ್ಷದವರೆಗೆ ನಷ್ಟವನ್ನು ಅನುಭವಿಸಿದ್ದೇವೆ ಎನ್ನುತ್ತಿದ್ದಾರೆ.
ರೈತ ಹಣಮಂತ ಹೂಗಾರ.ವಾಸು ಲಮಾಣಿ ಮತ್ತು ಬಸವರಾಜ ಹೂಗಾರ ಇವರು ೨೦ ಏಕರೆ ಪ್ರದೇಶದಲ್ಲಿ ರಾಜಾಪುರಿ ತಳಿ (ಯಾಲಕ್ಕಿ)ಬಾಳೆ ಬೆಳೆದ ರೈತರು ಲಕ್ಷಾಂತ ರೂಪಾಯಿ ಸಾಲ ಸೂಲಾ ಮಾಡಿ ಬಾಳೆ ಬೆಳೆ ನಾಶದಿಂದ ರೈತರಿಗೆ ಬರಸಿಡಿಲು ಹೊಡೆದಂತೆ ಆಗಿದೆ.

ಲಾಕ್ ಡೌನಗಿಂತ ಮೊದಲು ೩೫ ರೂಪಾಯಿ ಕೆಜಿಗೆ ಕೊಂಡುಕೊಳ್ಳಲು ಬಂದಿದ್ರು ಅಷ್ಟರಲ್ಲ ಲಾಕ ಡೌನ ಜಾರಿಯಾಗಿದೆ.ಈಗ ತೋಟದಲ್ಲಿ ಬಾಳೆ ಗಿಡದಲ್ಲಿ ಹಣ್ಣಾಗಿ ಕೆಟ್ಟು ಹೋಗುತ್ತಿದೆ.ಬೆಂಗಳೂರಿನಿAದ ತಂದು ಇದನ್ನು ನಾಟಿ ಮಾಡಲಾಗಿತ್ತು. ಸಂಬAಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದ್ರು ಯಾರು ಸ್ಪಂದಿಸುತ್ತಿಲ್ಲ . ಬ್ಯಾಂಕಗಳಲ್ಲಿ ಸಾಲ ಪಡೆದು ಈ ಬೆಳೆ ಬೆಳೆಯಲಾಗಿದೆ ಈಗ ತುಂಬಿ ಎಂದು ಕೇಳುತ್ತಿದ್ದಾರೆ ಹೇಗೆ ತುಂಬುವುದು .ಸರಕಾರ ಸೂಕ್ತ ಪರಿಹಾರ ಕೋಡಬೆಕು ಇಲ್ಲದಿದ್ರೆ ನಮಗೆ ನೇಣು ಹಾಕಿಕೋಂಡು ಸಾಯಿಯುವ ಪರಿಸ್ಥಿತಿ ಇದೆ ಎನ್ನುತ್ತಿದ್ದಾರೆ ರೈತ ವಾಸು ಲಮಾಣಿ

ವರದಿ. :ಅರ್ಜುನ ಬಂಡಿವಡ್ಡರ ಬಾಗಲಕೋಟಿ

error: