ಹೊನ್ನಾವರ: ೨೩ ಜಿಲ್ಲೆಗಳ ೩೫ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ, ಕೆಲವು ಖಾಸಗಿ ವೈದ್ಯರಿಗೆ, ಜನೌಷಧಿ ಕೇಂದ್ರಗಳಿಗೆ ಉಚಿತವಾಗಿ ಇಸಿಜಿ ಉಪಕರಣ ಕೊಟ್ಟು ಅವರಿಂದ ಇಸಿಜಿ ವರದಿಯನ್ನು ವಾಟ್ಸಾಪ್‌ನಲ್ಲಿ ತರಿಸಿಕೊಂಡು ತಕ್ಷಣ ಸೂಕ್ತ ಸಲಹೆ ನೀಡುವ ಡಾ. ಪದ್ಮನಾಭ ಕಾಮತ್ ಸಂಚಾಲಕತ್ವದಲ್ಲಿರುವ ಮನೆಬಾಗಿಲಿಗೆ ಹೃದಯ ವೈದ್ಯರು (ಕಾರ್ಡಿಯಾಕ್ ಎಟ್ ಡೋರ್ ಸ್ಟೆಪ್) ಸಂಘಟನೆ ಈಗ ವೈದ್ಯರುಗಳ ಮತ್ತು ಆಸ್ಪತ್ರೆಗಳ ಸಂಪರ್ಕವಿಲ್ಲದ ಕುಗ್ರಾಮಗಳ ಜನರಿಗೆ ಹೃದಯ ಸಲಹೆ ನೀಡಲು ಹೊರಟಿದೆ. ಉತ್ತರ ಕನ್ನಡ ಜಿಲ್ಲೆಯ ೧೦ ಕುಗ್ರಾಮಗಳ ಸಹಿತ ಈ ಸಾಲಿನಲ್ಲಿ ೫೦ಕುಗ್ರಾಮಗಳ ಜನರಿಗೆ ಉಚಿತ ಹೃದಯ ಚಿಕಿತ್ಸೆಯ ಸಲಹೆ ನೀಡಲು ಯೋಚಿಸಿದ್ದೇನೆ ಎಂದು ಡಾ. ಪದ್ಮನಾಭ ಕಾಮತ್ ಉದಯವಾಣಿಯೊಂದಿಗೆ ಮಾತನಾಡುತ್ತ ಹೇಳಿದ್ದಾರೆ.
ವಿಡ್ ಎರಡನೇ ಅಲೆ ಆರಂಭವಾದಾಗ ಅದರಲ್ಲಿ ತೇಲಿಬಂದ ಈ ವಿಚಾರಗಳು ಈ ಯೋಜನೆಗೆ ಚಾಲನೆ ನೀಡಿವೆ. ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಕುಗ್ರಾಮ ಸಾನಕಟ್ಟುವಿನಲ್ಲಿ ೫೦೦-೬೦೦ ಜನಸಂಖ್ಯೆಯಿದೆ. ಅಲ್ಲಿಂದ ೬ಕೀಮೀ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲ, ವೈದ್ಯರೂ ಇಲ್ಲ. ಆ ಊರಿನಲ್ಲಿ ಕೆಲವೇ ತಿಂಗಳಲ್ಲಿ ೪ಮಂದಿ ಸಕಾಲದಲ್ಲಿ ವೈದ್ಯಕೀಯ ಸಲಹೆ ಸಿಗದೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಅಲ್ಲಿಯ ಗ್ರಾಮ ಪಂಚಾಯತದ ಮಾಜಿ ಸದಸ್ಯರೊಬ್ಬರು ಕಾಮತರ ಸಂಪರ್ಕಕ್ಕೆ ಬಂದಾಗ ದೇಶದಲ್ಲಿ ಪ್ರಥಮ ಬಾರಿ ಹೊಸ ವಿಚಾರವನ್ನು ಕಾರ್ಯರೂಪಕ್ಕೆ ತರಲಾಯಿತು. ಆ ಗ್ರಾಮದಲ್ಲಿರುವ ಅಂಗನವಾಡಿಯ ಇಬ್ಬರು ಶಿಕ್ಷಕಿಯರಿಗೆ ಮತ್ತು ಇಬ್ಬರು ಪಂಚಾಯತ ಸದಸ್ಯರಿಗೆ ಇಸಿಜಿ ಅಳೆಯುವ ಕ್ರಮವನ್ನು ಕಲಿಸಿಕೊಟ್ಟು ಉಚಿತವಾಗಿ ಇಸಿಜಿ ಉಪಕರಣವನ್ನು ಸಿಎಡಿ ಒದಗಿಸಿದ ಕಾರಣ ಅಲ್ಲಿಂದ ಹಲವಾರು ಇಸಿಜಿಗಳು ಬರತೊಡಗಿದವು. ಈ ಯಶಸ್ಸಿನ ಕಾರಣ ಇನ್ನೂ ಮೂರು ಕಡೆ ಇಂಥಹದೇ ಹಳ್ಳಿಯಲ್ಲಿ ಇಸಿಜಿ ಉಪಕರಣವನ್ನು ನೀಡಲಾಯಿತು.
ಭಾರತದ ಹಲವು ಹಳ್ಳಿಗಳ ನಾಲ್ಕಾರು ಕೀಮೀ ವ್ಯಾಪ್ತಿಯಲ್ಲಿ ಈಗಲೂ ವೈದ್ಯರಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರವೈ ಇಲ್ಲ, ಇದ್ದರೂ ಅಲ್ಲಿ ನುರಿತ ವೈದ್ಯರಿಲ್ಲ, ವಾಹನ ಸಂಪರ್ಕವೂ ಇಲ್ಲಪೀಗ ಹೊಸದಾಗಿ ಆಸ್ಪತ್ರೆ ಆರಂಭಿಸುವ ಪರಿಸ್ಥಿತಿ ಎಲ್ಲೂ ಇಲ್ಲ, ಆರಮಭಿಸಿದರೂ ವೈದ್ಯರು ಸಿಗುವುದಿಲ್ಲ. ಇಂಥಹ ಪರಿಸ್ಥಿತಿಯಲ್ಲಿ ಹೃದಯಾಘಾತದ ಲಕ್ಷಣ ಕಂಡುಬAದರೆ ನಾಲ್ಕಾರು ಕೀಮೀ ದೂರ ಹೋಗುವಷ್ಟರಲ್ಲಿ ಆತ ಮೃತಪಟ್ಟಿರುತ್ತಾನೆ. ಈ ಕಹಿ ಸತ್ಯವನ್ನು ಅಧ್ಯಯನ ಮಾಡಿದ ಡಾ. ಕಾಮತ್ ಇಂಥಹ ಊರಿನಲ್ಲಿ ಗ್ರಾಮ ಪಂಚಾಯತ ಮತ್ತು ಅಂಗನವಾಡಿ ಇರುವುದನ್ನು ತಿಳಿದು ಇಂಥಹ ಊರುಗಳಲ್ಲಿ ಇಸಿಜಿ ಉಪಕರಣ ನೀಡಿ, ತರಬೇತಿ ನೀಡಿ ವಾಟ್ಸಾಪ್ ಮೂಲಕ ವರದಿ ತರಿಸಿಕೊಂಡು ಸಲಹೆ ನೀಡಲು ತೀರ್ಮಾನಿಸಿದ್ದೇನೆ. ಯಾವ ಪಂಚಾಯತಕ್ಕೆ ಇದರ ಅಗತ್ಯವಿದೆ ಎಂಬುದನ್ನು ಅವರೇ ಮುಂದೆ ಬಂದು ತಿಳಿಸಬೇಕು ಮತ್ತು ಅಂಗನವಾಡಿಯ ಶಿಕ್ಷಕಿ ಅಥವಾ ಸಹಾಯಕಿಯ ನೆರವಿನಿಂದ ಹೃದಯಸಮಸ್ಯೆ ಉಂಟಾದವರು ಬಂದಕೂಡಲೇ ಇಸಿಜಿ ತೆಗೆದು ಕಳಿಸುವ ವ್ಯವಸ್ಥೆ ಮಾಡಲು ಒಪ್ಪಿದರೆ ಅವರಿಗೆ ಉಪಕರಣ ಒದಗಿಸುವುದಾಗಿ ಡಾ. ಕಾಮತ್ ಹೇಳಿದ್ದಾರೆ.
ಡಾ. ಪದ್ಮನಾಭ ಕಾಮತ್
ಮಂಗಳೂರು ಕೆಎಂಸಿಯಲ್ಲಿ ಹೃದಯ ವಿಭಾಗದ ಮುಖ್ಯಸ್ಥರಾಗಿರುವ ಡಾ. ಪದ್ಮನಾಭ ಕಾಮತ್ ಯಕ್ಷಗಾನ ಪ್ರಿಯರು. ಆಟಕ್ಕೆ ಹೋದಾಗ ಅಪರಾತ್ರಿಯಲ್ಲಿ ಹೃದಯ ಬೇನೆ ಬಂದು ಸೌಲಭ್ಯಗಳಿಲ್ಲದೇ ಒದ್ದಾಡಿ ಆಸ್ಪತ್ರೆಗೆ ತಲುಪಲು ವಿಳಂಬವಾಗಿ ಪ್ರಾಣಬಿಡುವುದನ್ನು ಕಣ್ಣಾರೆ ಕಂಡು ಇದಕ್ಕೆ ಪರಿಹಾರ ರೂಪವಾಗಿ ಕಾಮತರು ರೂಪಿಸಿದ ಕಾರ್ಡಿಯಾಕ್ ಎಟ್ ಡೋರ್ ಸ್ಟೆಪ್ ಜನಪ್ರಿಯವಾಗಿದೆ. ಯಾವ ಟೀಕೆ, ಟಿಪ್ಪಣೆಗಳಿಗೂ ತಲೆಕೆಡಿಸದೆ ಮುಂದುವರಿದ ಡಾ. ಕಾಮತ್ ಅವರ ಸೇವೆಯನ್ನು ಇತ್ತೀಚಿಗೆ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮುಕ್ತಕಂಠದಿAದ ಪ್ರಶಂಸಿರುವುದನ್ನು ಇಲ್ಲಿ ಸ್ಮರಿಸಬಹುದು. ಇದರಿಂದ ಸಂತೋಷಗೊAಡ ಡಾ. ಕಾಮತ್ ತಮ್ಮ ನಿತ್ಯದ ರೋಗಿಗಳ ತಪಾಸಣೆ, ಕ್ಯಾಥ್ ಲ್ಯಾಬ್ ಕೆಲಸಗಳ ಮಧ್ಯೆಯೂ ಸಹ ಮೊಬೈಲನ್ನು ಚಾಲು ಇಟ್ಟುಕೊಂಡು ಬರುವ ಇಸಿಜಿ ವರದಿಗಳಿಗೆ ಗಂಭೀರವಾಗಿದೆ ಅಥವಾ ಇಲ್ಲ, ತಕ್ಷಣ ಆಸ್ಪತ್ರೆಗಳಿಗೆ ಹೋಗಬೇಕೋ-ಬೇಡವೋ, ವೈದ್ಯರು ಕಳಿಸಿದ ಇಸಿಜಿಯಾಗಿದ್ದರೆ ತಕ್ಷಣ ಕೆಲವು ಔಷಧಗಳನ್ನು ಸೂಚಿಸುತ್ತಾ ಬಂದಿರುವುದರಿAದ ಈ ಕಾರ್ಯವನ್ನು ಕೋವಿಡ್ ಮೊದಲನೇ ಅಲೆಯಲ್ಲಿಯೂ ಎಲ್ಲ ನಿರ್ಬಂಧಗಳಿದ್ದರೂ ಮುಂದುವರಿಸಿ ರೋಗಿಗಳನ್ನು ತಲುಪಿದ್ದಲ್ಲದೇ ಎರಡನೇ ಅಲೆ ತಂದ ಹೊಸ ವಿಚಾರದಿಂದ ಕುಗ್ರಾಮಗಳಿಗೆ ಹೊರಟಿದ್ದಾರೆ. ಸಿಎಡಿ ಈವರೆಗೆ ನೂರಾರು ಅಮೂಲ್ಯ ಜೀವಗಳನ್ನು ಉಳಿಸಿದೆ. ಉತ್ತರ ಕನ್ನಡ ಜಿಲ್ಲೆಯ ಯಾವುದೇ ಪಂಚಾಯತಕ್ಕೆ ಈ ನೆರವು ಅಗತ್ಯವಿದ್ದರೆ ಸಂಪರ್ಕಿಸಬಹುದು.
ವರದಿ ; ಜಿ.ಯು.ಭಟ್ಟ, ಹೊನ್ನಾವರ
More Stories
ನಿತ್ಯ ಅಪ್ಪನ ದಿನಾಚರಣೆ ಮತ್ತು ಮಕ್ಕಳು
ಪುನಃ ಕೊನೆಗೌಡರತ್ತ ಒಲವು ತೋರುತ್ತಿರುವ ಕೃಷಿಕರು
ಅಸ್ತಂಗತನಾದ ತಬಲಾಸೂರ್ಯ ಶ್ರೀ ಎನ್. ಎಸ್. ಹೆಗಡೆ ಹಿರೇಮಕ್ಕಿ.