May 3, 2024

Bhavana Tv

Its Your Channel

ಪಡಿತರ ಅಂಗಡಿಯಲ್ಲಿ ವಿತರಣೆಯಾದ ಬೆಳ್ತಿಗೆ ಅಕ್ಕಿಯಲ್ಲಿ ಕಲಬೇರಕೆ ಪ್ಲಾಸ್ಟಿಕ್ ಅಕ್ಕಿ ?

ಬೆಳ್ಮಣ್: ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಿಗೆ ನೀಡಲಾಗಿರುವ ಬೆಳ್ತಿಗೆ ಅಕ್ಕಿಯಲ್ಲಿ ಕಲಬೇರಕೆ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ.
ರಾಜ್ಯ ಸರಕಾರದ ಆಹಾರ ಇಲಾಖೆ ಮೂಲಕ ವಿತರಣೆಯಾಗುವ ಅಕ್ಕಿ ಬಹಳಷ್ಟು ಸಲ ಕಲಬೆರಕೆಯಿಂದ ಕೂಡಿರುವುದು ರಾಜ್ಯದ ಅಲ್ಲಲ್ಲಿ ಪತ್ತೆಯಾಗಿರುವ ಬೆನ್ನಲ್ಲೇ ಇದೀಗ ಕಾರ್ಕಳ ತಾಲೂಕಿನ ಬೆಳ್ಮಣ್ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಿಗೆ ನೀಡಲಾಗಿರುವ ಬೆಳ್ತಿಗೆ ಅಕ್ಕಿಯಲ್ಲಿ ಮಿರಿ ಮಿರಿ ಮಿಂಚುವ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ. ಈ ಅಕ್ಕಿ ನೋಡಿದ ಗ್ರಾಮಸ್ಥರು ಕಂಗಾಲಾಗಿ ಗ್ರಾಮ ಪಂಚಾಯತ್‌ಗೆ ದೂರು ನೀಡಿದ್ದಾರೆ. ಅವರಿಗೆ ನೀಡಿದ ಅಕ್ಕಿಯನ್ನು ಪರಿಶೀಲಿಸಿದಾಗ ಅದು ಪ್ಲಾಸ್ಟಿಕ್ ಅಕ್ಕಿಯೇ ಇರಬಹುದು ಎನ್ನುವ ಅನುಮಾನ ಸ್ಪಷ್ಟವಾಗಿದೆ.

ಗ್ರಾಮ ಪಂಚಾಯತ್ ಈ ಕುರಿತು ಕಾರ್ಕಳದ ಪಡಿತರ ಮುಖ್ಯ ಕೇಂದ್ರಕ್ಕೆ ಹಾಗೂ ಆಹಾರ ಇಲಾಖೆಯ ಅಧಿಕಾರಿಗೆ ತಿಳಿಸಿದ ಪರಿಣಾಮ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಈ ಕುರಿತು ಪರಿಶೀಲನೆ ಆರಂಭಿಸಿದ್ದಾರೆ ಎಂದು ಬೆಳ್ಮಣ್ ವ್ಯವಸಾಯ ಸೇವಾ  ಸಹಕಾರಿ ಸಂಘದ  ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹೇಳಿದ್ದಾರೆ. ಅಲ್ಲದೇ ಈಗಾಗಲೇ ಅಕ್ಕಿಯನ್ನು ಕೊಂಡೋಗಿರುವ ಗ್ರಾಹಕರಿಗೆ ವಾಪಸ್ಸು ನೀಡುವಂತೆ ತಿಳಿಸಿಲಾಗಿದೆ ಎಂದರು.

ಆದರೆ ಈಗಾಗಲೇ ಇಲಾಖೆಯ ಬೇಜವಾಬ್ದಾರಿಯಿಂದ ಕಲಬೆರಕೆ ಪ್ಲಾಸ್ಟಿಕ್ ಅಕ್ಕಿ ಪಡೆದವರು ಮಾತ್ರ ಕಲಬೆರಕೆ ಅಕ್ಕಿ ಬೇಯಿಸಲಾಗದೇ ನಾವು ಈ ಪ್ಲಾಸ್ಟಿಕ್ ಅಕ್ಕಿ ತಿಂದು ಸಾಯಬೇಕೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಹಾರ ಇಲಾಖೆಯ ಕಳಪೆ ಪಡಿತರ ಪೂರೈಕೆ ಬಗ್ಗೆ ಇನ್ನಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ.

ವರದಿ ; ಅರುಣ ಭಟ್, ಕಾರ್ಕಳ

error: