December 21, 2024

Bhavana Tv

Its Your Channel

ಚಿಕ್ಕ ಮಕ್ಕಳಿಗೆ ಆರೋಗ್ಯ ಕಿಟ್ ವಿತರಣೆ ಮಾಡಿದ ರಕ್ಷಿತಾ ಈಟಿ.

ಇಳಕಲ್ ; ಬಾಗಲಕೋಟೆ ವಿದ್ಯಾಗಿರಿ ಬಡಾವಣೆಯ ಮನೆಕೆಲಸ ಮಾಡುವ ಬಡಜನರ ಮಕ್ಕಳಿಗೆ ಕೊರೋನಾ ಸಂದರ್ಭದಲ್ಲಿ ಬೇಕಾಗುತ್ತಿರುವ ಚಿಕ್ಕಮಕ್ಕಳ ಆರೋಗ್ಯ ಕಿಟ್ ಗಳನ್ನು( ಮಾಸ್ಕ್ ,ಸ್ಯಾನಿಟೈಸರ್, ಹಾಲಿನ ಪಾಕೆಟ್, ವಿಟಮಿನ್ ಸಿ ಟ್ಯಾಬ್ಲೆಟ್, ಕೆಮ್ಮಿನ ಔಷಧಿ ,ಮಲ್ಟಿ ವಿಟಾಮಿನ್ ಸಿರೆಪ್ ಮತ್ತು ಬಿಸ್ಕೆಟ್ ಗಳು ) ರಾಜ್ಯ ಮಹಿಳಾ ಕಾಂಗ್ರೆಸ್ ಆದೇಶದ ಮೇರೆಗೆ ಬಾಗಲಕೋಟ ಜಿಲ್ಲಾ ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿ ಅವರು ಚಿಕ್ಕಮಕ್ಕಳಿಗೆ ಮಾಸ್ಕ ತೊಡಿಸಿ ಕಿಟ್ ಗಳನ್ನು ವಿತರಿಸಿ, ಮಕ್ಕಳಿಗೆ ಮಹಾಮಾರಿ ಕೊರೋನಾ ರೋಗದಿಂದ ಯಾವ ರೀತಿ ಜಾಗೃತರಾಗಿರಬೇಕು ಎಂದು ತಿಳಿಸಿ ಕೋವಿಡ್ ನಿಯಮವನ್ನು ಪಾಲಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಬಾಗಲಕೋಟ ನಗರ ಘಟಕದ ಮಹಿಳಾ ಅಧ್ಯಕ್ಷೆ ರೇಣುಕಾ ನ್ಯಾಮಗೌಡರ್ , ಕಲಾವತಿ ಕಮತೆ ಮತ್ತು ಜಯಶ್ರೀ ಗುಳಬಾಳ ಉಪಸ್ಥಿತರಿದ್ದರು .

ವರದಿ : ವಿನೋದ.ಬಾರಿಗಿಡದ, ಬಾಗಲಕೋಟೆ

error: