December 21, 2024

Bhavana Tv

Its Your Channel

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ

ಬಾಗಲಕೋಟೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ.ಲಕ್ಷ್ಮಣ. ಹಟ್ಟಿ ಇವರಿಂದ ಪರೀಕ್ಷಾ ವಿಧ್ಯಾರ್ಥಿಗಳಿಗೆ ಉಚಿತ ಮಾಸ್ಕ್ ಮತ್ತು ಸ್ಯಾನಿಟೈಸರ್ ಪೆನ್ನು ಬಿಸ್ಕೆಟ್ ವಿತರಣೆ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮುತ್ತಲ ಗೇರಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಮೂರು ಎಸ್.ಎಸ್. ಎಲ್.ಸಿ. ಪರೀಕ್ಷಾ ಕೇಂದ್ರಗಳಾದ ಕುಳಗೇರಿಯಲ್ಲಿ ೧೯೮ ಮಕ್ಕಳು ಮುತ್ತಲ ಗೇರಿಯಲ್ಲಿ ೧೮೦ ಮಕ್ಕಳು ಹಾಗೂ ಹೆಬ್ಬಳ್ಳಿ ಯ ೧೬೦ ಮಕ್ಕಳು ಒಟ್ಟು ೩ ಕೇಂದ್ರಗಳಲ್ಲಿ ಸುಮಾರು ೫೩೮ ಎಸ್.ಎಸ್.ಎಲ್.ಸಿ.ಮಕ್ಕಳಿಗೆ ದಿವಂಗತ ಲಕ್ಷ್ಮಣ.ಯಲ್ಲಪ್ಪ. ಹಟ್ಟಿ ಶಿಕ್ಷಣ ಸೇವಾ ಟ್ರಸ್ಟ್ ಹಾಗೂ ಜಗದೀಶ, ಮಹಾಂತೇಶ, ಅಶೋಕ ಹಾಗೂ ಅನಿವಾಸಿ ಭಾರತೀಯ ಅಶೋಕ ಹಟ್ಟಿ ಬಳಗದಿಂದ ಎಲ್ಲ ಎಸ್. ಎಸ್. ಎಲ್. ಸಿ.ಮಕ್ಕಳಿಗೆ ಬೆಳಿಗ್ಗೆ ೮ರಿಂದ ೧೦ ಗಂಟೆ ಒಳಗಾಗಿ ಉಚಿತ ಮಾಸ್ಕ್ ಸ್ಯಾನಿಟೈಸರ್ ಪೆನ್ನು, ಹಾಗೂ ಬಿಸ್ಕೆಟ್ ಗಳನ್ನೂ ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಯೇ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರುಗಳಾದ ಮಹಾಂತೇಶ ಲಕ್ಷ್ಮಣ ಹಟ್ಟಿ ಪರೀಕ್ಷಾ ಕೇಂದ್ರಗಳ ಶಿಕ್ಷಕರು ಕೂಡ ಉಪಸ್ಥಿತರಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: