December 21, 2024

Bhavana Tv

Its Your Channel

ವಿದ್ಯಾರ್ಥಿಗಳ ಜೀವನದಲ್ಲಿ ಆಟ ಆಡುತ್ತಿರುವ ಸರ್ಕಾರ ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು

ಸಾವಳಗಿ: ಹೌದು ಈಗ ತಾನೇ ಕರೋನ ಸಮಯದಲ್ಲಿ ಎಸ್.ಎಸ್.ಎಲ್ ಸಿ ಪರೀಕ್ಷೆ ಬರೆದು ಪಾಸ ಆದ ವಿಧ್ಯಾರ್ಥಿಗಳು ಮುಂದಿನ ವಿಧ್ಯಾಬ್ಯಾಸಕ್ಕಾಗಿ ಅಲೆದಾಡುವಂತಾಗಿದೆ.
ಇಲ್ಲಿನ ಬಿ ಎಲ್ ಡಿ ಇ ಸಂಸ್ಥೆಯ ಪದವಿ ಪೂರ್ವ ಕಾಲೇಜಿನಲ್ಲಿ ಸರ್ಕಾರದ ನಿಯಮಗಳ ಪ್ರಕಾರ ಈಗಾಗಲೇ ವಿದ್ಯಾರ್ಥಿಗಳನ್ನು ಬಿ ಎಲ್ ಡಿ ಇ ಪದವಿ ಪೂರ್ವ ಕಾಲೇಜಿನಲ್ಲಿ ಪ್ರವೇಶವನ್ನು ತೆಗೆದುಕೊಂಡಿದ್ದಾರೆ.
ಇಷ್ಟೆಲ್ಲಾ ವಿದ್ಯಾರ್ಥಿಗಳ ಪ್ರವೇಶವನ್ನು ತೆಗೆದುಕೂಂಡಿದ್ದರು ಕೂಡಾ ಅತಿ ಹೆಚ್ಚು ವಿದ್ಯಾರ್ಥಿಗಳು ಸಾವಳಗಿಯ ಬಿ ಎಲ್ ಡಿ ಇ ಕಾಲೇಜಿಗೆ ಪ್ರವೇಶಕ್ಕಾಗಿ ಬರುತ್ತಿದ್ದಾರೆ. ಇದನ್ನು ಅರಿತು ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಪ್ರಭಾರಿ ಪ್ರಾಚಾರ್ಯರಾದ ಎಸ ಎ ಜಿರಗಾಳಿ ಈಗಾಗಲೇ ಕಲಾ ವಿಭಾಗದಲ್ಲಿ ಎಲ್ಲಾ ಸೀಟುಗಳು ಭರ್ತಿ ಆಗಿದ್ದು ವಾಣಿಜ್ಯ ವಿಭಾಗದಲ್ಲಿ ಇನ್ನೂ ಕೆಲವು ಸೀಟುಗಳು ಲಭ್ಯವಿವೆ ಆದರೆ ಇಲ್ಲಿ ಬರುವ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು ಕಲಾ ವಿಭಾಗಕ್ಕೆ ಪ್ರವೇಶ ಬಯಸಿ ಬರುತ್ತಿದ್ದಾರೆ ನಾವು ಸರ್ಕಾರದ ನಿಯಮಗಳ ಪ್ರಕಾರ ಸೀಟುಗಳನ್ನು ತುಂಬಿಕೊAಡಿದ್ದೇವೆ ಮಾನ್ಯ ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಇವರಿಗೆ ನಾವು ಮತ್ತು ನಮ್ಮ ಆಡಳಿತ ಮಂಡಳಿಯ ಪರವಾಗಿ ಹೆಚ್ಚುವರಿ ಸೀಟುಗಳನ್ನು ನಮ್ಮ ಕಾಲೇಜಿಗೆ ಕೊಡಬೇಕು ಅಂತಾ ಮನವಿ ಸಲ್ಲಿಸಿದ್ದೆವೆ. ನಮ್ಮ ಕಾಲೇಜಿಗೆ ಹೆಚ್ಚುವರಿ ಸೀಟುಗಳನ್ನು ನೀಡಿದರೆ ನಾವು ಮತ್ತು ನಮ್ಮ ಆಡಳಿತ ಮಂಡಳಿಯವರು ಎಲ್ಲಾ ರೀತಿಯಲ್ಲಿ ಮೂಲಭೂತ ಸೌಕರ್ಯಗಳ ಜೊತೆ ನಾವು ಹೆಚ್ಚುವರಿ ಸೀಟುಗಳನ್ನು ತುಂಬಿಕೂಳ್ಳಲು ಸಿದ್ದರಿದ್ದೇವೆ ಎಂದು ಹೇಳಿದರು.

ಇದೆ ವೇಳೆ ಮಾಧ್ಯಮದವರು ಪ್ರವೇಶವನ್ನು ಪಡೆಯಲು ಬಂದ ವಿದ್ಯಾರ್ಥಿಯನ್ನು ಮಾತನಾಡಿಸಿದಾಗ ನಾಲ್ಕು ದಿನಗಳಿಂದ ಅಲೆದಾಡುತ್ತಿದ್ದೇವೆ ಇನ್ನು ನಮಗೆ ಕಾಲೇಜಿನಲ್ಲಿ ಪ್ರವೇಶ ಸಿಕ್ಕಿಲ್ಲ ದಯವಿಟ್ಟು ಸರ್ಕಾರ ಅಥವಾ ಸಂಬAಧಿಸಿದ ಅಧಿಕಾರಿಗಳು ಇತ್ತ ಕಡೆ ಗಮನ ಕೊಟ್ಟು ನಮ್ಮ ಮುಂದಿನ ವಿಧ್ಯಾಭ್ಯಾಸಕ್ಕೆ ಅನುಕೂಲ ಮಾಡಿ ಕೊಡಬೇಕು ನಮ್ಮೂರಿನ ಕಾಲೇಜಿಗೆ ಹೆಚ್ಚುವರಿ ಸೀಟುಗಳನ್ನು ಕೊಡಬೇಕು ಎಂದು ಹೇಳಿದರು.

ಏನೆ ಇರಲಿ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಸರ್ಕಾರವಾಗಲಿ ಸಚಿವರಾಗಲಿ ಅಥವಾ ಜಿಲ್ಲಾ ಉಪನಿರ್ದೇಶಕರಾಗಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಜೀವನಕ್ಕೆ ದಾರಿ ಮಾಡಿಕೊಡಲಿ ಎಂದು ಪ್ರಜ್ಞಾವಂತರ ಆಗ್ರಹವಾಗಿದೆ.

ವರದಿ: ಕಿರಣ ಸೂರಗೂಂಡ ಸಾವಳಗಿ

error: