May 15, 2024

Bhavana Tv

Its Your Channel

ಕೊಟ್ಟ ಮಾತಿನಂತೆ ಗ್ರಾಮದ ಅಭಿವೃದ್ದಿ ಕೆಲಸ ಮಾಡುವ ಯುವ ನಾಯಕ ಮರೆಪ್ಪ ಗಿರಣಿವಡ್ಡರ

ಪಡನೂರು: ಭೀಮಾ ತೀರ ಎಂಬುವದು ರಕ್ತಸಿಕ್ತ ಚರಿತ್ರೆಗೆ ಕಾರಣವಾಗದೆ ಅನೇಕ ಮಹಾನ ಸಂತರು, ದಾರ್ಶನಿಕರು ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಸರು ವಾಸಿಯಾಗಿದ್ದು. ಇಲ್ಲಿ ಅನೇಕ ರಾಜಕೀಯ ನಾಯಕರುಗಳ ಬೆಳೆವಣಿಗೆಗೆ ಕಾರಣವಾಗಿದೆ ಈ ಇಂತಹ ನಾಯಕರುಗಳ ಸಾಲಿಗೆ ಈಗ ಮತ್ತೋಬ್ಬರ ಹೆಸರು ಸೇರ್ಪಡೆಯಾಗುವದು ತಡವಿಲ್ಲ ಎನ್ನಲಾಗುತ್ತದೆ. ಅದೇ ಇಂಡಿ ತಾಲ್ಲೂಕಿನ ಪಡನೂರ ಗ್ರಾಮದ ಯುವ ಮುಖಂಡ ಹಾಗೂ ಭೋವಿ ಸಮುದಾಯದ ರಾಜ್ಯ ಉಪಾಧ್ಯಕ್ಷರಾದ ಮರೆಪ್ಪ ಗಿರಣಿವಡ್ಡರ.

ಚುನಾವಣೆ ಸಂಧರ್ಭದಲ್ಲಿ ನಾನಾ ಆಶ್ವಾಸನೆ ನೀಡಿ ಗೆದ್ದು ಬಂದ್ ನಂತರ ಅವುಗಳನ್ನು ಗಾಳಿಗೆ ತೋರಿದ ಎಷ್ಟೋ ನಾಯಕರುಗಳನ್ನು ನೋಡಿದಿರಿ ಆದರೆ ತಮ್ಮ ಧರ್ಮಪತ್ನಿಯವರು ಪಡನೂರ ಗ್ರಾಮ ಪಂಚಾಯತಿ ಚುನಾವಣೆ ನಿಲ್ಲಿಸುವಾಗ ನಾನಾ ರೀತಿಯ ಆಶ್ವಾಸನೆಗಳನ್ನು ನೀಡಿದರು. ಚುನಾವಣೆ ಗೆದ್ದು ನಂತರ ಅವರ ಅದೃಷ್ಟಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷ ಗಿರಿಯ ಸ್ಥಾನ ಒಲಿದು ಬಂತು. ಇವತ್ತು ಚುನಾವಣೆ ಸಂಧರ್ಭದಲ್ಲಿ ನೀಡಿದ ಆಶ್ವಾಸನೆಗಳಲ್ಲಿ ಅಧಿಕಾರ ಸ್ವೀಕರಿಸಿದ ಕೇಲವೇ ದಿನಗಳಲ್ಲಿ ಈಡೇರಿಸಿ ಮಾದರಿ ನಾಯಕರಾಗಿದ್ದಾರೇ. ತಮ್ಮ ವಾರ್ಡಿನ ಜನರಿಗೆ ಉಚಿತವಾಗಿ ಹಿಟ್ಟಿನ ಗಿರಣಿ ಬೀಸುವ ವ್ಯವಸ್ಥೆ ಮಾಡಿದ್ದಾರೆ. ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಂತರ ಗ್ರಾಮದ ನಾಲ್ಕೈದು ಕಡೆ ಉಚಿತ ಹಿಟ್ಟಿನ ಗಿರಣಿ ಸ್ಥಾಪಿಸಿ ಗ್ರಾಮದ ಜನತೇ ಪ್ರೀತಿ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೇ ಗ್ರಾಮದಲ್ಲಿ ಬಸ್ಸ್ ನಿಲ್ದಾಣ , ಸಾಮೂಹಿಕ ಶೌಚಾಲಯ, ಸಾರ್ವಜನಿಕ ಸ್ಮಶಾನ, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯ ಮತ್ತು ಗ್ರಾಮದಲ್ಲಿ ಎಲ್ಲಾ ಕಾಲೋನಿಯಲ್ಲಿ ಸಿ.ಸಿ ಹಾಕುವ ಕೆಲಸಗಳು ಪ್ರಾರಂಭವಾಗಿವೆ ಇದರಲ್ಲಿ ಒಬ್ಬ ದಾನಿಗಳಿಂದ ಹಾಗೂ ಅವರ ಸ್ವಂತ ದುಡ್ಡಿನಿಂದ ಗ್ರಾಮದ ಸ್ಮಶಾನ ಜಾಗ ಖರೀದಿ ಮಾಡಲಿದ್ದಾರೆ. ಈಗಾಗಲೇ ತಮ್ಮ ಸ್ವಂತ ದುಡ್ಡಿನಿಂದ ಗ್ರಾಮದ ಕೆಲವು ಕಡೆ ಸಿ.ಸಿ ರಸ್ತೆಗಳನ್ನು ಹಾಗೂ ಬೀದಿ ದ್ವೀಪಗಳನ್ನು ಹಾಕಿಸಿದ್ದು ಇನ್ನೂ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುವ ಇಚ್ಚೇಯನ್ನು ಹೊಂದಿದ್ದಾರೆ. ಇವತ್ತು ಇಂತಹ ಉತ್ಸಾಹಿ ನಾಯಕರ ಹುಟ್ಟಿದ್ದು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳೊಂದಿಗೆ ಅವರ ಮುಂದಿನ ರಾಜಕೀಯ ಬದುಕು ಯಶಸ್ವಿಯಾಗಲಿ ಎಂದು ಆಶೀಸೋನಾ ಇನ್ನೂ ಸಕ್ರೀಯವಾಗಿರುವ ನಾಯಕರನ್ನು ಮತದಾರ ಪ್ರಭುಗಳು ಜಿಲ್ಲಾ ಪಂಚಾಯತಗೆ ಆಯ್ಕೇ ಮಾಡುವ ಮೂಲಕ ಇನ್ನೂ ಊರಿನ ಅಭಿವೃದ್ದಿಗೆ ನಾಂದಿ ಹಾಡಬೇಕಾಗಿದೆ.

ವರದಿ ಕಿರಣ ಸೂರಗೂಂಡ ಸಾವಳಗಿ

error: