ಬಾಗಲಕೋಟೆ: ದೇಶದಲ್ಲಿ ಕೊರೋನಾ ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ನೇಕಾರಿಕೆಗೆ ನಿತ್ಯ ಬಳಕೆಯಾಗುವ ಕಚ್ಚಾಮಾಲೂ ಕೂಡ ನಿಂತುಹೋಗಿದ್ದರಿoದ ನೇಕಾರರ ಬದುಕು ಕೂಡ ಚಿಂತಾಜನಕ ಸ್ಥತಿಯಲ್ಲಿದೆ.
ಜಿಲ್ಲೆಯ ತೇರದಾಳ,ಮಹಾಲಿಂಗಪುರ,ರಬಕವಿ-ಬನಹಟ್ಟಿ, ಅಮೀನಗಡ,ಗುಳೇದಗುಡ್ಡ,ಇಳಕಲ್, ಕಮತಗಿ ಸೇರಿದಂತೆ ಜಿಲ್ಲೆಯಲ್ಲಿ ಸುಮಾರು ೨ ಲಕ್ಷಕ್ಕೂ ಹೆಚ್ಚು ಜನ ನೇಕಾರರ ಇದ್ದಾರೆ.ಬಹುತೇಕ ನೇಕಾರರು ನಿತ್ಯ ದುಡಿದು ಜೀವನ ಸಾಗಿಸುವವರೇ ಹೆಚ್ಚಾಗಿದ್ದಾರೆ.ಮನೆಯಲ್ಲಿಯೇ ಮಗ್ಗಗಳನ್ನು ಇಟ್ಟುಕೊಂಡು ನೇಕಾರಿಕೆಯಲ್ಲಿ ನಿರತರಾಗಿರುವ ಕುಟುಂಬಗಳು ಈಗ ಲಾಕ್‌ಡೌಕ್‌ದಿಂದ ತಮ್ಮ ಜೀವನ ಸಾಗಿಸುವುದು ಹೇಗೆ ಎಂಬ ಆತಂಕದಲ್ಲೇ ದಿನ ದೂಡುವಂತಹ ಸ್ಥಿತಿಯಲ್ಲಿದ್ದಾರೆ.
ಮಾರ್ಚ್,ಎಪ್ರೀಲ್,ಮೇ ತಿಂಗಳಲ್ಲಿ ಹೆಚ್ಚು ಮದುವೆ ಸಮಾರಂಭಗಳು ನಡೆಯುತ್ತವೆ.ಈ ಸಮಯದಲ್ಲಿ ಹೆಚ್ಚು ಸೀರೆ,ಖಣ ಮಾರಾಟವಾಗುವುದು ಆದರೆ ಈಗ ಇದೇ ಸಂದರ್ಭದಲ್ಲಿ ಲಾಕ್‌ಡೌನ್ ಆಗಿದ್ದರಿಂದ ಯಾವುದೇ ನೇಕಾರರು ತಮ್ಮ ವೃತ್ತಿಯನ್ನು ನಡೆಸದಂತಹ ಸ್ಥಿತಿಯಲ್ಲಿದ್ದಾರೆ.
ನೇಕಾರಿಕೆಗೆ ಮೂಲ ಕಚ್ಚಾಮಾಲು ಬೇಕು.ಈಗ ದೇಶದಲ್ಲಿ ಸಾರಿಗೆ ಸಂಪರ್ಕವೂ ಕಡಿತವಾಗಿದೆ.ಬಾಗಲಕೋಟೆ ಜಿಲ್ಲೆಗೆ ಬಹುತೇಕ ಕಚ್ಚಾಮಾಲೂ ಬೆಳಗಾವಿಯಿಂದ ಸರಬರಾಜು ಆಗುತ್ತಿತ್ತು ಇದು ಕೂಡ ನಿಂತು ಹೋಗಿದೆ.ಈಗ ನೇಯ್ದ ಸೀರೆಗಳನ್ನು ಸಹ ಕೊಂಡೊಯ್ಯಲು ಸಹ ಮಾಲು ಕೊಟ್ಟವರು ಬರದಂತಹ ಸಮಯವಾಗಿದೆ. ಹೀಗಾಗಿ ನೇಯ್ದಂತ ಸೀರೆ,ಖಣ ನೇಕಾರರ ಮನೆಯಲ್ಲಿಯೇ ಇದೆ. ಸೀರೆ,ಖಣಗಳು ಹೆಚ್ಚಾಗಿ ಜಿಲ್ಲೆಯಿಂದ ಮಹಾರಾಷ್ಟ್ರ ಹಾಗೂ ದೂರದ ರಾಜ್ಯಗಳಿಗೆ ಸರಬರಾಜು ಆಗುತ್ತಿತ್ತು ಈಗ ಅದು ಕೂಡ ನಿಂತು ಹೋಗಿದೆ.
ನೇಕಾರರೆಲ್ಲರಿಗೂ ಉಜ್ವಲ್ ಯೋಜನೆ ಇಲ್ಲ ಕೆಲವೊಂದು ಜನರಿಗೆ ಮಾತ್ರ ಇದೆ.ಹೀಗಾಗಿ ಗ್ಯಾಸ್ ತೆಗೆದುಕೊಳ್ಳಲು ಸಹ ಬಡ ನೇಕಾರರಿಗೆ ಮುಂದಿನ ತಿಂಗಳಿAದ ಸಾಧ್ಯವಾಗುವುದಿಲ್ಲ.ವಿದ್ಯುತ್ ಬಿಲ್ ಕಟ್ಟಲು ಸಹ ದುಡ್ಡಿಲ್ಲ.ಇದಲ್ಲದೇ ಎಲ್ಲರಿಗೂ ಜನಧನ್ ಖಾತೆ ಇಲ್ಲ ಹೀಗಾಗಿ ಕೇಂದ್ರ ಸರ್ಕಾರದ ೫೦೦ ರೂ. ಕೂಡ ಲಭಿಸುವುದಿಲ್ಲ.ಹೀಗಾಗಿ ನೇಕಾರರು ತುಂಬಾ ಕಷ್ಟದಲ್ಲಿದ್ದಾರೆ ಎಂದು ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟರಕಿ ತಿಳಿಸಿದ್ದಾರೆ.
ಲಾಕ್‌ಡೌನ್ ಮುಂದುವರೆದರೆ ತಿಂಗಳಿಗೆ ನೇಕಾರರು ಬದುಕು ಸಾಗಿಸಲು ತಿಂಗಳಿಗೆ ಉಪಜೀವನಕ್ಕಾಗಿ ನೇಕಾರ ಕುಟುಂಬಕ್ಕೆ ರೂ.೫೦೦೦ ಹಾಗೂ ಪ್ರತಿ ಮಗ್ಗಕ್ಕೆ ದುಡಿಯುವ ಬಂಡವಾಳಕ್ಕೆ ೫೦,೦೦೦ ಸರ್ಕಾರ ನೀಡಬೇಕು.ಇಲ್ಲದವಾದರೆ ನೇಕಾರರು ಉಪಜೀವನ ಮಾಡುವುದೇ ಕಷ್ಟಮಯವಾಗಲಿದೆ ಎಂದು ತಿಳಿಸುತ್ತಾರೆ.
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ