April 25, 2024

Bhavana Tv

Its Your Channel

ಸಾರ್ವಜನಿಕರ ಪಡಿತರ ಚೀಟಿಗೆ ಎರಡು ತಿಂಗಳ ಪಡಿತರ ದಾನ್ಯ, ಉಜ್ವಲ ಯೋಜನೆಯಡಿಯಲ್ಲಿ ಮೂರು ಸಿಲೆಂಡರಗಳು – ಡಿಸಿಎಂ ಗೋವಿಂದ ಕಾರಜೋಳ.

ಹುನಗುಂದ-ಕೊವೀಡ್ ೧೯ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು.ಜಿಲ್ಲೆಯಲ್ಲಿ ಈಗಾಗಲೇ ೮ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು.ಸಾರ್ವಜನಿಕರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು.ಸಾರ್ವಜನಿಕರ ಪಡಿತರ ಚೀಟಿಗೆ ಎರಡು ತಿಂಗಳ ಪಡಿತರ ದಾನ್ಯ,ಉಜ್ವಲ ಯೋಜನೆಯಡಿಯಲ್ಲಿ ಮೂರು ಸಿಲೆಂಡರಗಳು ನೀಡಲಾಗುತ್ತಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ರವಿವಾರ ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಸಭಾ ಭವನದಲ್ಲಿ ನಡೆದ ಕೋವಿಡ್ ೧೯ ವೈರಸ್‌ನ ವಿವಿಧ ಇಲಾಖೆಗಳು ಕೈಕೊಂಡ ಪ್ರಗತಿ ಪರಿಶೀಲನೆ ಸಭೆಯನ್ನು ನಡೆಸಿ ಮಾತನಾಡಿದ ಅವರು ಜನರಿಗೆ ಸಮಸ್ಯೆಯಾಗದಂತೆ ಅಗತ್ಯ ವಸ್ತುಗಳನ್ನು ತಲುಪಿಸುವ ಕಾರ್ಯವಾಗಬೇಕು.ರೈತರು ಬೆಳದ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ನೀಡಬೇಕು.ತರಕಾರಿ ಮತ್ತು ದಿನಸಿ ವಸ್ತುಗಳಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ ಸಾರ್ವಜನಿಕರಿಗೆ ತೊಂದರೆಯಾಗದAತೆ ನೋಡಿಕೊಳ್ಳಿ,ಇನ್ನು ಅಲೆಮಾರಿ ಜನಾಂಗ,ಅಸAಘಟಿತ ಕಾರ್ಮಿಕರಿಗೆ ಮತ್ತು ಪಾನಿಪುರಿ,ವಿವಿಧ ಉದ್ಯೋಗ ಅರಿಸಿಕೊಂಡು ಬಂದ ಜನಾಂಗಕ್ಕೆ ಮೂರು ತಿಂಗಳದ ತಾತ್ಕಾಲಿಕ ಪಡಿತರ ಚೀಟಿಯನ್ನು ನೀಡಿ ೨ ತಿಂಗಳದ ಪಡಿತರ ದಾನ್ಯವನ್ನು ನೀಡುವ ವ್ಯವಸ್ಥೆ ಮಾಡಬೇಕು.ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡದಂತೆ ಕಟ್ಟೆಚ್ಚರ ವಹಿಸಬೇಕು,ಉಜ್ವಲ ಯೋಜನೆಯ ಮುಖಾಂತರ ೩ ತಿಂಗಳ ಉಚಿತ ಗ್ಯಾಸ್ ನೀಡಲು ವ್ಯವಸ್ಥೆಯನ್ನು ಮಾಡಿ ಯಾರು ಹಸಿವಿನಿಂದ ಬಳಲದಂತೆ ನೋಡಿಕೊಳ್ಳಿ.ರೈತರ ಮುಂಗಾರು ಬಿತ್ತನೆಗೆ ಬೇಕಾದ ಬೀಜ ರಸಗೊಬ್ಬರ ಬೇಡಿಕೆಯನ್ನು ಸಲ್ಲಿಸಿ ಈಗಲೇ ಸಂಗ್ರಹ ಮಾಡಿಕೊಳ್ಳಬೇಕು ಎಂದು ಹೇಳುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಾರಿಗೊಳಿಸಿದ ೧೪೪ ಕಲಂ ಊಲ್ಲಂಘಿಸಿದರೇ ಸೂಕ್ತ ಕಾನೂನು ಕ್ರಮವನ್ನು ಜಾರಿಗೊಳಿಸಲು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಕೃಷಿ ಇಲಾಖೆ ಅಧಿಕಾರಿ ಆರ್.ಎಂ ಕಾಂಟ್ರಾಕ್ಟರ್ ಸಭೆಗೆ ಹಿಂದಿನ ಮಾಹಿತಿಯನ್ನು ತಗೆದುಕೊಂಡು ಬಂದಿದ್ದರಿAದ ಮತ್ತು ಮುಂಗಾರು ಬಿತ್ತನೆಗೆ ಬೇಕಾದ ಬೀಜ ಮತ್ತ ರಸ ಗೊಬ್ಬರದ ಸರಿಯಾದ ಮಾಹಿತಿ ನೀಡದ್ದಿದಾಗ ಡಿಸಿಎಂ ಗೋವಿಂದ ಕಾರಜೋಳ ಗರಂ ಆಗಿ ಈ ರೀತಿಯ ಬೇಜಾವಬ್ದಾರಿಯಿಂದ ವರ್ತಿಸಿದರೇ ತಕ್ಷಣ ಅಮಾನತ್ತು ಮಾಡಬೇಕಾಗುವುದ.ತಾಲೂಕಿನ ಮುಂಗಾರು ಬಿತ್ತನೆಗೆ ಬೇಕಾದ ಬೀಜ ಗೊಬ್ಬರದ ಬೇಡಿಕೆಯ ಪ್ರಸ್ತಾವನೆಯನ್ನು ಎರಡು ದಿನಗಳಲ್ಲಿ ಡಿಸಿ ಮತ್ತು ಎಸಿ ಸಲ್ಲಿಸಬೇಕು ಅದರ ಒಂದು ಪ್ರತಿಯನ್ನು ಶಾಸಕ ಮತ್ತು ಸಂಸದರಿಗೆ ಹಾಗೂ ನನಗೊಂದು ಕಾಫಿ ನೀಡಬೇಕು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ,ಕಂದಾಯ,ತೋಟಗಾರಿಕೆ,ಕುಡಿಯುವ ನೀರು ಮತ್ತು ಸರಬರಾಜು ಇಲಾಖೆ ಮಾಹಿತಿಯನ್ನು ಪಡೆದುಕೊಂಡರು.
ಸAಸದ ಪಿ.ಸಿ.ಗದ್ದಿಗೌಡ್ರ,ಶಾಸಕ ದೊಡ್ಡನಗೌಡ ಪಾಟೀಲ,ಎಸಿ.ಎಂ.ಗAಗಪ್ಪ,ತಹಶೀಲ್ದಾರ ಬಸವರಾಜ ನಾಗರಾಳ ಸೇರಿದಂತೆ ಅನೇಕ ಇಲಾಖೆಯ ಅಧಿಕಾರಿಗಳು ಇದ್ದರು.

error: