ಹುನಗುಂದ ; ಕಿಲ್ಲರ್ ಕೊರೊನಾ ಸೋಂಕು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ರುದ್ರ ತಾಂಡವಾಡುತ್ತಿದ್ದು.ಬಾಗಲಕೋಟಿ ಜಿಲ್ಲೆಯಲ್ಲೂ ಪಾಸಿಟಿವ್ ೮ ಪ್ರಕರಣಗಳು ಕಂಡು ಬರುತ್ತಿದ್ದಂತೆ ತಾಲೂಕಿನಾಧ್ಯಂತ ಮತ್ತಷ್ಟು ಕಟ್ಟೆಚ್ಚರವನ್ನು ವಹಿಸಿ ಜನರ ಹೊರ ಬರದಂತೆ ತಾಲೂಕಾಡಳಿತ ಹೈ ಅಲರ್ಟ್ ಘೋಷಿಸಿದೆ.
ಕಳೆದ ಏ-೨ ರಂದು ಚೀನಾದ ಕೊರೋನಾ ವೈರಸ್ ಬಾಗಲಕೋಟಿಯ ಬಾಗಿಲನ್ನು ಪ್ರವೇಶಿಸುತ್ತಿದ್ದಂತೆ ಜನರಲ್ಲಿ ಬಹು ದೊಡ್ಡ ಆತಂಕ ಮೂಡಿಸಿದಲ್ಲದೇ ತಾಲೂಕಿಗೆ ವಿದೇಶದಿಂದ ಮತ್ತು ರಾಜ್ಯದ ನಾನಾ ಜಿಲ್ಲೆಗಳಿಂದ ಬಂದು ತಾಲೂಕಿನ ಎರಡು ಮೂರು ಕಡೆಗೆ ತಾಲೂಕಾಡಳಿತ ನೇತೃತ್ವದಲ್ಲಿ ಕ್ವಾರಂಟೈನ್ ಆಗಿರುವ ಜನರ ಮೇಲೆ ಹದ್ದಿನ ಕಣ್ಣಿಟ್ಟು ಅವರನ್ನು ಹೊರಗೆ ಹೋಗದಂತೆ ನಿತ್ಯ ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗುತ್ತಿದೆ.
ಐದು ದಿನಗಳಿಂದ ಲಾಕ್ ಡೌನ್ ಪ್ರಕ್ರಿಯೆಯು ತಾಲೂಕಿನಲ್ಲಿ ಮತ್ತಷ್ಟು ಗಂಭೀರ ಸ್ವರೂಪವನ್ನು ಪಡೆದುಕೊಂಡಿದ್ದು ಒಂದು ನರ ಪೀಳಿಯು ಹೊರಗೆ ಬರದಂತೆ ಪೊಲೀಸ್ ಇಲಾಖೆಯು ಕಟ್ಟು ನಿಟ್ಟಿನ ಕಾನೂನು ಕ್ರಮವನ್ನು ಜಾರಿಗೆ ತಂದು ಹೊರಗಡೆ ಸುತ್ತುವ ಅನಾವಶ್ಯಕ ಜನರಿಗೆ ಧರ್ಮದೇಟು ನೀಡುವುದು ಮತ್ತು ಏರಾಬೀರಿಯಾಗಿ ಓಡಾಡುವ ಬೈಕ್ ಮತ್ತು ಕಾರಗಳನ್ನು ಸೀಜ್ ಮಾಡಿ ಮಾಲಕರ ಮೇಲೆ ಕೇಸ್ ಮಾಡಲಾಗುತ್ತಿದೆ.ಕೊರೊನಾ ಭೀತಿಯಿಂದ ನಿತ್ಯ ಬೆಳಗ್ಗೆ ಗುಂಪು ಗುಂಪಾಗಿ ಸಾಮಾಜಿಕ ಅಂತರವಿಲ್ಲದೇ ನಡೆಯುತ್ತಿದ್ದ ಸಂತೆಯ ಟೆಂಡರ್ ಕೂಡಾ ಬಂದ್ ಮಾಡಿಸಿಲಾಗಿದೆ.
ಮಂಗಳೂರ ಮತ್ತು ಕಾಸರಗೋಡ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಬಂದ ೮೦ ಜನರನ್ನು ಮೇಟ್ರಿಕ್ ನಂತರದ ಬಾಲಕರ ವಸತಿ ನಿಲಯ ಮತ್ತು ಆದರ್ಶ ವಿದ್ಯಾಲಯ ಸೇರಿದಂತೆ ೫೮ ಜನರನ್ನು ಲಾಕ್ ಡೌನ್ ಮಾಡಿದ್ದರೇ ಇನ್ನು ಅಮೀನಗಡ ಪಟ್ಟಣದ ನವಚೇತನ ಪ್ರೌಢ ಶಾಲಯಲ್ಲಿ ೨೨ ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು.ಮೊದಲು ೧೪ ದಿನ ಕ್ವಾರಂಟೈನ್ ಅವಧಿಯನ್ನು ೨೮ ದಿನಕ್ಕೆ ಹೆಚ್ಚಿಸಿದ್ದು ಅಲ್ಲಿಯವರಗೆ ಅವರನ್ನು ಆ ಸ್ಥಳದಲ್ಲಿಯೇ ಇರಿಸಲಾಗುವುದು ಎಂದು ತಾಲೂಕ ದಂಡಾಧಿಕಾರಿ ಬಸವರಾಜ ನಾಗರಾಳ ಹೇಳಿದರು.
ಶುದ್ದ ಮತ್ತು ಶುಚಿ ಆಹಾರ ಪೋರೈಕೆ-ಕ್ವಾರಂಟೈನ್‌ದಲ್ಲಿರುವ ಅಷ್ಟು ಜನರಿಗೂ ನಿತ್ಯ ಬಳಗ್ಗೆ ಪಲಾವು,ಉಪ್ಪಿಟ್ಟು,ಅವಲಕ್ಕಿ,ಬಾಳೇಹಣ್ಣು ನೀಡಲಾಗುತ್ತಿದ್ದು.ಮಧ್ಯಾಹ್ನ ಚಪಾತೆ,ಸಜ್ಜಕ,ಅನ್ನ ಮತ್ತು ಸಾಂಬಾರ ಇನ್ನು ರಾತ್ರಿ ರೊಟ್ಟಿ ಅಥವಾ ಚಪಾತೆ ಅನ್ನ ಸಂಬಾರನ್ನು ನೀಡಲಾಗುತ್ತಿದೆ.ಹುನಗುಂದ ಕ್ವಾರಂಟೈನ್‌ದಲ್ಲಿ ಬಹಳಷ್ಟು ಚಿಕ್ಕ ಮಕ್ಕಳು ಇರೋದರಿಂದ ಅಂಗನವಾಡಿಯಲ್ಲಿ ನೀಡಲಾಗುವ ಹಾಲು,ಮೊಟ್ಟೆ,ಕಾಳು,ಬಿಸ್ಕೇಟ್‌ಗಳನ್ನು ನೀಡಲಾಗುತ್ತಿದೆ.
ನಿತ್ಯ ಆರೋಗ್ಯ ಸಿಬ್ಬಂದಿಗಳು ಭೇಟಿ-ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಾ ಹೋಗುತ್ತಿರುವುದರಿಂದ ಕ್ವಾರಂಟೈನ್‌ದಲ್ಲಿರುವ ಜನರ ಆರೋಗ್ಯ ಬಹಳಷ್ಟು ಮುಖ್ಯವಾಗಿದ್ದು ನಿತ್ಯ ಅಲ್ಲಿಗೆ ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ಅವರ ಆರೋಗ್ಯದ ಸ್ಥಿತಿಗತಿ ಮಾಹಿತಿಯನ್ನು ಪಡೆಯುತ್ತಿದ್ದಾರೆ.
ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದ ಜನರನ್ನು ಹುನಗುಂದ ಮತ್ತು ಅಮೀನಗಡ ಸೇರಿದಂತೆ ಮೂರು ಕಡೆ ೨೮ ದಿನಗಳವರಗೆ ಕ್ವಾರಂಟೈನ್‌ದಲ್ಲಿ ಇಡಲಾಗಿದ್ದು ಅವರಿಗೆ ಶುಚಿ ಮತ್ತು ರುಚಿಯಾದ ಊಟ ಮತ್ತು ಉಪಹಾರ ನೀಡುವ ಜೊತೆಗೆ ಆರೋಗ್ಯದಲ್ಲಿ ಮೇಲೆ ನಿಗಾ ವಹಿಸಲಾಗುತ್ತಿದೆ ಬಸವರಾಜ ನಾಗರಾಳ ತಹಶೀಲ್ದಾರ ಹುನಗುಂದ.
ಕ್ವಾರಂಟೈನ್ ಸ್ಥಳಕ್ಕೆ ವಿಶೇಷ ಅಧಿಕಾರಿಗಳ ನೇಮಕ-ಹುನಗುಂದ ಮೇಟ್ರಕ್ ನಂತರದ ಬಾಲಕರ ವಸತಿ ನಿಲಯ ಮತ್ತು ಆದರ್ಶ ವಿದ್ಯಾಲಯದಲ್ಲಿ ಕ್ವಾರಂಟೈನ್ ಆಗಿರುವ ಜನರನ್ನು ನೋಡಿಕೊಳ್ಳುವುದಕ್ಕೆ ನೋಡಲ್ ಅಧಿಕಾರಿಯನ್ನಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಆರ್‌ನದಾಫ್ ಮತ್ತು ಕರಡಿ ಉಪತಹಶೀಲ್ದಾರ ಎಂ.ಎನ್.ಮಲ್ಲಾರಿ ಹಾಗೂ ಅವರಿಗೆ ಸಹಾಯಕವಾಗಿ ಇಬ್ಬರು ಆರೋಗ್ಯ ಸಿಬ್ಬಂದಿ,ಇಬ್ಬರು ಪೊಲೀಸ್ ಸಿಬ್ಬಂದಿ ಜೊತೆಗೆ ಇಬ್ಬರು ಎಫ್‌ಡಿಎ ಸಿಬ್ಬಂದಿಯನ್ನು ನೇಮಿಸಲಾಗಿದ್ದು ಅದರಂತೆ ಅಮೀನಗಡದ ನೋಡಲ್ ಅಧಿಕಾರಿಯನ್ನಾಗಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಐ.ಜಿ.ಕಣ್ಣೂರ ಹಾಗೂ ಲೋಕೋಪಯೋಗಿ ಇಲಾಖೆ ಎಇಇ ಎಸ್.ಕೆ.ಕೊಟ್ಟಗಿ ಅವರನ್ನು ನೇಮಸಲಾಗಿದೆ.
ವರದಿ : ಮಲ್ಲಿಕಾರ್ಜುನ ಬಂಡರಗಲ್ಲ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ