September 17, 2024

Bhavana Tv

Its Your Channel

೨೪ತಾಸು ಸೇವೆ ಸಲ್ಲಿಸುತ್ತಿರುವ ನೌಕರ ಸಿಬ್ಬಂದಿ ಹಿತದೃಷ್ಟಿಯಿಂದ ಆರೋಗ್ಯ ತಪಾಷಣೆ -ತಹಶೀಲ್ದಾರ ಬಸವರಾಜ ನಾಗರಾಳ .

ಹುನಗುಂದ: ಕೊವಿಡ್-೧೯ ಹರಡದಂತೆ ಮುಂಜಾಗೃತಾ ಕ್ರಮವಾಗಿ ಸಾರ್ವಜಕನಿಕ ರಂಗದಲ್ಲಿ ದಿನದ ೨೪ತಾಸು ಸೇವೆ ಸಲ್ಲಿಸುತ್ತಿರುವ ನೌಕರ ಸಿಬ್ಬಂದಿ ಹಿತದೃಷ್ಟಿಯಿಂದ ಆರೋಗ್ಯ ತಪಾಷಣೆ ಮಾಡಲಾಯಿತೆಂದು ತಹಶೀಲ್ದಾರ ಬಸವರಾಜ ನಾಗರಾಳ ಹೇಳಿದರು. ಬುಧವಾರ ಇಲ್ಲಿನ ಪೊಲಿಸ್ ಠಾಣೆಯ ಮುಂದೆ ಬೆಳಿಗ್ಗೆ ೯ಗಂಟೆಗೆ ಕಡಪಟ್ಟಿ ಮಲ್ಟಿಸ್ಪೇಸಿಯಾಲಿಟಿ ಆಸಪತ್ರೆ ಮತ್ತು ಜೆ.ಬಿ. ಆಸ್ಪತ್ರೆ ಇಲಕಲ್ಲ ಇವುಗಲ ಸಂಯುಕ್ತಾಶ್ರಯದಲ್ಲಿ ನಡೆದ ಆರೋಗ್ಯ ತಪಾಷಣಾ ಶಿಬಿರದಲ್ಲಿ ಆರೋಗ್ಯ ತಪಾಷಣೆ ಮಾಡಿಸಿಕೊಂಡು ತಹಶೀಲ್ದಾರ ಬಸವರಾಜ ನಾಗರಾಳ ಮಾತನಾಡಿದ ಅವರು ಪ್ರತಿಯೊಬ್ಬರು ಮನೆಯ ಯಜಮಾನನ್ನು ನಂಬಿ ಬದುಕು ಸಾಗಿಸುತ್ತಿರುವಂತೆ ನೌಕರರಿಗೂ ಅವರದೆ ಆದ ಕುಟುಂಬದ ಜವಾಬ್ದಾರಿ ಇರುವದರಿಂದ ನೌಕರರ ಆರೋಗ್ಯ ತಪಾಣೆಯು ಅಷ್ಟೆ ಮುಖ್ಯವಾದದ್ದು ಎಂದರು. ಸಿಪಿಐ ಅಯ್ಯನಗೌಡ ಪಾಟೀಲ ಮಾತನಾಡಿ ಕೊರೊನಾ ರೋಗ ಹರಡದಂತೆ ಮುಂಜಾಗೃತಾ ಕ್ರಮಕ್ಕೆ ಮತ್ತು ದಿನಸಿ ಅಂಗಡಿ ವ್ಯಾಪಾರಸ್ಥರು ಹಗೂ ತರಕಾರಿ ವ್ಯಾಪಾರಸ್ಥರ ಜೊತೆಗೆ ಅವಳಿ ತಾಲೂಕುಗಳ ಜನರು ಸಹಕಾರ ನೀಡಿದ್ದಾರೆ. ಅದರಂತೆ ಲಾಕ್ ಡೌನ್ ಮೇ೩ಮುಗಿಯುವರೆಗೂ ಮನೆಯಿಂದ ಹೊರಬರದೆ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಅವರು ವಿನಂತಿಸಿಕೊAಡರು. ತಾಲೂಕ ವೈಧ್ಯಾಧಿಕಾರಿ ಡಾ: ಪ್ರಶಾಂತ ತುಂಬಗಿ, ಡಾ: ಮಹಾಂತೇಶ ಕಡಪಟ್ಟಿ, ಡಾ: ಅನೀಲ ಬೈರಗೊಂಡ ತಪಾಷಣೆ ನಡೆಸಿದರು. ಇದೆ ವೇಳೆ ಪೊಲಿಸ್ ಇಲಾಖೆಯ ಸಿಪಿಐ ಅಯ್ಯನಗೌಡ ಪಾಟೀಲ ಮತ್ತು ಪಿಎಸ್‌ಐ ಪುಂqಲೀಕ ಪಟಾತರ ಸೇರದಂತೆ ೪೦ಸಿಬ್ಬಂದಿ, ತಹಶೀಲ್ದಾರ ಬಸವರಾಜ ನಾಗರಾಳ ಸೇರಿದಂತೆ ಕಂದಾಯ ಇಲಾಖೆಯ ೧೦೦ ಸಿಬ್ಬಂದಿ, ಮುಖ್ಯಾಧಿಕಾರಿ ಈರಣ್ಣ ಗುಡದಾರಿ ಸೇರಿದಂತೆ ಪುರಸಭೆಯ ೫೦ಜನ ಸಿಬ್ಬಂದಿ ಹಾಗೂ ಪತ್ರಕರ್ತರ ಆರೋಗ್ಯ ತಪಾಷಣೆ ನಡೆಯಿತು.

error: