April 27, 2024

Bhavana Tv

Its Your Channel

ಕೊರೊನಾ ರೆಡ್ ಝೋನ್ ಪಟ್ಟಿಯಲ್ಲಿ ಬಾಗಲಕೋಟೆ : ಹೈಅಲರ್ಟ್ ಘೋಷಣೆ

ಬಾಗಲಕೋಟೆ : ಕೊರೊನಾ ಆತಂಕ ರಾಜ್ಯದ್ಯಂತ ಮನೆಮಾಡಿದ್ದು, ಕೇಂದ್ರ ಸರ್ಕಾರ ರಾಜ್ಯದ 8 ಜಿಲ್ಲೆಗಳನ್ನು ರೆಡ್ ಝೋನ್ ಪಟ್ಟಿಗೆ ಸೇರಿಸಿದೆ. ಬಾಗಲಕೋಟೆಯಲ್ಲಿ ಈವರೆಗೆ ಹೆಚ್ಚು ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, ರೆಡ್ ಝೋನ್ ಪಟ್ಟಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತಷ್ಟು ಕಠಿಣ ಕ್ರಮಕ್ಕೆ ಮುಂದಾಗಿದ್ದು, ಜಿಲ್ಲೆಯ ವಿವಿಧೆಡೆ ಹೈಅಲರ್ಟ್ ಘೋಷಿಸಿದೆ.

ಜಿಲ್ಲೆಯ ಹಳೇ ಬಾಗಲಕೋಟೆ, ಮುಧೋಳ, ಮುಗಳಖೋಡ ಮತ್ತು ಜಮಖಂಡಿಯಲ್ಲಿ ಹೆಚ್ಚಾಗಿ ಸೋಂಕಿತರು ಕಂಡುಬಂದಿದ್ದು, ಈ ಪ್ರದೇಶಗಳಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ಒಂದೇ ಕಡೆ 11 ಪ್ರಕರಣಗಳು ಕಂಡು ಬಂದ ಹಳೇ ಬಾಗಲಕೋಟೆಯಲ್ಲಿ ಕಟ್ಟೆಚ್ಚರ ಮುಂದುವರೆದಿದೆ. ಏತನ್ಮಧ್ಯೆ, ಮೃತ ಸೋಂಕಿತ ವೃದ್ಧನ ಮನೆಯವರಿಂದಲೇ ನಿರಂತರವಾಗಿ ಕೊರೋನಾ ಸೋಂಕು ಹಬ್ಬುತ್ತಿದೆ ಎನ್ನಲಾಗಿದೆ. ಕಂಟೋನ್ಮೆಂಟ್ ಏರಿಯಾಗಳಲ್ಲಿ ಅಗತ್ಯ ಸೌಲಭ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದೇ ವೇಳೆ, ಮೃತ ವೃದ್ಧನ 9 ಜನ ಕುಟುಂಬಸ್ಥರು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 14 ದಿನ ಆಸ್ಪತ್ರೆ ಕ್ವಾರಂಟೈನ್​ ಹಾಗೂ ಎರಡು ಬಾರಿಯೂ ವರದಿ ನೆಗಟಿವ್ ಬಂದ ಹಿನ್ನೆಲೆ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಕೊರೋನಾ ಸೋಂಕಿತ ಮೃತ ವೃದ್ಧನ ಸೋಂಕಿತ ಹೆಂಡತಿ, ಸಹೋದರನಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ….

source : kannadanewsnow.com

error: