May 19, 2024

Bhavana Tv

Its Your Channel

ಇಲಕಲ್ಲ ನಗರದಲ್ಲಿ ಕಿರಾಣಿ ವರ್ತಕರು ಹಾಗೂ ಪತ್ರಕರ್ತರಿಗೆ ಆರೋಗ್ಯ ತಪಾಸಣ ಶಿಬಿರ

ಇಲಕಲ್ಲ ನಗರದಲ್ಲಿ ಐ.ಎಂ.ಎ. ಡಾಕ್ಟರ್ಸ್ ಸಹಯೋಗದಲ್ಲಿ ನಗರ ಪೊಲೀಸ ಠಾಣೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಪೋಲೀಸ್ ಠಾಣಾ ಸಿಬ್ಬಂದಿ, ನಗರಸಭೆ , ಕಂದಾಯಯ ಇಲಾಖೆ ಸಿಬ್ಬಂದಿಗಳನ್ನು ಕಳೆದ ಎರಡು ದಿನಗಳಹಿಂದೆ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಅದರಂತೆ ದಿನನಿತ್ಯ ನೂರಾರು ಜನರೊಂದಿಗೆ ವಹಿವಾಟು ನಡೆಸುತ್ತಿರುವ ಕಿರಾಣಿ ವ್ಯಾಪಾರಸ್ಥರನ್ನು ಮತ್ತು ಪತ್ರಕರ್ತರಿಗಾಗಿ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು. ಈ ಕುರಿತು ಮಾತನಾಡಿದ ಇಲಕಲ್ಲ ಐ.ಎಂ.ಎ ಅಧ್ಯಕ್ಷ ಡಾ|| ವಿಠ್ಠಲ ಶ್ಯಾವಿ ತಮ್ಮ ಅಭಿಪ್ರಾಯ ಹಂಚಿಕೊoಡರು. ಐ.ಎಂ.ಎ. ವೈದ್ಯರೆಲ್ಲ ಸೇರಿದಂತೆ ಅನೇಕ ಆರೋಗ್ಯ ಸಿಬ್ಬಂದಿಗಳು ಅರೋಗ್ಯ ತಪಾಸಣೆ ನಡೆಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಇಲಕಲ್ಲ ವೈದ್ಯರಿಗೆ ಕಿರಾಣಿ ವ್ಯಾಪಾರಸ್ಥರು ಹಾಗೂ ಪತ್ರಕರ್ತರು ಶ್ಲಾಘನೆ ವ್ಯಕ್ತಪಡಿಸಿದರು.

error: