September 14, 2024

Bhavana Tv

Its Your Channel

ಕೊರೊನಾ ವೈರಸ್ ಭೀತಿ, ಹೊಸಪೇಟಿ-ಸೋಲಾಪೂರ ಕ್ರಾಸ್ ಬೀಕೋ

ಹುನಗುಂದ- ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದ ಹೊಸಪೇಟಿ-ಸೋಲಾಪೂರ ರಾಷ್ಟಿçÃಯ ಹೆದ್ದಾರಿ ೫೦ ಸದ್ಯ ಮಾರಕ ಕೊರೊನಾ ವೈರಸ್ ಭೀತಿಯಿಂದ ವಾಹನ ಮತ್ತು ಜನ ಸಂಚಾರವಿಲ್ಲದೇ ಕ್ರಾಸ್ ಬೀಕೋ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ರಣ ಭೀಕರತೆಯನ್ನು ಸೃಷ್ಠಿಸಿ ಇಡೀ ಜಗತ್ತಿನ ಜನರನ್ನು ಅಲ್ಲೋಲ ಕಲ್ಲೋಲ ಮಾಡಿ ನಿತ್ಯ ಮರಣ ಮೃದಂಗ ಬಾರಿಸುತ್ತಿರುವ ಕಿಲ್ಲರ್ ಕೊರೊನಾದ ಎಪೇಕ್ಟ್ ಸಧ್ಯ ತಾಲೂಕಿಗೆ ಹತ್ತಿಕೊಂಡಿರುವ ರಾಷ್ಟಿçÃಯ ಹೆದ್ದಾರಿಯ ೫೦ರ ಸರಕು ಸಾಗಣಿಕೆಯ ವಾಹನಗಳ ಸಂಚಾರದ ಮೇಲು ಕೊರೋನಾ ಕರಿನೆರಳು ಬಿದ್ದಿದ್ದಂತೂ ಸತ್ಯ.
ಹೊಸಪೇಟಿ ಸೋಲಾಪೂರ ರಾಷ್ಟಿçÃಯ ಹೆದ್ದಾರಿಯ ಮೂಲಕ ಕರ್ನಾಟಕ,ಮಹಾರಾಷ್ಟç,ತಮಿಳುನಾಡು,ಕೇರಳ,ಮಧ್ಯಪ್ರದೇಶ,ಆಂಧ್ರಪ್ರದೇಶ ಸೇರಿದಂತೆ ದೇಶದ ಅನೇಕ ರಾಜ್ಯಗಳಿಂದ ಬೇರೆ ಬೇರೆ ರಾಜ್ಯಗಳಿಗೆ ಸರಕುಗಳನ್ನು ಹೊತ್ತ ಸಾವಿರಾರು ಲಾರಿ,ಕ್ಯಾಂಟರ್‌ಗಳು ಮತ್ತು ನೆರೆಯ ರಾಜ್ಯ ಮಹಾರಾಷ್ಟç ಮತ್ತು ರಾಜ್ಯದ ರಾಜಧಾನಿ ಬೆಂಗಳೂರ,ಕರಾವಳಿ ತೀರ ಪ್ರದೇಶ ಮಂಗಳೂರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಗೆ ತರಳುವ ಬಸ್ ಸಂಚಾರ ಸ್ಥಗಿತಗೊಂಡು.ಕಳೆದ ೨೪ ದಿನಗಳಿಂದ ದೇಶಾದ್ಯಂತ ಲಾಕ್ ಡೌನ್‌ನಿಂದ ವಿವಿಧ ಜಿಲ್ಲೆಗಳು ರೋಗ ನಿಯಂತ್ರಣಕ್ಕಾಗಿ ತಮ್ಮ ತಮ್ಮ ಜಿಲ್ಲೆಗಳ ಗಡಿ ಭಾಗವನ್ನು ಬಂದ್ ಮಾಡಿದ್ದರಿಂದಲೂ ಹೆದ್ದಾರಿಯಲ್ಲಿ ವಾಹನಗಳ ಓಡಾಟ ಸಂಪೂರ್ಣ ಕಡಿಮೆಯಾಗಿ ರಸ್ತೆಯುದ್ದಕ್ಕೂ ವಾಹನವಿಲ್ಲದೇ ಹೆದ್ದಾರಿ ಕಣ್ಣಾಡಿಸಿದಷ್ಟು ದೂರಕ್ಕೂ ಖಾಲಿ ಖಾಲಿಯಾಗಿ ಕಾಣುತ್ತಿದೆ.
ಹೆದ್ದಾರಿ ಪಕ್ಕದ ವ್ಯಾಪಾರಸ್ಥರ ಬದುಕು ಬೀದಿಗೆ-ಹುನಗುಂದ,ಸAಗಮ ಕ್ರಾಸ್,ಬೆಳಗಲ್ಲ ಕ್ರಾಸ್‌ಗಳ ರಾಷ್ಟಿçÃಯ ಹೆದ್ದಾರಿಯ ೫೦ರ ಅಕ್ಕ ಪಕ್ಕದಲ್ಲಿ ಗೂಡಂಗಡಿ,ಸಣ್ಣ ಸಣ್ಣ ಹೊಟೇಲ್,ದಾಬಾಗಳನ್ನು ಇಟ್ಟುಕೊಂಡು ನಿತ್ಯ ರಸ್ತೆಯ ಮೇಲೆ ವ್ಯಾಪಾರ ಮಾಡಿ ಕುಟುಂಬ ಸದಸ್ಯರುಗಳ ತುತ್ತಿನ ಚೀಲವನ್ನು ತುಂಬಿಸುತ್ತಿದ್ದ ಅದೆಷ್ಟೋ ವ್ಯಾಪಾರಸ್ಥರು ಸಧ್ಯ ಮಹಾಮಾರಿ ಕೊರೋನಾ ವೈರಸ್ ಹೊಡೆತಕ್ಕೆ ಸಿಲುಕಿ ಒಪ್ಪಿತ್ತಿನ ಊಟಕ್ಕೂ ಗತಿಯಿಲ್ಲದಂತಾಗಿ ಎಷ್ಟೋ ವ್ಯಾಪಾರಸ್ಥರು ತುತ್ತಿನ ಚೀಲ ತುಂಬಿಸಿಕೊಳ್ಳಲು ನಿತ್ಯ ಹೆಣಗಾಡುವ ಸ್ಥಿತಿ ನಿರ್ಮಾಣವಾಗಿದೆ.ಹೆದ್ದಾರಿಯ ಮೇಲಿನ ವ್ಯಾಪಾರವನ್ನೇ ನಂಬಿಕೊAಡು ಜೀವನ ಕಟ್ಟಿಕೊಂಡಿದ್ದ ವ್ಯಾಪಾರಸ್ಥರು ಬದುಕು ಸಧ್ಯ ಕೊರೊನಾ ವೈರಸ್‌ನಿಂದ ಅಕ್ಷರಶಃ ಬೀದಿ ಬಂದAತಾಗಿದೆ.

ರಾಷ್ಟಿçÃಯ ಹೆದ್ದಾರಿ ವ್ಯಾಪಾರಸ್ಥರ ಬದುಕಿಗೆ ಆಸರೆ.ಈ ಹೆದ್ದಾರಿಯಲ್ಲಿ ಹೆಚ್ಚೆಚ್ಚು ವಾಹನಗಳು ಮತ್ತು ಪ್ರಯಾಣಿಕರು ಓಡಾಡುತ್ತಿದ್ದರೇ ಮಾತ್ರ ನಮ್ಮ ವ್ಯಾಪಾರ.ಕಳೆದ ೨೪ ದಿನಗಳಿಂದ ಕೊರೊನಾ ಎಂಬ ಮಹಾಮಾರಿ ರೋಗದ ಭೀತಿಯಿಂದ ದೇಶವೇ ಲಾಕ್ ಡೌನಾಗಿ ಜನ ಜೀವನ ಸ್ತಬ್ಧವಾಗಿದೆ.ಹೆದ್ದಾರಿಯಲ್ಲಿ ಓಡಾಡುವ ವಾಹನಗಳ ಸಂಖ್ಯೆ ಗಣÀನೀಯವಾಗಿ ಕಡಿಮೆಯಾಗಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದರಿಂದ ನಮ್ಮ ಕುಟುಂಬ ನಿರ್ವಹಣೆ ಮಾಡೋದೆ ಕಷ್ಟವಾಗಿದೆ-ವೀರಣ್ಣ ವಾಲಿ ವ್ಯಾಪಾರಸ್ಥರು.

ವರದಿ : ಮಲ್ಲಿಕಾರ್ಜುನ ಬಂಡರಗಲ್ಲ

error: