
ಕೋರಾನಾ ವೈರಸ್ ನ ಲಾಕ್‍ಡೌನ್ ನಿಂದ ಅನೇಕರು ಆಹಾರ ಕೊರತೆಯಿಂದ ಬಳಲುತ್ತಿತ್ತು ಇದನ್ನು ಸ್ಪಲ್ಪ ಮಟ್ಟಗಾದರು ಹೋಗಲಾಡಿಸಲೆಂದು ಇಲಕಲ್ಲ ನಗರದ ವಾರ್ಡ ನಂ 31 ರಲ್ಲಿ ಇಂದಿನಿಂದ 3 ನೇ ಮೇ ವರೆಗೆ ಅನ್ನದಾಸೋಹ ಸೇವೆಯನ್ನು ನಗರಸಭೆ ಸದಸ್ಯೆ ಶೋಭಾ ಆಮದಿಹಾಳ, ದಲಿತ ಮುಖಂಡ ಸಿದ್ದಣ್ಣ ಆಮದಿಹಾಳ ಹಮ್ಮಿಕೊಂಡಿದ್ದರು. ಕಾರ್ಯಕ್ರಮವನ್ನು ಇಲಕಲ್ಲಿನ ಗುರುಮಹಾಂತ ಶ್ರೀಗಳು ಹಾಗೂ ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಉದ್ಘಾಟಿಸಿದರು. ದಿನಕ್ಕೆ ಒಂದು ಸಾವಿರ ಜನಕ್ಕೆ ಈ ಅನ್ನದಾಸೋಹ ಮಾಡಲಾಗುದುವು ಎಂದು ಆಯೋಜಕರು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ದೊಡ್ಡನಗೌಡ ಪಾಟೀಲ ತಮ್ಮ ಅಭಿಪ್ರಾಯ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಮಾಜಿ ನಗರಸಭೆ ಸದಸ್ಯ ಮಂಜುನಾಥ ಹೊಸಮನಿ, ಮುಖಂಡರಾದ ಅಶೋಕ ಚಲವಾದಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಅನ್ನದಾಸೋಹದ ಫಲಾನುಭವಿಗಳು ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು. ವಿಜಯ ಗವಿಮಠ, ರನ್.ಟಿ.ವಿ.ಇಲಕಲ್ಲ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ