April 19, 2024

Bhavana Tv

Its Your Channel

ಹುನಗುಂದ ಬರ್ಡ್ಸ್ ಸಂಸ್ಥೆಯ ಕಾರ್ಯಾಲಯದಲ್ಲಿ ಅಂಗವಿಕಲರಿಗೆ ಮತ್ತು ಕೂಲಿಕಾರ್ಮಿಕರಿಗೆ ೧೯ ಬಗೆಯ ಆಹಾರ ಸಾಮಗ್ರಿಯ ವಿತರಣೆ

ಹುನಗುಂದ; ಮಹಾಮಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಮತ್ತು ಶೀಲ್ ಡೌನ್ ಆಗಿ ಕಡು-ಬಡವರು, ಕೂಲಿಕಾರ್ಮಿಕರು ಅಂಗವಿಕಲರು ಮತ್ತು ಬಡಕುಟುಂಬ ಆಹಾರಕ್ಕಾಗಿ ಹಾಹಾಕಾರ ಸೃಷ್ಟಿಯಾಗಿದೆ ಎಂದು ಬರ್ಡ್ಸ್ ಸಂಸ್ಥೆ ಅಧ್ಯಕ್ಷ ಡಾ: ಮಲ್ಲಣ್ಣ ನಾಗರಾಳ ಹೇಳಿದರು. ಪಟ್ಟಣದ ರಾಷ್ಟಿçÃಯ ಹೆದ್ದಾರಿ ೫೦ಕ್ಕೆ ಹೊಂದಿಕೊoಡಿರುವ ಬರ್ಡ್ಸ್ ಸಂಸ್ಥೆಯ ಕಾರ್ಯಾಲಯದಲ್ಲಿ ಸೋಮವಾರ ಬೆಂಗಳೂರಿನ ಅಂಗವಿಕಲ ಸಂಸ್ಥೆ(ಎಪಿಡಿ)ಮತ್ತು ಬರ್ಡ್ಸ್ ಸಂಸ್ಥೆಯ ಸಹಯೋಗದಲ್ಲಿ ಅಂಗವಿಕಲರಿಗೆ ಮತ್ತು ಕೂಲಿಕಾ ಕಾರ್ಮಿಕರಿಗೆ ೧೯ ಬಗೆಯ ಆಹಾರ ಸಾಮಗ್ರಿಯ ಕಿಟ್ಟನ್ನು ವಿತರಿಸಿ ಮಾತನಾಡಿದ ಅವರು ಭೂಮಿ ಮುನಿದರೆ ಮನುಷ್ಯನ ಬದುಕು ದುಸ್ತರವಾಗುವದು, ನಿಸರ್ಗದ ಸಮತೋಲನ ತಪ್ಪಿದ್ದರಿಂದ ಮಾಹಾಮಾರಿ ಕೊರೊನಾ ದಂತಹ ರೋಗಗಳು ಹೆಚ್ಚುತ್ತಿವೆ. ಕಾರಣ ಪ್ರತಿಯೊಬ್ಬರು ನೈಸರ್ಗಿಕ ಸಂಪತ್ತನ್ನು ಹೆಚ್ಚಿಸಿಕೊಂಡು ಭೂಮಿ ಸಮತೋಲನ ಕಾಪಾಡಬೇಕೆಂದರು. ಸಂಸ್ಥೆಯ ಕಾರ್ಯದರ್ಶಿ ಮಹಂತೇಶ ಅಗಸಿಮುಂದಿನ ಮಾತನಾಡಿ ಅವಳಿ ಸಂಸ್ಥೆಯ ಸಹಯೋಗದಲ್ಲಿ ಈತನಕ ಸಾಕಷ್ಟು ಸಾಮಾಜಿಕ ಕಾರ್ಯಗಳು ನಡೆದಂತೆ ಸಧ್ಯ ಕೊವಿಡ್-೧೯ ಕೊರೊನಾ ಹಿನ್ನೆಲೆಯಾಗಿ ಬಡಕುಟುಂಬಲು ಆಹಾರಕ್ಕಾಗಿ ಪರದಾಡುವ ಸ್ಥಿತಿ ಬಂದಿದೆ. ಅವರ ಸಂಕಷ್ಟದ ಸಮಯದಲ್ಲಿ ನಮ್ಮ ಸಂಸ್ಥೆಗಳು ಕೈಲಾದಷ್ಟು ನಗರದ ನಿರ್ಗಗತಿಕ ೫೦ ಕುಟುಂಬಗಳು ಮತ್ತು ಬಾಗಲಕೋಟ ನಗರದ ೫೦ ಕುಟುಂಬಳಿಗೆ ಒಂದು ತಿಂಗಳ ನಿರ್ವಹಣೆಗೆ ಆಹಾರ ಕಿಟ್ಟನ್ನು ನೀಡಲಾಗಿದೆ. ಸಂಸ್ಥೆಯ ಚೇರಮನ್ ಸಿ.ಜಿ. ಹವಾಲ್ದಾರ, ಸಂಸ್ಥೆ ನಿರ್ದೇಶಕ ಶರಣಪ್ಪಗೌಡ ಅಮರಣ್ಣವರ, ಸಿಬ್ಬಂದಿ ಪ್ರವೀಣ ಅಗಸಿಮುಂದಿನ ಮತ್ತು ಕೃಷ್ಣ ಜಾಲಿಹಾಳ ಇದ್ದರು.

error: