
ಹುನಗುಂದ: ವಿಶ್ವದಾದ್ಯಂತ ಹರಡಿರುವ ಕೊವಿಡ್-೧೯ ಕೊರೊನಾ ವೈರಸ್‌ಗೆ ಚಿಕಿತ್ಸೆ ಸಿಗುವವರೆಗೂ ಸಾಮಾಜಿಕ ಅಂತರ ಕಯ್ದಿಕೊಂಡು ಸುರಕ್ಷಿತವಾಗಿ ಮನೆಯಲ್ಲಿ ಇರಬೇಕೆಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು. ಅವರು ಹುನಗುಂದ ತಾಲೂಕಾ ಆಡಳಿತದ ಸಭಾಭವನದಲ್ಲಿ ಇತ್ತಿಚೆಗೆ ನಗರಕ್ಕೆ ಬೇಟಿ ನೀಡಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರಿಗೆ ಕ್ಷೌರಿಕ ಸಮಾಜ ನೀಡಿದ ಮನವಿಯಂತೆ ಮೇರೆಗೆ ನಗರದ ಕ್ಷೌರಿಕ ಸಮಾಜಕ್ಕೆ ಸರಕಾರದಿಂದ ಆಹಾರ ಸಾಮಾಗ್ರಿ ಕಿಟ್ ವಿತರಿಸಿ ಅವರು ಮತನಾಡುತ್ತ ದೇಶದ ಪ್ರತಿಯೊಂದು ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಸರಕಾರದ ಸೂಚನೆಯಂತೆ ನಡೆದುಕೊಂಡರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೊರೊನಾ ವಿಕ್ಷಣೆಗೆಂದು ಬಂದ ಕೇಂದ್ರವನ್ನು ೩೦ತಾಸುವಗಳ ಕಾಲ ತಡೆದ ಮತಿಗೇಡಿ ಬ್ಯಾನರ್ಜಿಯವರಿಗೆ ದಿಕ್ಕಾರವೆಂದರು. ಇಂತಹ ವಿಷಮ ಸ್ಥಿತಿಯಲ್ಲಿಯೂ ಕೂಡ ರಾಜಕೀಯ ಮಾಡುವದು ಸರಿಯಲ್ಲ. ಮನಸ್ಸು ಮಾಡಿದರೆ ಕೇಂದ್ರ ಸರಕಾರ ಕ್ಷಣದಲ್ಲಿ ನಿರ್ದಾರ ತೆಗೆದುಕೊಳ್ಳಬಹುದಿತ್ತು. ಈಗಲಾದರೂ ತಮ್ಮ ಸರ್ವಾಧಿಕಾರ ಧೋರಣೆಯನ್ನು ಬಿಟ್ಟು ಕೇಂದ್ರದೊoದಿಗೆ ನಡೆದು ಒಗ್ಗಟ್ಟಿನೊಂದಿಗೆ ಕೊರೊನಾ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು. ಈ ಸಂದರ್ಭದಲ್ಲಿ ೩೭ ಕ್ಷೌರಿಕ ಅಂಗಡಿಗಳ ಮಾಲಿಕರಿಗೆ ಮತ್ತು ಕೆಲಸಗಾಟ್ರು ಸೇರಿದಂತೆ ೭೮ ಕ್ಷೌರಿಕ ಕುಟುಂಬಳಿಗೆ ಆಹಾರ ಕಿಟ್‌ಗಳನ್ನು ವಿತರಿಸಲಾಯಿತು. ಇದೆ ವೇಳೆ ತಹಶೀಲ್ದಾರ ಬಸವರಾಜ ನಾಗರಾಳ, ಪುರಸಭೆ ಮುಖ್ಯಧಿಕಾರಿ ಈರಣ್ಣ ಗುಡದಾರಿ, ಪುರಸಭೆ ಸದಸ್ಯರಾದ ಪ್ರವೀಣ ಹಳಪೇಟಿ, ಮಹೇಳಶ ಬೆಳ್ಳಿಹಾಳ, ಲಿಂಗಣ್ಣ ಮುಕ್ಕಣ್ಣವರ ಇದ್ದರು.
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ