December 20, 2024

Bhavana Tv

Its Your Channel

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಧಿಕಾರದ ಕಿತ್ತಾಟದಿಂದ ಹೊರಬರಲಿ-ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ

ಬಾಗಲಕೋಟೆ:- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಧಿಕಾರದ ಕಿತ್ತಾಟದಿಂದ ಹೊರಬರಲಿ ಎಂದು ಕೆಪಿಸಿಸಿ ಹಿಂದುಳಿದ ವರ್ಗದ ಅಧ್ಯಕ್ಷ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಅವರು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕು ಸುಳೇಭಾವಿ ಗ್ರಾಮಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು

ಶನಿವಾರದಂದು ಸುಳೇಭಾವಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಧಿಕಾರದಿಂದ ಕಿತ್ತಾಟದಿಂದ ಹೊರಬರಬೇಕು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ರಾಜ್ಯದ ಜನ ತೀರ್ಮಾನ ಮಾಡಿದ್ದಾರೆ ಈ ಸಂದರ್ಭದಲ್ಲಿ ಸಿಎಂ ಕುರ್ಚ ಆಸೆ ಬಿಟ್ಟು ಪಕ್ಷ ಸಂಘಟನೆ ಹೆಚ್ಚು ಆದ್ಯತೆ ನೀಡಬೇಕು.
ನಾನು ವಿಧಾನಪರಿಷತ್ ಚುನಾವಣೆ ಆಕಾಂಕ್ಷೆ ನಾನಲ್ಲ ಆದರೆ ಇಬ್ಬರು ನಾಯಕರು ಟಿಕೆಟ್ ಕೊಡುವುದಾಗಿ ಭರವಸೆ ನೀಡಿದರು ಆದರೆ ಕೊನೆ ಗಳಿಗೆಯಲ್ಲಿ ಅವಕಾಶ ಸಿಗಲಿಲ್ಲ ನನಗೆ ಬೇಸರ ಆಗಿಲ್ಲ ಆದರೆ ಪಕ್ಷದ ನಾಯಕರು ಯಾರು ಮಾತು ಕೊಡುವುದು ಬೇಡ ಮಾತುಕೊಟ್ಟು ಮಾತು ತಪ್ಪಿದರೆ ಸರಿಯಲ್ಲ ರಾಜಕೀಯದಲ್ಲಿ ಮುಂದುವರೆಯಬೇಕು ಅಥವಾ ನಿವೃತ್ತಿಯಾಗಬೇಕು ಮುಂದಿನ ದಿನಮಾನದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು
ಸ್ತ್ರೀಯರು ಸ್ಥಳದಲ್ಲಿ ಸ್ಥಳದಲ್ಲಿ ಕಾಂಗ್ರೆಸ್ ಮುಖಂಡರಾದ ಬಿ ಎಲ್ ಹರೀಶ್ ಕುಮಾರ್, ಭಾಗಮ್ಮ ಹೇಮಲತಾ ಸೇರಿದಂತೆ ಇತರರು ಇದ್ದರು?
ವರದಿ:-ನಿಂಗಪ್ಪ ಕಡ್ಲಿಮಟ್ಟಿ ಕಮತಗಿ

error: