ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ 8ನೇ ವಾರ್ಡಿನ ಪಟ್ಟಣ ಪಂಚಾಯತಿ ಸದಸ್ಯರಾದ ನಂದಾ ಲಕ್ಷ್ಮಣ್ ದ್ಯಾಮಣ್ಣವರ ಅವರು ಕಳೆದ ಮಾರ್ಚ್ ತಿಂಗಳ21- 22 ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಗೌರವ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಮುರುಗೇಶ ಕಡ್ಲಿಮಟ್ಟಿ ಅವರು ವಹಿಸಿದ್ದರು ಮತ್ತು ಪಾರ್ವತಿ ಪರಮೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶಂಕರಲಿAಗಪ್ಪ ಮಂಕಣಿ ಅವರು ಅತಿಥಿಗಳಾಗಿ ಆಗಮಿಸಿದ್ದರು
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ ಮುರುಗೇಶ್ ಕಡ್ಲಿಮಟ್ಟಿ ಅವರು ಮಾತನಾಡಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶುಭಾಶಯಗಳನ್ನು ಹೇಳುತ್ತಾ ಮುಂದಿನ ವರ್ಷ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಹೆಚ್ಚಿಗೆ ಅಂಕಗಳನ್ನು ಪಡೆದುಕೊಂಡು ಕಮತಗಿಗೆ ಕೀರ್ತಿ ತರಬೇಕೆಂದು ಹೇಳಿದರು ಹಾಗೂ ಈ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದ್ದ ನಂದಾ ಲಕ್ಷ್ಮಣ್ ದ್ಯಾಮಣ್ಣವರ್ ಅವರ ಕುಟುಂಬಕ್ಕೆ ತುಂಬು ಹೃದಯದ ಶುಭಾಶಯಗಳನ್ನು ತಿಳಿಸಿದರು
ಈ ಸಂದರ್ಭದಲ್ಲಿ ನಾಗೇಶ್ ಹುಲ್ಲೂರ್ , ತಿಮ್ಮಣ್ಣ ಹಗೆದಾಳ, ಲಕ್ಷ್ಮಣ್ ಮಾದರ್, ಗುರುಲಿಂಗಪ್ಪ ಪಾಟೀಲ್, ಬಸವರಾಜ ಕುಂಬಳವತಿ, ರಮೇಶ್ ಜಮಖಂಡಿ, ರಮೇಶ್ ಲಮಾಣಿ, ನಾಗೇಶ್ ಮುರಾಳ, ನಾಗಪ್ಪ ಬಾಗೇವಾಡಿ, ಚಂದು ಕುರಿ, ನಬೀಸಾಬ್ ತಶಿಲ್ದಾರ್, ಶಿವಾನಂದ ದ್ಯಾಮಣ್ಣವರ್, ಧರ್ಮಣ್ಣ ನಿಡಗುಂದಿ ಉಪಸ್ಥಿತರಿದ್ದರು ಹಾಗೂ ಕಮತಗಿಯ ಗುರುಹಿರಿಯರು ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಈರಣ್ಣ ಹಡಗಲಿ ಅವರು ನಿರೂಪಿಸಿ ವಂದಿಸಿದರು
ವರದಿ ನಿಂಗಪ್ಪ ಕಡ್ಲಿಮಟ್ಟಿ ಕಮತಗಿ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ