ಬಾಗಲಕೋಟೆ ಜಿಲ್ಲೆಯ ಹುನಗುಂದ್ ತಾಲೂಕಿನ ಕಮತಗಿ ಪಟ್ಟಣದಲ್ಲಿಶ್ರೀ ಮಲ್ಲಿಕಾರ್ಜುನ ಗಾಣಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘ ( ರಿ) ಕಮತಗಿ ಇವರ ವತಿಯಿಂದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ದ್ವಿತೀಯ ವರ್ಷದ ವಾರ್ಷಿಕೋತ್ಸವನ್ನು ಹಮ್ಮಿಕೊಂಡಿದ್ದರು.
ಬೆಳಗಿನ ಜಾವ 5:00 ಗಂಟೆಗೆ ಶ್ರೀ ಮಲ್ಲಿಕಾರ್ಜುನ ಮೂರ್ತಿಗೆ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು ನಂತರ ಶ್ರೀ ಮಲ್ಲಿಕಾರ್ಜುನ ಮೂರ್ತಿಯನ್ನು ವಾದ್ಯ ಮೇಳಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿಲಾಯಿತು. ನಂತರ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಮಹಾಸ್ವಾಮಿಗಳು ಶ್ರೀ ಯೋಗಿ ಕಲ್ಲಿನಾಥ ದೇವರು ಜಗದ್ಗುರು ಶ್ರೀ ದಿಗಂಬರೇಶ್ವರ ಮಠ ಕೋಲಾರ , ಪರಮಪೂಜ್ಯ ಮ ನಿ ಪ್ರ ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಮಠ ಕಮತಗಿ ಕೋಟೆಕಲ್, ಪರಮಪೂಜ್ಯ 1008 ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಕಮತಗಿ ಹಾಗೂ ಮಾತೋಶ್ರೀ ಬಸವನ್ನೆಮ್ಮತಾಯಿ ಬಸರಕೋಡ ಎಲ್ಲಮ್ಮ ದೇವಿ ದೇವಸ್ಥಾನ ಕಮತಲ ಯವರು ಸಾನಿಧ್ಯವನ್ನು ವಹಿಸಿದ್ದರು ಮತ್ತು ಅಧ್ಯಕ್ಷತೆಯನ್ನು ಶಾಸಕ ಡಾಕ್ಟರ್ ವೀರಣ್ಣ ಸಿ ಚರಂತಿಮಠ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಮತ್ತು ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಅಶೋಕ್ ಲಾಗಲೋಟಿ ಮತ್ತು ಸಂಗಣ್ಣ ಹುಚ್ಚಪ್ಪ ಗಾಣಿಗೇರ್, ಜಿಲ್ಲಾಧ್ಯಕ್ಷರು ಕವಿತಾ ಎಳ್ಳಮ್ಮಿ, ಭಾರತಿ ದೇಸಾಯಿ ಹುನಗುಂದ ಹಾಗೂ ಸಮಾಜದ ಅಧ್ಯಕ್ಷರು ಮತ್ತು ಸಮಾಜದ ಎಲ್ಲ ಗುರುಹಿರಿಯರು ಹಾಗೂ ಕಮತಗಿ ಸುತ್ತಮುತ್ತಲಿನ ಗ್ರಾಮಗಳ ಜನರು ಭಾಗವಹಿಸಿದ್ದರು
ವರದಿ ನಿಂಗಪ್ಪ ಕಡ್ಲಿಮಟ್ಟಿ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ