December 21, 2024

Bhavana Tv

Its Your Channel

ರಾಜ್ಯಮಟ್ಟದ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಪ್ರದಾನ

ಬಾಗಲಕೋಟ ಜಿಲ್ಲೆ ಹುನಗುಂದ್ ತಾಲೂಕಿನ ಕಮತಗಿ ಪಟ್ಟಣದ ಪ್ರತಿಷ್ಠಿತ ಶ್ರೀ ಪಾರ್ವತಿ-ಪರಮೇಶ್ವರ ಪತ್ತಿನ ಸಹಕಾರಿ ಸಂಘಕ್ಕೆ ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನೀಡುವ ರಾಜ್ಯ ಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿಯನ್ನು ಇಂದು ಸಂಘದ ಅಧ್ಯಕ್ಷರಾದ ಶಂಕರಲಿAಗಪ್ಪ ಎಸ್. ಮಂಕಣಿ ಅವರಿಗೆ ನೀಡಲಾಯಿತು
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಇಂದು ನಡೆದ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭದಲ್ಲಿ ಕಮತಗಿ ಪಟ್ಟಣದ ಶ್ರೀ ಪಾರ್ವತಿ-ಪರಮೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಂಕರಲಿAಗಪ್ಪ ಎಸ್. ಮಂಕಣಿ ಅವರಿಗೆ ಪ್ರಶಸ್ತಿ ಫಲಕ ಹಾಗೂ ನೆನಪಿನ ಕಾಣಿಕೆ ನೀಡಿ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಅವರರು ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಗುರುನಾಥ ಜಾಪಾಳ, ನಿರ್ದೇಶಕರಾದ ಸುರೇಶ ಹಳ್ಳದ, ನಾಗೇಶ್ ಹುಲ್ಲೂರ್, ಯಲ್ಲಪ್ಪ ವಡ್ಡರ, ವ್ಯವಸ್ಥಾಪಕರಾದ ರಾಜಕುಮಾರ ಜಾಪಾಳ, ಸಂತೋಷ ಅಚನೂರ್ ಸೇರಿದಂತೆ ಇತರರು ಇದ್ದರು.

ವರದಿ ನಿಂಗಪ್ಪ ಕಡ್ಲಿಮಟ್ಟಿ

error: