December 21, 2024

Bhavana Tv

Its Your Channel

ಶ್ರೀ ಸಂಗಮೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಉಚಿತ ದಂತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ

ಬಾಗಲಕೋಟ್ ಜಿಲ್ಲೆಯ ಬ ವ್ಹಿ ವ್ಹಿ ಸಂಘ ಬಾಗಲಕೋಟ ಶ್ರೀ ಸಂಗಮೇಶ್ವರ ಪದವಿಪೂರ್ವ ಮಹಾವಿದ್ಯಾಲಯ ಕೂಡಲಸಂಗಮದಲ್ಲಿ ದಿನಾಂಕ 25-11-2022 ರಂದು ಶ್ರೀ ಸಂಗಮೇಶ್ವರ ಪದವಿ ಪೂರ್ವ ಕಾಲೇಜು ಪಿಎಂ ನಾಡಗೌಡ ದಂತ ವೈದ್ಯಕೀಯ ಮಹಾವಿದ್ಯಾಲಯ ಬಾಗಲಕೋಟೆ ಹಾಗೂ ಪ್ರಾಥಮಿಕ ಆರೋಗ್ಯ ಸಮುದಾಯ ಕೇಂದ್ರ ಕೂಡಲಸಂಗಮ. ಇವರ ಸಹಯೋಗದೊಂದಿಗೆ. “ಉಚಿತ ದಂತ ತಪಾಸಣಾ ಹಾಗೂ ಚಿಕಿತ್ಸಾ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸಮಾರಂಭದಲ್ಲಿ ವಿದ್ಯಾರ್ಥಿನಿಯರು ಸ್ವಾಗತಗೀತೆಯಿಂದ ಸ್ವಾಗತಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರ.ಪ್ರಾಚಾರ್ಯರಾದ ಬೂದೇಶ್ವರ ಎಸ್ ಎಸ್ ರವರು ವಹಿಸಿದ್ದರು ವೇದಿಕೆಯಲ್ಲಿ ಡಾ. ಆನಂದ್ ಹಿರೇಮಠ್ ಡಾ.ಶಿಲ್ಪಾ ಸಿಂಗೆ, ಡಾ. ಸಾವಿತ್ರಿ ಸಜ್ಜನ್ ಹಾಗೂ ಡಾ. ಬಾಬುರೆಡ್ಡಿ ಕೆಂಗಲ್ಗುತ್ತಿ ವೇದಿಕೆಯಲ್ಲಿ ಇದ್ದರು.

ಡಾ. ಆನಂದ್ ಹಿರೇಮಠರವರು ವಿದ್ಯಾರ್ಥಿಗಳಿಗೆ ಸಭೆಯಲ್ಲಿ ಫ್ಲೋರಿಸಿಸ್ ಕುರಿತು ಜಾಗೃತಿ ಮೂಡಿಸಿದರು. ಡಾ. ಶಿಲ್ಪ ಸಿಂಗೆ ಅವರು ಹಲ್ಲಿನ ಮಹತ್ವ ಮತ್ತು ಅವುಗಳನ್ನು ಕಾಪಾಡಿಕೊಳ್ಳುವ ರೀತಿಯ ಬಗ್ಗೆ ತಿಳಿಸಿದರು.ಬೂದೇಶ್ವರ.ಎಸ್ ಎಸ್ ಪ್ರ. ಪ್ರಾಚಾರ್ಯರು ಅಧ್ಯಕ್ಷಿಯ ಪರ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಬಿ.ಕೆ ಹಿರೇಮಠ್ ಹಿರಿಯ ಉಪನ್ಯಾಸಕರು, ಜಿ.ಕೆ ಕಡ್ಲಿಮಟ್ಟಿ ಎನ್ ಎಸ್ ಎಸ್ ಸಂಯೋಜನಾಧಿಕಾರಿ, ಎಚ್ ಬಿ.ವನಕಿ, ಪಿ ಎನ್ ಮಾಚಕನೂರ ಕಾರ್ಯಕ್ರಮ ನಿರೂಪಿಸಿದರು ಜಿ ಕೆ ಕಡ್ಲಿಮಟ್ಟಿ ವಂದಿಸಿದರು.
ವರದಿ ನಿಂಗಪ್ಪ ಕಡ್ಲಿಮಟ್ಟಿ

error: