ಬಾಗಲಕೋಟ ಜಿಲ್ಲೆಯ ಹುನಗುಂದ ತಾಲ್ಲೂಕಿನ ಕಮತಗಿ ಪಟ್ಟಣದಲ್ಲಿ ಶ್ರೀ ಹೊಳೆ ಹುಚ್ಛೇಶ್ವರ ವಿದ್ಯಾವರ್ಧಕ ಸಂಘದ ಶ್ರೀಮತಿ ಯೋಗಿನಿದೇವಿ ಆರ್ ಪಾಟೀಲ್ ಗ್ರಾಮೀಣ ಮಹಿಳಾ ಶಿಕ್ಷಣ( ಬಿ ಎಡ್) ಮಹಾವಿದ್ಯಾಲಯ ಕಮತಗಿ ಇವರ 2020- 22ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ
ದೀಪದಾನ ಸಮಾರಂಭದ ಕಾರ್ಯಕ್ರಮವನ್ನು ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘ ಕಮತಗಿಯ ಅಧ್ಯಕ್ಷರಾದ ಶ್ರೀ ಮ ನೀ ಪ್ರ ಹುಚ್ಚೇಶ್ವರ ಮಹಾಸ್ವಾಮಿಗಳು ಇವರ ದಿವ್ಯ ಸಾನಿಧ್ಯದಲ್ಲಿ ನೆರವೇರಿಸಿದರು.
2019- 21 ನೇ ಸಾಲಿನ ಬಿ ಎಡ್ ವಿಭಾಗದಲ್ಲಿ 7 ರಾಂಕುಗಳನ್ನು ಪಡೆದ ಹುಚ್ಚೇಶ್ವರ ವಿದ್ಯಾಲಯದ ಸಾಧಕಿಯರಿಗೆ ಗೌರವ ಸನ್ಮಾನವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಪೂಜ್ಯಶ್ರೀಗಳು ಮಾತನಾಡಿ ಈ ವರ್ಷ ನಮ್ಮ ಕಾಲೇಜಿಗೆ 7 ರ‍್ಯಾಂಕಗಳು ಬಂದಿದ್ದು ನಮಗೆಲ್ಲರಿಗೂ ತುಂಬಾ ಸಂತೋಷದಾಯಕವಾಗಿದ್ದು ಹೀಗೆ ಮುಂದಿನ ವರ್ಷದಲ್ಲಿ ಎಲ್ಲ 10 ರ‍್ಯಾಂಕಗಳು ನಮ್ಮ ಕಾಲೇಜಿನ ವಿದ್ಯಾರ್ಥಿನಿಯರಿಗೆ ಲಭಿಸಬೇಕೆಂದು ಆಶಿಸಿದರು ಹಾಗೂ ಅಂತಿಮ ವರ್ಷದ ಬಿಎಡ್ ವಿದ್ಯಾರ್ಥಿಗಳಿಗೆ ದೀಪದಾನ ಕಾರ್ಯಕ್ರಮದ ಮೂಲಕ ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲೆಂದು ಶುಭ ಹಾರೈಸಿ ಅವರನ್ನು ಬೀಳ್ಕೊಡಲಾಯಿತು ಹಾಗೂ ಈ ಸಾಲಿನ ಪ್ರಥಮ ವರ್ಷದ ಬಿಎಡ್ ಪ್ರಶಿಕ್ಷಣಾರ್ಥಿಗಳನ್ನು ವಿದ್ಯಾಲಯಕ್ಕೆ ಸ್ವಾಗತಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಿ ವಿ ವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಬಾಗಲಕೋಟೆಯ ಪ್ರಾಚಾರ್ಯರು ಎಸ್ ಜೆ ಒಡೆಯರ್ , ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘ ಕಮತಗಿಯ ಕಾರ್ಯದರ್ಶಿ ಬಸವರಾಜ್ ,ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘ ಕಮತಗಿಯ ಉಪ ಕಾರ್ಯದರ್ಶಿ ವಿದ್ಯಾಧರ್ ಆರ್ ಮಳ್ಳಿ, ಶ್ರೀ ಹುಚ್ಚೇಶ್ವರ ವಿದ್ಯಾವರ್ಧಕ ಸಂಘ ಕಮತಗಿಯ ಆಡಳಿತಾಧಿಕಾರಿ ಅನಿಲ್ ಕುಮಾರ್ ಎಸ್ ಕಲ್ಯಾಣ ಶೆಟ್ಟಿ ಇವರೆಲ್ಲರೂ ಈ ಸಂದರ್ಭದಲ್ಲಿ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಹಂಪಮ್ಮ ಎಸ್ ಎಂ ಹೊಟ್ಟಿಗೌಡ್ರು ದಂಪತಿಗಳಿಗೆ ಹಾಗೂ ಅನಿತಾ ಎಸ್ ಕದಂ ಶಿಕ್ಷಕಿಯರು ಹಾಗೂ ಮಲ್ಲಮ್ಮ ವೈ ವಡ್ಡರ್ ಸಹಶಿಕ್ಷಕಿಯರು ಎಲ್ಲಾ ಸಾಧಕರಿಗೆ ಪೂಜ್ಯಶ್ರೀಗಳಿಂದ ಗೌರವ ಶ್ರೀ ರಕ್ಷೆ ನೀಡಲಾಯಿತು ಈ ಕಾರ್ಯಕ್ರಮವನ್ನು ಕುಮಾರಿ ಭಾಗ್ಯಶ್ರೀ ಸಾ ಕಾ ಇವರು ನಿರೂಪಿಸಿ ವಂದಿಸಿದರು
ವರದಿ: ನಿಂಗಪ್ಪ ಕಡ್ಲಿಮಟ್ಟಿ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ