May 3, 2024

Bhavana Tv

Its Your Channel

ಕಮತಗಿ ಪಟ್ಟಣದ ಶ್ರೀ ಹುಚ್ಚೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪಾಲಕರ ಸಭೆ

ಬಾಗಲಕೋಟ ಜಿಲ್ಲೆ ಕಮತಗಿ ಪಟ್ಟಣದ ಶ್ರೀ ಹುಚ್ಚೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪಾಲಕರ ಸಭೆಯನ್ನು ನಡೆಸಲಾಯಿತು

ಈ ಸಭೆಯಲ್ಲಿ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕರಾದ ಬಿ ಎಚ್ ಕಂಬಾಳಿ ಮಠ ಅವರು ಪ್ರಾಸ್ತಾವಿಕ ಮಾತನಾಡಿ ಮಕ್ಕಳಿಗೆ ಮೊಬೈಲ್ ಮತ್ತು ಟಿವಿಗಳಿಂದ ದೂರ ಮಾಡಿ ಅವರನ್ನು ಓದಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಅರ್ಥಶಾಸ್ತ್ರ ಉಪನ್ಯಾಸಕರಾದ ಎಸ್ ಕೆ ಮುತ್ತಲಗೇರಿ ಅವರು ನಮ್ಮ ಕಾಲೇಜಿನ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಾವುಗಳು ಕ್ವಿಜ್ ಘಟಕ ಪರೀಕ್ಷೆಗಳು ಸೆಮಿನಾರುಗಳನ್ನು ಮಾಡಿಸುವುದರ ಮೂಲಕ ವಾರ್ಷಿಕ ಪರೀಕ್ಷೆ ತಯಾರು ಮಾಡುತ್ತೇವೆ ಎಂದು ಹೇಳಿದರು
ಪಾಲಕರ ಪರವಾಗಿ ಗೋಪಾಲ್ ಕಟಗೇರಿ ಅವರು ಮಾತನಾಡಿ ನಮ್ಮ ಮಕ್ಕಳ ಪ್ರಗತಿಗೆ ಶಿಕ್ಷಕರ ಜೊತೆ ನಾವು ಕೈಜೋಡಿಸಿದಾಗ ಮಾತ್ರ ಮಕ್ಕಳ ಪ್ರಗತಿಯಾಗುತ್ತದೆ ಎಂದು ಹೇಳಿದರು. ಆಡಳಿತ ಅಧಿಕಾರಿಗಳಾದ ಅನಿಲ್ ಕುಮಾರ್ ಕಲ್ಯಾಣ ಶೆಟ್ಟಿ ಅವರು ಮಾತನಾಡಿ ಮಕ್ಕಳಿಗಾಗಿ ಆಸ್ತಿಯನ್ನು ಮಾಡದೆ ಅವರಿಗೆ ನೈತಿಕ ಶಿಕ್ಷಣ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಪರೀಕ್ಷೆಗೆ ಈಗಿಂದಲೇ ಪಾಲಕರು ಓದುವುದರ ಮೂಲಕ ತಯಾರು ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಎಸ್ ವಿ ಬಾಗೇವಾಡಿ ವಹಿಸಿ ಅವರು ಮಾತನಾಡಿ ವಿದ್ಯಾರ್ಥಿಗಳ ಯಶಸ್ವಿಗೆ ಶಿಕ್ಷಕ ಬಾಲಕ ಮತ್ತು ಪಾಲಕ ಈ ಮೂವರ ಪಾತ್ರ ಬಹಳ ಮುಖ್ಯವಾಗಿದೆ ವಿದ್ಯಾರ್ಥಿಗಳ ಪರೀಕ್ಷೆಗೆ ನೈತಿಕ ಬಲ ತುಂಬುವುದು ಇಂದು ಅಗತ್ಯವಾಗಿದೆ. ಕಾರ್ಯಕ್ರಮದಲ್ಲಿ ಎನ್ ಪಿ ಹುಲಮನಿ ಗೌಡ, ಮಲ್ಲಿಕಾರ್ಜುನ್ ಶೆಟ್ಟರ್ ಶ್ರೀಮತಿ ಎಸ್ ಆರ್ ಪೂಜಾರ್ ಉಪಸ್ಥಿತರಿದ್ದರು ಬಿ ವಿ ಬೀರಕಬ್ಬಿ ಸ್ವಾಗತಿಸಿ ವಂದಿಸಿದರು.

ವರದಿ ; ನಿಂಗಪ್ಪ ಕೆ ಬಾಗಲಕೋಟೆ

error: