December 21, 2024

Bhavana Tv

Its Your Channel

ಪದ್ಮಶ್ರೀ ಪುರಸ್ಕೃತರು ಹಾಗೂ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ಕಲಾವಿದರಿಗೆ ಇಲಕಲ್ಲ ನಗರದ ನಾಟ್ಯ ರಾಣಿ ಕಲಾ ಸಂಘದ ವತಿಯಿಂದ ಸತ್ಕಾರ.

ಬಾಗಲಕೋಟೆ: ಜಿಲ್ಲೆಯ ಇಲಕಲ್ಲ ನಗರದ ನಾಟ್ಯರಾಣಿ ಕಲಾ ಸಂಘದ ೧೫ ವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಮಂಜಮ್ಮ ಜೋಗತಿ ಅವರನ್ನು ಗೌರವಹಿಸಿ ಸತ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಮಾಜ ಸೇವಕರ ಎಸ್. ಆರ್ .ನವಲಿಹಿರೇಮಠ್ ಅವರು ಮಾತನಾಡಿ ಕಲಾವಿದರಿಗೆ ಸರ್ಕಾರದ ಸೌಲಭ್ಯ ಅವಶ್ಯಕತೆ ಇದೆ ಎಂದು ತಿಳಿಸಿದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಇಲಕಲ್ ಚಿತ್ತರಗಿ ಸಂಸ್ಥಾನಮಠದ ಗುರು ಮಹಾಂತ ಸ್ವಾಮಿಗಳು ಪ್ರಶಸ್ತಿ ಪುರಸ್ಕೃತರಿಗೆ ಗೌರವಿಸಿ ಸತ್ಕರಿಸಿ ಆಶಿರ್ವಾದಿಸಿದರು . ವೇದಿಕೆ ಮೇಲೆ ನಾಟ್ಯರಾಣಿ ಕಲಾಸಂಘದ ಅಧ್ಯಕ್ಷ ಉಮಾರಾಣಿ ಬಾರಿಗಿಡದ . ನಗರಸಭೆ ಅಧ್ಯಕ್ಷೆ ಶೋಭಾ ಆಮದಿಹಾಳ ನಗರಸಭೆ ಉಪಾಧ್ಯಕ್ಷೆ ಸವಿತಾ ಆರಿ. ಗೌಡಪ್ಪ ಕರಡಿ. ಬಿಡಪ್ಪ ಗಾಣದಾಳ್. ಪದ್ಮಶ್ರೀ ಪ್ರಶಸ್ತಿ ವಿಜೇತ ಮಂಜಮ್ಮ ಜೋಗತಿ. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ.
ಸೋಮಣ್ಣ. ತಿಮ್ಮಣ್ಣ ಗೌಡ ಮೇಲು ಸೀಮೆ. ಎಚ್.ವಿ ಪತ್ತಾರ . ಅನ್ನಪೂರ್ಣ ಹೊಸಮನಿ. ಕೃಷ್ಣ ಬೆನ್ನೂರ್. ರೇಷ್ಮಾ ಅಳವಂಡಿ. ಸ್ನೇಹರಂಗ ಹಾಗೂ ನಗರದ ನಾಟಕ ಅಭಿಮಾನಿಗಳು ಉಪಸ್ಥಿತರಿದ್ದರು .

ವರದಿ:- ಶರಣಗೌಡ ಕ೦ದಕೂರ

error: