ಇಲಕಳ್ ; ಸಮಾಜಮುಖಿ ಕೆಲಸ ನಿರ್ವಹಿಸುವ ಇಲಕಳ್ ಎಸ್.ಆರ್.ಎನ್. ಫೌಂಡೇಶನ್ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶಿಷ್ಠವಾಗಿ ಆಚರಿಸಿದರು.
ಕಾರ್ಯಕ್ರಮವನ್ನು ಎಸ್.ಆರ್.ಎನ್.ಇ ಫೌಂಡೇಶನ್ ಅಧ್ಯಕ್ಷ ಎಸ್.ಆರ್. ನವಲಿಹಿರೇಮಠ ಅವರ ಧರ್ಮಪತ್ನಿ ರೇಖಾ ನವಲಿಹಿರೇಮಠ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಚಿತ್ರಕಲೆಯಲ್ಲಿ ಸಾಧನೆಗೈದ ಭವಾನಿ ಕಾಂಬ್ಳೆ ಹಾಗೂ ಇಂಡಿಯನ್ ಬುಕ್ ಆಫ್ ರೆಕಾರ್ಡಗೆ ಸೇರಿದ ೬ ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು.
ಸಹಾಯವನ್ನರಸಿ ಬಂದಿದ್ದ ಇಳಕಲ್ಲಿನ ನಾರಾಯಣ ಚಿತ್ರಮಂದಿರ ಹತ್ತಿರ ಬೆಂಕಿ ಅವಘಡದಲ್ಲಿ ಮನೆಕಳೆದುಕೊಂಡಿದ್ದ ೬ ಕುಟುಂಬಗಳಿಗೆ ಅಡುಗೆ ಪಾತ್ರೆಗಳನ್ನು ಕೊಡಿವುದಾಗಿ ವೇದಿಕೆಯಯಲ್ಲಿ ಹೇಳಿದರು.
ಕಾರ್ಯಕ್ರಮದ ಕುರಿತು ಮಾತನಾಡಿದ ಸಮಾಜ ಸೇವಕ ಎಸ್.ಆರ್.ನವಲಿಹಿರೇಮಠ ಗುಡಿಸಲು ಮುಕ್ತ ತಾಲೂಕನ್ನಾಗಿ ಮಾಡುವುದೇ ನನ್ನ ಪರಮ ಗುರಿ ಎಂದು ಹೇಳಿದರು,
ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದ ಮಹಿಳೆಯರಿಗೆ ಫೌಂಡೇಶನ್ ವತಿಯಿಂದ ಸೀರೆ ಹಂಚಲಾಯಿತು. ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ ನಾಗಲೋಟಿ, ಸವಿತಾ ಚನ್ನಾ, ನಗರಸಭೆ ಸದಸ್ಯೆ ವೀಣಾ ಅರಳಿಕಟ್ಟಿ, ಸವಿತಾ ಚನ್ನಾ, ಬಸಮ್ಮ ಕರ್ಲಿ, ಸಮಾಜ ಸೇವಕ ಅಬ್ದಲ್ ರಜಾಕ ತಟಗಾರ, ಯುವ ಮುಖಂಡ ಚೇತನ್ ಮುಕ್ಕಣ್ಣವರ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ