December 19, 2024

Bhavana Tv

Its Your Channel

ತನ್ನ ತಪ್ಪು ಸಂಸದರ ಮೇಲೆ ಹಾಕಿದ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ

ಮುಖ್ಯಾಧಿಕಾರಿ ಅಮಾನತ್ತಿಗೆ ಜಿಲ್ಲಾಧಿಕಾರಿ ಆಗ್ರಹಿಸಿದ ಕಾಂಗ್ರೆಸ ಸದಸ್ಯರ

ಬಾಗಲಕೋಟೆ: ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿತ್ತು ಎಂಬoತೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ತಾನು ಮಾಡಿದ ತಪ್ಪನ್ನು ಸಂಸದರ ಮೇಲೆ ಹಾಕಿ ಒಬ್ಬ ಸಂಸದರ ಘನತೆ ಗೌರವ ಕಡಿಮೆ ಮಾಡಿದ ಘಟನೆ ಬಾಗಲಕೋಟ ಜಿಲ್ಲೆ ಬಾದಾಮಿ ತಾಲೂಕಿನ ಕೆರೂರ ಪಟ್ಟಣ ಪಂಚಾಯತ ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಪಟ್ಟಣ ಪಂಚಾಯತ ಅಧ್ಯಕ್ಷೆ ಅನಾರೋಗ್ಯದ ಕಾರಣ ಪಟ್ಟಣ ಪಂಚಾಯಿತ ಸಾಮಾನ್ಯ ಸಭೆ ಮುಂದೂಡಿ ಎಂದು ಪತ್ರ ಬರೆದಿದ್ದರು. ಪಟ್ಟಣ ಪಂಚಾಯತ ಮುಖ್ಯಾಧಿಖಾರಿ ಅಧ್ಯಕ್ಷರ ಆದೇಶ ಗಾಳಿಗೆ ತೂರಿ ಸಾಮಾನ್ಯ ಸಭೆ ನಡೆಸಿದ್ದು,
ಘಟನೆಗೆ ಕಾರಣವಾದ ಮುಖ್ಯಾಧಿಕಾರಿ ಮಾರುತಿ ನಡುವಿನಕೇರಿಯನ್ನ ಅಮಾನತು ಮಾಡಿ ಎಂದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

ಘಟನೆ ವಿವರ:-
ಕೆರೂರ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ತಿಮ್ಮಾಪುರ ಎಂಬುವರು ತಮ್ಮ ಅನಾರೋಗ್ಯದ ಕಾರಣ ಸಭೆಯನ್ನು ಮುಂದೂಡಿ ಎಂದು ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದಾರೆ. ಆದ್ರು ಸಭೆ ನೆಡೆಸಿದ ಮುಖ್ಯಾಧಿಕಾರಯನ್ನ ಕಾಂಗ್ರೆಸ ಸದಸ್ಯರು ಕಾರಣ ಕೇಳಿದ್ದಾರೆ. ಸಭೆ ನಡೆಸಿ ತಪ್ಪು ಮಾಡಿದ ಮುಖ್ಯಾಧಿಕಾರಿ ಮಾರುತಿ ನಡುವಿನಕೇರಿ ತಾನು ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಲು ಸಂಸದರ ಆದೇಶ ಮೇರೆಗೆ ಸಭೆ ನಡೆಸಿದ್ದೆನೆ ಎಂಬ ಸುಳ್ಳು ಹೇಳಿಕೆ ನೀಡಿದ್ದು ಕಾಂಗ್ರೆಸ ಸದಸ್ಯರನ್ನು ರೋಸಿ ಹೋಗುವಂತೆ ಮಾಡಿದೆ. ಒಬ್ಬ ಸಂಸದರಾಗಿ ಪಟ್ಟಣ ಪಂಚಾಯ್ತಿ ಯಲ್ಲಿ ಬಂದು ರಾಜಕೀಯ ಮಾಡುತ್ತಾರೆ ಸಂಸದರು ತಮ್ಮ ಘನತೆಗೆ ಗೌರವಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ಬಾಗಲಕೋಟ ಸಂಸದ ಪಿ ಸಿ ಗದ್ದಿಗೌಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಪಟ್ಟಣ ಪಂಚಾಯತ ಅಧ್ಯಕ್ಷೆ ಎಸ್ ಟಿ ಸಮುದಾಯಕ್ಕೆ ಸೇರಿದ ಮಹಿಳೆಯಾಗಿದ್ದು ಸಂಸದರು ಎಸ್ಟಿ ಮಹಿಳೆ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿ ಅವರನ್ನು ಅವಮಾನಿಸಿದ್ದಾರೆ ಸಂಸದರ ಮೇಲೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಅಧ್ಯಕ್ಷರ ಗೈರಿನ ನಡುವೆ ಸಭೆ ನಡೆಸಿದ ಮುಖ್ಯಾಧಿಕಾರಿ ಆಡಳಿತ ನಡೆಸದೆ ರಾಜಕೀಯ ಮಾಡುತ್ತಿದ್ದಾರೆ ಇಷ್ಟೆಲ್ಲ ಘಟನೆಗಳಿಗೆ ಮುಖ್ಯಾಧಿಕಾರಿ ಕಾರಣ ಕೂಡಲೇ ಅವರನ್ನ ಅಮಾನತು ಮಾಡಬೇಕೆಂದು ಪಟ್ಟಣ ಪಂಚಾಯಿತ ಕಛೇರಿ ಮುಂದೆ ಪಟ್ಟಣ ಪಂಚಾಯತ ಆಡಳಿತರೂಢಿ ಕಾಂಗ್ರೆಸ್ ಸದಸ್ಯರು ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದಾರೆ.
ಮುಖ್ಯಾಧಿಕಾರಿ ತಮ್ಮ ಕೋಪ ಕಛೇರಿ ಮಹಿಳಾ ಸಿಬ್ಬಂದಿ ಮೇಲೆ ತೋರಿದ್ದು ಟೈಪಿಸ್ಟ್ ಮಂಜುಳಾ ಕಛೇರಿಯಲ್ಲಿ ಕಣ್ಣಿರು ಹಾಕಿದ್ದಾಳೆ.

ಘಟನೆ ಜಿಲ್ಲೆಯ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು ಮಾಜಿ ಸಿಎ ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ವರೆಗೂ ತಲುಪಿದೆ ಮುಂದೆ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ನೋಡಬೇಕು

ವರದಿ:-ದಾವಲ್ ಶೇಡಂ

error: