December 21, 2024

Bhavana Tv

Its Your Channel

ಲಾಕ್ ಡೌನ್ ನಲ್ಲಿ ಅಳಿಲಿನ ಪ್ರಾಣ ಉಳಿಸಿ ಮಾನವೀಯತೆ ಮೆರೆದ ಇಳಕಲ್‌ನ ಯುವ ಮಿತ್ರರು.

ಇಳಕಲ್: ಮೂರು ದಿನಗಳಿಂದ ಲಾಕ್ ಡೌನ್ ನಿಂದ ಜನರೆ ಇಲ್ಲದಂತಾಗಿದೆ, ರಸ್ತೆಯ ಪಕ್ಕದಲ್ಲಿನ ಅರಳಿ ಮರದಿಂದ ೩೦ ಪೂಟ್ ಮೇಲಿಂದ ಬಿದ್ದು ಎದ್ದು ಒಡಾಡದ ಪರಿಸ್ತಿತಿಯಲ್ಲಿತ್ತು, ಆ ಅಳಿಲನ್ನು ಇಳಕಲ್‌ನ ಯುವ ಮಿತ್ರರು ನೀರುಣಿಸಿ ಅದನ್ನ ಮತ್ತೆ ಜೀಗಿಯುವಂತೆ ಮಾಡಿದ ಹೃದಯ ಸ್ಪರ್ಶಿ ಘಟನೆ ಇಳಕಲ್ ಹೃದಯ ಭಾಗವಾದ ಎಸ್ . ಆರ್ ವೃತ್ತ ಪಕ್ಕದಲ್ಲಿರುವ ಬನಶಂಕರಿ ದೇವಸ್ಥಾನದ ಹತ್ತಿರ ನಡೆದಿದೆ.
ಮನುಷ್ಯ ಮನುಷ್ಯರಿಗೆ ಸಹಾಯ ಮಾಡದ ಇಂತಹ ಕರೋನಾ ಪರಿಸ್ಥಿತಿಯಲ್ಲಿಯೂ ಅಳಿಲು ಕೂಡ ನಮ್ಮಂತಹ ಜೀವಿ ಎಂದು ಅದಕ್ಕೆ ನೀರು ಕುಡಿಸಿ ಪುನರ್ ಜನ್ಮ ನೀಡಿದ ಈ ಯುವ ಮಿತ್ರರಾದ ಇರ್ಫಾನ್ ಚೋಪದಾರ. ಮಲ್ಲು .ಸಲೀಂ ನರೇಗಲ್ ಮತ್ತು ಪ್ರಶಾಂತ್ ಇವರನ್ನು ಇಳಕಲ್ ಜನರು ಪ್ರಶಂಸೆ ವ್ಯಕ್ತಪಡಿಸಿದರು.
ವರದಿ: ವಿನೋದ ಬಾರಿಗಿಡದ. ಇಳಕಲ್

error: