December 19, 2024

Bhavana Tv

Its Your Channel

ಒಳಚರಂಡಿ ಮತ್ತು ರಸ್ತೆ ಕಾಮಗಾರಿ ಮಾಡುವಂತೆ ನಗರಸಭೆಯ ಅಧ್ಯಕ್ಷರಿಗೆ ಮನವಿ.

ಇಳಕಲ್ ನಗರದ ಗೌಳೇರ್ ಗುಡಿಯ ಕುಂಬಾರ್ ಪ್ಲಾಟ್ ನಲ್ಲಿ ಸುಮಾರು ಹದಿನೆಂಟರಿAದ ಇಪ್ಪತ್ತು ವರ್ಷದಿಂದ ಜನರು ವಾಸಿಸುತ್ತಿದ್ದಾರೆ. ಹೀಗಾಗಿ ನಮಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಗೌಳೆರ ಗೂಡಿಯ ಫ್ಲಾಟ್‌ನ ಜನರು ಇಳಕಲ್ ನಗರಸಭೆಯ ಅಧ್ಯಕ್ಷೆ ರಾದ ಶೋಭಾ ಆಮದಿಹಾಳ ರಿಗೆ ಮನವಿ ಸಲ್ಲಿಸಿದರು.

ಶೌಚಾಲಯ. ರಸ್ತೆ ಸರಿಯಾಗಿ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.ಚರAಡಿ ನೀರು ಸ್ನಾನದ ನೀರು ರಸ್ತೆಯಲ್ಲಿ ಬಂದು ನಿಲ್ಲುವುದರಿಂದ ಸಾಂಕ್ರಾಮಿಕ ರೋಗಗಳು ಹರಡಲು ಇದು ಕಾರಣವಾಗಿದೆ. ಎಂದು ಸಮಸ್ಯೆಗಳ ಸರಮಾಲೆಯನ್ನೇ ಕಮಿಷನರ್ ಅವರಿಗೆ ಹೇಳಿದರು.

ಹೀಗಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಅಲ್ಲಿಯ ಜನರು ಮನವಿ ನೀಡಿದರು.ಇದಕ್ಕೆ ನಗರಸಭೆ ಅಧ್ಯಕ್ಷರಾದ ಶೋಭಾ ಆಮದಿಹಾಳ ಮನವಿಗೆ ಸ್ಪಂದಿಸಿ ಆದಷ್ಟು ಬೇಗನೆ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಹೇಳಿದರು.

ನಗರಸಭೆಯ ಸದಸ್ಯರಾದ ರೇಶ್ಮಾ ಮಾರಬಸರಿ. ಅಮೃತ ಬಿಜಲ್ .ರಾಜು ದೊಡಮನಿ. ನಗರಸಭೆಯ ಹಿರಿಯ ಸದಸ್ಯ ಲಕ್ಷ್ಮಣ ಗುರಂ ಇತರರು ಇದ್ದರು.

ವರದಿ : ವಿನೋದ ಬಾರಿಗಿಡದ

error: