September 27, 2021

Bhavana Tv

Its Your Channel

ಇಳಕಲ್ ತಹಶಿಲ್ದಾರ ಕಛೇರಿಯಲ್ಲಿ ಕಂದಾಯ ದಿನಾಚರಣೆ

ಇಳಕಲ್ ತಹಶಿಲ್ದಾರ ಕಛೇರಿಯಲ್ಲಿ ಕಂದಾಯ ದಿನಾಚರಣೆ ನಿಮಿತ್ತ ಹಸಿರೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು

ಇಳಕಲ್ ; ರಾಜ್ಯದಾದ್ಯಂತ ಜುಲೈ ೧ ಕಂದಾಯ ದಿನಾಚರಣೆ ಆಚರಿಸಿದಾರೆ. ಅದರಂತೆ ನೂತನ ತಾಲ್ಲೂಕು ಕೇಂದ್ರವಾದ ಇಲಕಲ್ ತಹಶಿಲ್ದಾರ್ ಕಚೇರಿಯ ಸಭಾಭವನದಲ್ಲಿ ಪ್ರಥಮ ಬಾರಿಗೆ ಕಂದಾಯ ದಿನಾಚರಣೆ ನಿಮಿತ್ತ ೧೦೦ ಸಸಿಗಳನ್ನು ನೆಡುವ ಮೂಲಕ ಹಸಿರು ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ನಿವೃತ್ತ ತಹಸೀಲ್ದಾರ ಪಿ.ವಿ.ದೇಸಾಯಿ ವಹಿಸಿ ಮಾತನಾಡಿದರು. ತಾಲ್ಲೂಕು ಆಹಾರ ನಿರೀಕ್ಷಕರಾದ ಚಿದಾನಂದ ವಡವಡಗಿ ಪ್ರಾಸ್ತಾವಿಕ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರೇಡ್ ೨ ತಹಶೀಲ್ದಾರರಾದ ಎ ರತ್ನಮ್ಮ ವಹಿಸಿಕೊಂಡಿದ್ದರು.ಕಾರ್ಯಕ್ರಮದಲ್ಲಿ ತಾಲ್ಲೂಕಿನ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳು.ಕಂದಾಯ ಇಲಾಖೆ ಅಧಿಕಾರಿಗಳು.ಸಿಬ್ಬಂದಿಗಳು ಭಾಗವಹಿಸಿದ್ದರು.

ವರದಿ : ವಿನೋದ ಬಾರಿಗಿಡದ

error: