December 21, 2024

Bhavana Tv

Its Your Channel

ಅಭಿಮಾನಿಗಳಿಂದ ಮಾಜಿ ಶಾಸಕರಾದ ವಿಜಯಾನಂದ ಎಸ್ ಕಾಶಪ್ಪನವರ ಹುಟ್ಟುಹಬ್ಬ ಆಚರಣೆ

ಇಳಕಲ್ ; ಮಾಜಿ ಶಾಸಕರಾದ ವಿಜಯಾನಂದ ಎಸ್ ಕಾಶಪ್ಪನವರ ಹುಟ್ಟುಹಬ್ಬದ ನಿಮಿತ್ಯ ಹಾಲು ಹಣ್ಣು ಮತ್ತು ಮಾಸ್ಕ್ ವಿತರಣಾ ವ್ಯವಸ್ಥೆ ಮಾಡಿದ ಅಭಿಮಾನಿಗಳು.

ಮಾಜಿ ಶಾಸಕ ಹಾಗೂ ರಾಷ್ಟ್ರೀಯ ಅಧ್ಯಕ್ಷರು ಲಿಂಗಾಯತ ಪಂಚಮಶಾಲಿ ಸಮಾಜದ ವಿಜಯಾನಂದ ಎಸ್ ಕಾಶಪ್ಪನವರ ಹುಟ್ಟುಹಬ್ಬದ ನಿಮಿತ್ಯ ಅಮ್ಮಾ ಸೇವಾ ಸಂಸ್ಥೆಯಲ್ಲಿ ಹೋಳಿಗೆ ಊಟ ಬಡಿಸಿ ಹುಟ್ಟುಹಬ್ಬವನ್ನು ಆಚರಿಸಿದರು.

ಅದೇ ರೀತಿ ಇಳಕಲ್ ತಾಲ್ಲೂಕಿನ ಚಿನ್ನಾಪುರ ಎಸ್ ಟಿ . ಗ್ರಾಮದ ಮಹಾಂತ ನಗರದಲ್ಲಿ ಪಂಚಮಸಾಲಿ ಸಮಾಜದ ಬಾಂಧವರು ಹಾಲು ,ಹಣ್ಣು ಹಂಪಲ ಮತ್ತು ಮಾಸ್ಕ್ ಕೊಡುವುದರ ಮೂಲಕ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದರು.

ಅದೇ ರೀತಿಯಾಗಿ ಚಿನ್ನಾಪುರ ಎಸ್ ಟಿ. ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಸಸಿಗಳನ್ನು ಹಚ್ಚಿದರು .
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮಹಾಂತೇಶ ನರಗುಂದ ವಹಿಸಿದ್ದರು .ಇಳಕಲ್ ತಾಲ್ಲೂಕು ಪಂಚಮಸಾಲಿ ಸಮಾಜದ ಪ್ರಧಾನ ಕಾರ್ಯದರ್ಶಿ ಯಾದ ಹುಚ್ಚಪ್ಪ ಐವಳ್ಳಿ. ಕಾಂಗ್ರೆಸ್ ಪಕ್ಷದ ಮುಖಂಡರಾದ ಬಸವರಾಜ ಜಾಲಿಹಾಳ .ಮಹೇಶ ಬಮಸಾಗರ .ಚನ್ನಪ್ಪ. ಶೇಖಪ್ಪ. ಸುಭಾಸ .ಮಹಾಂತೇಶ ಹಾಗೂ ಸಂಗಮೇಶ ತುಪ್ಪದ ಮತ್ತು ಲಿಂಗಾಯತ ಪಂಚಮಸಾಲಿ ಸಮಾಜದ ಬಾಂಧವರು,ಕಾoಗ್ರೆಸ್ ಪಕ್ಷದ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ಇತರರು ಇದ್ದರು.

ವರದಿ : ವಿನೋದ ಬಾರಿಗಿಡದ. ಇಲಕಲ್

error: