ಇಳಕಲ್: ನಗರದ ರೋಟರಿ ಸಂಸ್ಥೆ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರನ್ನು ಸತ್ಕರಿಸಲಾಯಿತು.
ಸಮಾಜಮುಖಿ ಕಾರ್ಯಗಳಿಗೆ ಹೆಸರಾದ ರೋಟರಿ ಸಂಸ್ಥೆ ಪ್ರತಿವರ್ಷದಂತೆ ಈ ಬಾರಿಯೂ ನೂತನ ಅಧ್ಯಕ್ಷರಾದ ಖ್ಯಾತ ವೈದ್ಯ ಮಹಾಂತೇಶ ಅಕ್ಕಿ ಅವರ ಅಧ್ಯಕ್ಷತೆಯಲ್ಲಿ ಪತ್ರಿಕಾ ದಿನಾಚರಣೆ ವೈದ್ಯರ ದಿನಾಚರಣೆ ಹಾಗೂ ಲೆಕ್ಕಪರಿಶೋಧಕರ ದಿನಾಚರಣೆಯನ್ನು ಜೋಷಿಗಲ್ಲಿಯ ಸೇಜ್‌ಕಿಡ್ಸ್ ಶಾಲೆಯಲ್ಲಿ ಆಯೋಜಿಸಲಾಗಿತ್ತು.
ಕರ್ನಾಟಕ ಕಾಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿಜಯ ಗವಿಮಠ, ಐಎಂಎ ಅಧ್ಯಕ್ಷ ಸುನೀತಾ ಕಠಾರಿಯಾ ಹಾಗೂ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷ ಎಸ್.ಎ. ಮನ್ನಾಪೂರ ಸೇರಿದಂತೆ ವೇದಿಕೆ ಮೇಲಿದ್ದಂತ ಗಣ್ಯರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಕುರಿತು ಮಾತನಾಡಿ ಕಾರ್ಯನಿರತ ಪತ್ರ ಸಂಘದ ಅಧ್ಯಕ್ಷ ವಿಜಯ ಗವಿಮಠ, ಕೊವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ ಪತ್ರಕರ್ತರು ಸುದ್ದಿಗಳನ್ನು ಬಿತ್ತರಿಸಿ ಹೊಗಳಿಕೆಗಳಿಂತ ತೆಗಳಿಕೆಗಳನ್ನೇ ಹೆಚ್ಚು ಪಡೆದಿದ್ದಾರೆ. ಕೆಲವರು ತಮ್ಮ ಪತ್ರಿಕೆಗಳನ್ನು ಹೆಚ್ಚಿಸಿಕೊಳ್ಳಲು ಈ ತರಹದ ಸುದ್ದಿಗಳನ್ನು ಪ್ರಕಟಿಸದಿದ್ದರೇ ಹೆಚ್ಚಿನ ಮಹತ್ವ ಕೊಟ್ಟು ಬಿತ್ತರಿಸದೇ ಹೋಗಿದ್ದರೇ ಸದ್ಯದ ಪರಿಸ್ಥಿತಿ ಇನ್ನು ಕಷ್ಟಕರವಾಗಿರುತ್ತಿತ್ತು. ಇಂತಹ ಸುದ್ದಿಗಳಿಂದಲೇ ಸರಕಾರ ಎಚ್ಚೇತ್ತು ಮುಂಜಾಗೃತಾ ಕ್ರಮ ವಹಿಸಿದಂತು ಸತ್ಯ ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದರು.
ರೋಟರಿ ಸಂಸ್ಥೆಯ ನೂತನ ಅಧ್ಯಕ್ಷ ಮಹಾಂತೇಶ ಅಕ್ಕಿ ಮಾತನಾಡಿ, ವೈದ್ಯರು ಜನರ ಆರೋಗ್ಯವನ್ನು ರಕ್ಷಿಸಿದರೇ ಲೆಕ್ಕಪರಿಶೋಧಕರು ದೇಶದ ಆರ್ಥಿಕತೆಯನ್ನು ಕಾಪಾಡುತ್ತಾರೆ ಅದರಂತೆ ಪತ್ರಕರ್ತರು ಸಮಾಜದ ಅಂಕುಡೊAಕುಗಳನ್ನು ತಿದ್ದುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ಇದೇ ವೇಳೆ ಸಂಸ್ಥೆ ವತಿಯಿಂದ ಪತ್ರಕರ್ತರ ಸಂಘದ ಆಡಳಿತ ಮಂಡಳಿ, ಐಎಂಎ ಆಡಳಿತ ಮಂಡಳಿ,ಲೆಕ್ಕಪರಿಶೋಧಕರನ್ನು ಸತ್ಕರಿಸಿ ಸಸಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಬಸವರಾಜ ಗೋಟೂರ, ಕಾರ್ಯದರ್ಶಿ ಸಂಗಮೇಶ ಸಜ್ಜನ, ಖಜಾಂಚಿ ಚಂದ್ರಶೇಖರ ತೋಟಗೇರ ಸೇರಿದಂತೆ ರೋಟರಿ ಸಂಸ್ಥೆ ವೈದ್ಯರು ಪರ್ತಕರ್ತರು ಉಪಸ್ಥಿತರಿದ್ದರು.
ವರದಿ : ವಿನೋದ ಬಾರಿಗಿಡದ ಇಳಕಲ್ಲ
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ