December 22, 2024

Bhavana Tv

Its Your Channel

ಶ್ರೀ ಜಗದ್ಗುರು ಗಂಗಾಧರ ಮೂರು ಸಾವಿರ ಮಠ ಕೈಗಾರಿಕಾ ಸಂಸ್ಥೆಯಲ್ಲಿ ಕೊರೋನಾ ೧೯ ಲಸಿಕಾ ಕಾರ್ಯಕ್ರಮ.

ಇಳಕಲ್: ಜಿಲ್ಲೆಯಲ್ಲಿ ಪ್ರತಿಷ್ಠಿತ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಒಂದಾದ ಶ್ರೀ ಜಗದ್ಗುರು ಗಂಗಾಧರ ಮೂರು ಸಾವಿರ ಮಠ ಕೈಗಾರಿಕಾ ಸಂಸ್ಥೆಯಲ್ಲಿ ಕೊರೋನಾ ಸಾಂಕ್ರಾಮಿಕ ರೋಗದ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಕೋವಿಡ ೧೯ ಲಸಿಕಾ ಕಾರ್ಯಕ್ರಮಕ್ಕೆ ಸಂಸ್ಥೆಯ ಚೇರಮನ್ನರಾದ ಎಮ್ .ಜಿ ಪಟ್ಟಣಶೆಟ್ಟಿ ಅವರು ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು.
ಶ್ರೀ ಜಗದ್ಗುರು ಗಂಗಾಧರ ಮೂರು ಸಾವಿರ ಮಠ ಕೈಗಾರಿಕಾ ಸಂಸ್ಥೆಯ ಪ್ರಾಚಾರ್ಯರಾದ ಕೆ.ಎನ್. ಮಧುಕರ್ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು ನಮ್ಮ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜು ಪ್ರಾರಂಭಕ್ಕೆ ಮುನ್ನವೇ ಎಲ್ಲಾ ವಿದ್ಯಾರ್ಥಿಗಳಿಗೆ ಲಸಿಕೆ ದೊರಕಲಿ ಎಂದು ಚೇರ್ಮನ್ನರಾದ ಎಂ.ಬಿ. ಪಾಟೀಲ ಅವರೊಂದಿಗೆ ಚರ್ಚಿಸಿ ವಿದ್ಯಾರ್ಥಿಗೆ ಕೋವಿಡ್ ೧೯ ಲಸಿಕೆಯನ್ನು ನಮ್ಮ ಕಾಲೇಜಿನಲ್ಲಿಯೇ ಮಾಡಲಾಗಿದೆ ಎಂದು ನಮ್ಮ .ಮಾಧ್ಯಮದವರಿಗೆ ತಿಳಿಸಿದರು .
ಈ ಕಾರ್ಯಕ್ರಮದಲ್ಲಿ ಎಸ್ ವಿ ಎಮ್ ಸಂಘದ ಚೇರಮನ್ನರಾದ ಎಮ್ ಬಿ ಪಾಟೀಲ್. ಪ್ರಾಚಾರ್ಯರಾದ ಕೆ.ಎನ್. ಮಧುಕರ್ ಹಾಗೂ ಆರೋಗ್ಯ ಸಿಬ್ಬಂದಿಗಳಾದ ಗುಂಡಪ್ಪ. ವೆಂಕಟೇಶ್ ಹಾಗೂ ಕಾಲೇಜಿನ ಗುರುಬಳಗ ಹಾಗೂ ವಿದ್ಯಾರ್ಥಿಗಳು. ಸಿಬ್ಬಂದಿ ವರ್ಗದವರು ಹಾಜರಿದ್ದರು .
ವರದಿ: ವಿನೋದ ಬಾರಿಗಿಡದ, ಇಳಕಲ್.

error: