ಬಾಗಲಕೋಟ ಜಿಲ್ಲೆಯ ಇಳಕಲ್ ತಾಲ್ಲೂಕಿನ ವ್ಯಾಪ್ತಿಗೆ ಬರುವ ಜಂಬಲದಿನ್ನಿ ಗ್ರಾಮದ ರಸ್ತೆ ಹದಗೆಟ್ಟು ನಿಂತಿದೆ. ತುಂಬ ಗ್ರಾಮದ ಕ್ರಾಸ್ ನಿಂದ ಸುಮಾರು ೫ -ಕಿ.ಮಿ. ರಸ್ತೆ ಹಾಳಾಗಿದ್ದು ಸುಮಾರು ೩-೪ ವರ್ಷದಿಂದ ರಸ್ತೆಯಲ್ಲಿ ಅಡ್ಡಾಡಲು ವಾಹನ ಸವಾರರು, ರೈತರ ಎತ್ತು ಬಂಡಿ, ಗ್ರಾಮದ ಜನತೆ ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಅಡ್ಡಾಡುವ ಪರಿಸ್ಥಿತಿ ಇದೆ .
ನಮಗೆ ರಸ್ತೆ ಮಾಡಿಸಿ ಕೊಡಿ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಶಾಸಕರಿಗೆ ಹಾಗೂ ಸಂಬAಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೆ ಇವತ್ತ ಮಾಡತ್ತಿನಿ ನಾಳೆ ಮಾಡತಿನಿ ಅಂತ ಹೇಳಿ ಮೂಗಿಗೆ ತುಪ್ಪಸವರಿ ಕಳಿಸುತ್ತಾರೆ ವಿನಹ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮಸ್ಥರ ತೊಂದರೆ ಶಾಸಕರ ಗಮನಕ್ಕೆ ಬಾರದೆ ಇರುವುದು ವಿಪರ್ಯಾಸವೆ ಸರಿ.
ದಿನಾಲು ನಾವು ಇದೆ ಮಾರ್ಗವಾಗಿ ಚಲಿಸಬೇಕು ಮಳೆ ಬಂದರೆ ರಸ್ತೆ ದಾಟುವುದಕ್ಕೆ ಆಗುವುದಿಲ್ಲ ಕಾರಣ ಏರಿಳಿತ ತಗ್ಗು ಇದ್ದು ಎಚ್ಚರ ತಪ್ಪಿದರೆ ಬಿಳುವುದು ಖಂಡಿತ. ಕೆಲವು ಜನರು ಮೋಟರ ಸೈಕಲ್ ಮೇಲೆ ಹೋಗುವಾಗ ಬಿದ್ದು ಕೈಕಾಲು ಗಾಯಮಾಡಿಕೊಡವರು ಇದ್ದಾರೆ, ಗಾಡಿ ಜಕಂ ಗೊಂಡಿದೆ.
ಗ್ರಾಮದ ಪಂಚಾಯತಗೆ ಹೇಳಿದರೆ ಅವರು ಕ್ಯಾರೆ ಅನ್ನುವುದಿಲ್ಲ, ಈ ರಸ್ತೆ ಪಿಡಬ್ಲೂ ಡಿ ಅವರಿಗೆ ಬರುತ್ತೆ ನಮಗೆ ಸಂಬAಧಪಡುವುದಿಲ್ಲ ಎನ್ನುತ್ತಾರೆ .ಆದರೆ ಗ್ರಾಮಪಂಚಾಯತ ಅಧ್ಯಕ್ಷರು ಹಾಗೂ ಸದಸ್ಯರಿಗೆ ಸಹ ಹೇಳಿದರೆ ಕರೋನಾ ಸಂಪೂರ್ಣವಾಗಿ ಹೋಗಲಿ ಆನಂತರ ರಸ್ತೆ ಮಾಡಸ್ತಿವಿ ಅಂತ ಹೇಳಿ ಹಾರಿಕೆಯ ಉತ್ತರ ಕೊಡುತ್ತಾರೆ. ನಮಗೆ ಗಾಡಿಮೆಲಿದ್ದ ಎಳೋದು ಬಿಳೋದು ರೂಡಿಯಾಗಿದೆ ಆದರೆ ವಯಸ್ಸಾದವರು ಗ್ರಾಮದ ಹಿರಿಯರು ಬಿದ್ದು ಪೆಟ್ಟುಮಾಡಿಕೊಂಡರೆ ಇದರ ಹೊಣೆ ಯಾರು ಹೊರುತ್ತಾರೆ? ದಯಮಾಡಿ ನಾವು ಮಾಧ್ಯಮದ ಮೂಲಕ ಶಾಸಕರಿಗೆ ಬೇಡಿಕೊಳ್ಳುವುದೆನೆಂದರೆ ಆದಷ್ಟು ಬೇಗ ರಸ್ತೆ ಮಾಡಿಸಿ ವಾಹನ ಅಡ್ಡಾಡಲು ಅನುಕೂಲಮಾಡಿಕೊಡಿ ಎಂದು ಸಾರ್ವಜನಿಕರು ತಮ್ಮ ಅಳಲನ್ನು ತೋಡಿ ಕೊಂಡರು .
ಜಂಬಲದಿನ್ನಿ ಮಾರ್ಗವಾಗಿ ಬೂದಿಹಾಳ ಸರಿ ಸುಮಾರು ೬ ಕಿ.ಮಿ.ಅಲ್ಲಿನ ರಸ್ತೆ ಸಂಪೂರ್ಣ ಡಾಂಬರಿಕರಣ ಗೊಂಡಿದೆ ,ಆದರೆ ಇಲ್ಲಿ ಇಲ್ಲ ಶಾಸಕರು ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಸವರಿದಂತೆ ನಮ್ಮ ಜಂಬಲದಿನ್ನಿ ಗ್ರಾಮದ ಪರಸ್ಥಿತಿಯಾಗಿದೆ. ಮಳೆಗೆ ರಸ್ತೆ ಕೊಚ್ಚಿಹೋಗಿದೆ ಇನ್ನು ಮುಂದಾದರೂ ಜನಪ್ರತಿನಿಧಿಗಳಾಗಲಿ ಸಂಬAಧಪಟ್ಟ ಇಲಾಖೆಗಳ ಅಧಿಕಾರಿಗಳಾಗಲಿ ಜಂಬಲದಿನ್ನಿ ಗ್ರಾಮದ ರಸ್ತೆ ಕಡೆ ಕಣ್ಣು ಹರಿಸುತ್ತಾರೋ ಇಲ್ಲವೋ ಎಂದು ಕಾದು ನೋಡಬೇಕಿದೆ.
ವರದಿ: ವಿನೋದ ಬಾರಿಗಿಡದ ಇಳಕಲ್
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ