ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಶಾಸಕರಾದ ದೊಡ್ಡನಗೌಡ ಜಿ ಪಾಟೀಲ ಅವರು ಮೂರು ಬಾರಿ ಶಾಸಕರಾಗಿ ಅಭಿವೃದ್ಧಿ ಕಾರ್ಯಗಳನ್ನ ಮಾಡಿದ್ದಾರೆ ಅಷ್ಟೇ ಅಲ್ಲದೆ ಇಡಿ ಹುನಗುಂದ ತಾಲೂಕಿಗೆ ದಿನದ ೨೪*೭ ನೀರನ್ನ ತಂದು ಯಾರು ಮಾಡದ ದೊಡ್ಡಕೆಲಸವನ್ನ ಮಾಡಿದ್ದಾರೆ.
ಹಾಗೂ ಯಾವುದೆ ಜಾತಿ ಧರ್ಮ ಭೇದ ಭಾವ ಇಲ್ಲದೆ ಎಲ್ಲ ಸಮುದಾಯದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಹಾಗೂ ಕರೋನ ಅಲೆಯಲ್ಲಿ ತಾಲೂಕಿನ ಅಭಿವೃದ್ಧಿ ಮಾಡಿದ್ದಾರೆ.
ಕೋರೋನಾಗೆ ಸಂಬAಧಿಸಿದ ಚಿಕಿತ್ಸೆ ಹಾಗೂ ವ್ಯಾಕ್ಸಿನ್ ಹಾಕಿಸುವಲ್ಲಿ ತಾಲೂಕಿಗೆ ಯಾವುದೆ ರೀತಿಯಲ್ಲಿ ತೊಂದರೆ ಯಾಗದಂತೆ ನೋಡಿಕೊಂಡರು.
ಇAತಹ ಶಾಸಕರಿಗೆ ಸಚಿವಸ್ಥಾನವನ್ನ ನೂತನ ಮುಖ್ಯ ಮಂತ್ರಿಯಾದ ಬಸವರಾಜ ಬೊಮ್ಮಾಯಿ ಅವರ ಹೊಸ ಸಚಿವ ಸಂಪುಟದಲ್ಲಿ ದೊಡ್ಡನಗೌಡ ಜಿ ಪಾಟೀಲ್ ಅವರಿಗೆ ಸಚಿವ ಸ್ಥಾನ ಕಲ್ಪಿಸಿಕೊಡಬೆಕೆಂದು ನಗರ ಮಂಡಲ ಅಧ್ಯಕ್ಷ ರಾದ ಅರವಿಂದ ಮಂಗಳೂರು ಐಬಿಯಲ್ಲಿ ಸುದ್ದಿ ಗೋಷ್ಟಿ ನಡೆಸಿ ಮಾತನಾಡಿದರು.
ಇದೆ ಸಂಧರ್ಭದಲ್ಲಿ ನಗರ ಸಭೆಯ ಸದಸ್ಯರಾದ ಸುಗುರೇಶ ನಾಗಲೋಟಿ ,ಚಂದ್ರಶೇಖರ ಏಕಬೋಟೆ ಮತ್ತು ತಾಲ್ಲೂಕಿನ ಅಧ್ಯಕ್ಷರಾದ ಮಹಾಂತೇಶ ಪಾಟೀಲ ,ರಾಮನಗೌಡ ಅಗ್ನಿ , ಬಸವರಾಜ ಹುನಕುಂಟಿ ,ವೀರೇಶ ಹಿರೇಮನಿ ,ಮಂಜುನಾಥ ಕಿಡದೂರ ,ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಇಳಕಲ್ ಮಂಡಲ ಕನಿಖಾ ಅಚಲಕರ್ , ಗ್ರಾಮೀಣ ಯುವ ಮೋರ್ಚಾ ಅಧ್ಯಕ್ಷ ಅನಿಲ ಬಂಡರಗಲ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಇಳಕಲ್ ನಗರ ಘಟಕ ಆನಂದ ಪಾಟೀಲ ಮತ್ತಿತರು ಹಾಗೂ ಅಭಿಮಾನಿಗಳು ಶಾಸಕರಿಗೆ ಬೆಂಬಲ ವ್ಯಕ್ತಪಡಿಸಿದರು.
ವರದಿ.:ವಿನೋದ ಬಾರಿಗಿಡದ ಇಳಕಲ್
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ