ಇಳಕಲ್: ರೈತರಿಗೆ ಗ್ರಾಹಕರಿಗೆ ವ್ಯವಹಾರಕ್ಕೆ ಅನುಕೂಲವಾಗಲೆಂದು ಇಳಕಲ್ ತಾಲೂಕಿನ ಕಂದಗಲ್ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ನಲ್ಲಿ ಗ್ರಾಹಕರ ನೋವನ್ನು ಯಾರೂ ಕೇಳೋರಿಲ್ಲ ಹೇಳೋರಿಲ್ಲ ಎಂಬoತಹ ಸ್ಥಿತಿ ನಿರ್ಮಾಣವಾಗಿದೆ.
ಹೌದು ಹಳ್ಳಿಯ ಮುಗ್ಧ ಜನರು ಬ್ಯಾಂಕಿಗೆ ಬಂದಾಗ ಪಾಸ್ ಬುಕ್ ಪ್ರಿಂಟ್ ಹಾಕಿ ಕೊಡಿ ಅಂದರೆ ಸರ್ವರ್ ಇಲ್ಲ ಪ್ರಿಂಟರ್ ಕೆಟ್ಟೋಗಿದೆ ಎಂಬoತಹ ಮಾತುಗಳನ್ನು ಅಲ್ಲಿಯ ಸಿಬ್ಬಂದಿಗಳು ಹೇಳುತ್ತಾರೆ.
ಪಾಸ್ ಬುಕ್ ಜಮಾ ಮಾಡಿಸಲು ಹೋದಾಗ ಕೇವಲ ಎಷ್ಟು ಅಮೌಂಟ್ ಇದೆಯೆಂದು ಮಾತ್ರ ಕೊಡ್ತಾರೆ .ಪಾಸಬುಕ್ ಪ್ರಿಂಟ್ ಹಾಕಿಸಿದಾಗ ಮಾತ್ರ ಯಾವುದು ಜಮಾ ಹಾಗೂ ಖರ್ಚು ಆಗಿದೆ ಎಂಬುದು ತಿಳಿಯುತ್ತದೆ.ಆದರೆ ಅವರು ಪ್ರಿಂಟ್ ಆಗಿ ಕೊಡುವುದಿಲ್ಲ ಯಾಕೆ ಎಂಬುದು ಜನರ ಪ್ರಶ್ನೆಯಾಗಿದೆ.
ಅಲ್ಲದೆ ಈ ಬ್ಯಾಂಕಿಗೆ ಬಂದರೆ ಎಲ್ಲಾ ಕೆಲಸವನ್ನು ಬಿಟ್ಟು ಇಲ್ಲಿ ವ್ಯವಹಾರ ಮಾಡಲು ಬರಬೇಕಾಗುತ್ತದೆ. ಅಷ್ಟೊಂದು ಗದ್ದಲ ಈ ಬ್ಯಾಂಕಿನಲ್ಲಿ ಇರುತ್ತದೆ.ಅಲ್ಲದೆ ಬ್ಯಾಂಕ್ ಚಿಕ್ಕದಾಗಿರುವುದರಿಂದ ವಯಸ್ಸಾದವರು ನಿಂತೆ ವ್ಯವಹಾರ ಮಾಡಬೇಕಾದ ಪರಿಸ್ಥಿತಿ ಇದೆ.
ಜನಸ್ನೇಹಿ ಆಗಬೇಕಾದ ಬ್ಯಾಂಕ್ ಗ್ರಾಹಕರಿಗೆ ಸ್ಪಂದನೆ ನೀಡದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.ಹೀಗಾಗಿ ಕಂದಗಲ್ ಗ್ರಾಮದಲ್ಲಿರುವ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ನ ಎಲ್ಲ ಸಿಬ್ಬಂದಿಗಳು ಗ್ರಾಹಕರಿಗೆ ರೈತರಿಗೆ ಸರಿಯಾಗಿ ಸ್ಪಂದನೆ ನೀಡಿ ಅನುಕೂಲ ಮಾಡಿಕೊಡಬೇಕೆಂಬುದು ನಮ್ಮ ಭಾವನಾ ವಾಹಿನಿಯ ಆಶಯ.
ವರದಿ.ವಿನೋದ ಬಾರಿಗಿಡದ ಭಾವನಾ ಟಿವಿ ಇಳಕಲ್.
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ