December 22, 2024

Bhavana Tv

Its Your Channel

ಎಸ್.ಜೆ.ಜಿ.ಎಂ ಐ.ಟಿ.ಐ ಪ್ರವೇಶಕ್ಕೆ ಆನ್-ಲೈನ್ ಅರ್ಜಿ ಪ್ರಾರಂಭ

ಇಳಕಲ್ : ಸರಕಾರಿ ಕೋಟಾದಲ್ಲಿ ಅಗಸ್ಟ್ ೨೦೨೧ ಸಾಲಿನ ಐ.ಟಿ.ಐ ಪ್ರವೇಶಕ್ಕೆ ಆನ್-ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ದಿನಾಂಕ ೨೮-೦೮-೨೦೨೧ ರ ವರೆಗೆ ಅವಕಾಶವಿದೆ. ಸರಕಾರಿ ಕೋಟಾದಡಿ ಪ್ರವೇಶ ಪಡೆಯಲು ಇಲಾಖೆಯ ವೆಬ್‌ಸೈಟ್

http:||emptrg.kar.nici.in ಮೂಲಕ ನಮ್ಮ ಸಂಸ್ಥೆಯಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಾಚಾರ್ಯ ಕೆ.ಎನ್ ಮಧುರಕರ ತಿಳಿಸಿದ್ದಾರೆ. ಒಂದು ವರ್ಷದ ಕೋರ್ಸ್ಗಳಾದ , ವೆಲ್ಡರ್, ಸಿವ್ಹಿಂಗ್ ಟೆಕ್ನಾಲಜಿ, ಹಾಗೂ ಎರಡು ವರ್ಷದ ಕೋರ್ಸಗಳಾದ ಇಲೆಕ್ಟ್ರಿಷಿಯನ್ ಇಲೆಕ್ಟ್ರಾನಿಕ್ಸ್ ಮೇಕ್ಯಾನಿಕ್, ಫಿಟ್ಟರ್, ಡ್ರಾಫ್ಟಮನ್ ಸಿವ್ಹಿಲ್, ಹಾಗೂ ಟರ್ನರ್ ವೃತ್ತಿಗಳಿಗೆ ಪ್ರವೇಶಕ್ಕಾಗಿ ಶ್ರೀ ಜಗದ್ಗುರು ಗಂಗಾಧರ ಮೂರುಸಾವಿರಮಠ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರವೇಶ ಪಡೆಯುವವರಿಗೆ ಕಛೇರಿ ಅವಧಿಯಲ್ಲಿ ಉಚಿತವಾಗಿ ಆನ್- ಲೈನ್ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ವೆಲ್ಡರ್, ಸಿವ್ಹಿಂಗ್ ಟೆಕ್ನಾಲಜಿ ವೃತ್ತಿಗಳಿಗೆ ೮ ನೇ ತರಗತಿ ಪಾಸ್ ಮತ್ತು ಕಡ್ಡಾಯವಾಗಿ ಎಸ್.ಎಸ್.ಎಲ್.ಸಿ ಫೇಲಾದ ಅಂಕಪಟ್ಟಿ ತರಬೇಕು. ಉಳಿದ ಟ್ರೇಡ್ ಗಳಿಗೆ ಎಸ್.ಎಸ್.ಎಲ್.ಸಿ ಪಾಸಾಗಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಸ್ವಂತ ಇ-ಮೇಲ್ ಐ.ಡಿ ಹಾಗೂ ಮೊಬೈಲ್ ನಂಬರ್ ಆಧಾರ್ ಕಾರ್ಡ ಜೊತೆಗೆ, ಗ್ರಾಮೀಣ ಮೀಸಲಾತಿ, ಕನ್ನಡ ಮಾಧ್ಯಮ, ೩೭ ಜೆ, ಇತರ ಮೀಸಲಾತಿ ಬಯಸುವವರು ಸಂಬAಧಿಸಿದ ದಾಖಲೆಗಳು ತರಬೇಕು. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಕಚೇರಿಯಲ್ಲಿ ಸಂಪರ್ಕಿಸಬೇಕೆAದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ: ವಿನೋದ ಬಾರಿಗಿಡದ

error: