April 27, 2024

Bhavana Tv

Its Your Channel

ಸಜ್ಜನ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ ಫಲಿತಾಂಶ ನೂರಕ್ಕೆ ನೂರರಷ್ಟು

ಇಳಕಲ್: ನಗರದ ಸಜ್ಜನ ವಿದ್ಯಾವರ್ಧಕ ಸಂಘ ನಡೆಸುತ್ತಿರುವ ಸಜ್ಜನ ಪ್ರೌಢ ಶಾಲೆಯಲ್ಲಿ ಕಳೆದ ತಿಂಗಳು ಜರುಗಿದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದೆ ಎಂದು ಆಡಳಿತ ಅಧಿಕಾರಿ ಎನ್.ಎಮ್. ಚಿನ್ನಣ್ಣನವರ ಮುಖ್ಯೊಪಾದ್ಯಾಯ ಮಹಾಂತೇಶ ಸಜ್ಜನ ತಿಳಿಸಿದ್ದಾರೆ.
ಸುಮಯ್ಯ ಹಣಗಿ ಶಾಲೆಗೆ ಪ್ರಥಮ ಸ್ನೇಹಾ ಬಡಿಗೇರ ದ್ವಿತೀಯ ಮನೋಜ ಬಿಂಗಿ ತೃತಿಯ ಸ್ಥಾನ ಪಡೆದಿದ್ದಾರೆ ಪರೀಕ್ಷೆಯಲ್ಲಿ ೪೨ ವಿದ್ಯಾರ್ಥಿಗಳು ಹಾಜರಾಗಿದ್ದು ೧೬ ವಿದ್ಯಾರ್ಥಿಗಳು ಪ್ರಶಸ್ತಿ ಸಹಿತ ಪ್ರಥಮ ದರ್ಜೆ ೨೫ ವಿದ್ಯಾರ್ಥಿಗಳು ಪ್ರಥಮ ದರ್ಜೆ ಓರ್ವ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.
ಉತ್ತಿರ್ಣರಾದ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಚೇರಮೆನ್ ವೀರೇಶ ಕೆಲೂರ್ ಮತ್ತು ಆಡಳಿತ ಮಂಡಳಿಯ ಸದಸ್ಯರು ಗುರುಗಳು ಗುರು ಮಾತೆಯರು ಶಿಕ್ಷಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

ವರದಿ: ವಿನೋದ ಬಾರಿಗಿಡದ

error: