ಇಳಕಲ್: ವಿವಿಧ ಬೇಡಿಕೆಗಳನ್ನು ಈಡೇಸಿರುವಂತೆ ಸರಕಾರವನ್ನು ಒತ್ತಾಯಿಸಿ ಹುನಗುಂದ ಇಳಕಲ್ ಆಶಾ ಕಾರ್ಯಕರ್ತೆಯರು ಮುಖ್ಯಮಂತ್ರಿಗಳ ಹೆಸರಿನಲ್ಲಿ ಬರೆದ ಮನವಿಯನ್ನು ತಹಶೀಲ್ದಾರ ಬಸಲಿಂಗಪ್ಪ ನಾಯ್ಕೋಡಿ ಅವರಿಗೆ ಸಲ್ಲಿಸಿದರು.
ಮಂಗಳವಾರ ಇಲ್ಲಿಯ ಆಶಾ ಕಾರ್ಯಕರ್ತೆಯರು ಸೇರಿಕೊಂಡು ತಹಶೀಲ್ದಾರ ಕಛೇರಿಗೆ ತೆರಳಿ ಅಲ್ಲಿ ತಮ್ಮ ಬೇಡಿಕೆಗಳಾದ ಕರೋನಾ ಸಂದರ್ಭದಲ್ಲಿಯೂ ಸಹ ಮನೆಬಿಟ್ಟು ಹಗಲಿರುಳೆನ್ನದೆ ಜನ ಸೇವೆ ಮಾಡಿದ್ದೇವೆ ಅದಕ್ಕೆ ಹೆಚ್ಚಿನ ಸಹಾಯ ಧನ ನೀಡಿ, ನಮ್ಮ ನೋವುಗಳಿಗೆ ಸರಕಾರ ಸ್ಪಂದಿಸಬೇಕು. ವೇತನ ಹೆಚ್ಚಳ, ಆರೋಗ್ಯ ವಿಮೆ, ಆರೋಗ್ಯ ಸುರಕ್ಷತಾ ಸಾಮಗ್ರಿಗಳನ್ನು ನೀಡಬೇಕು ಇನ್ನಿತರ ಬೇಡಿಕೆಗಳ ಮನವಿಯನ್ನು ಆಶಾ ಕಾರ್ಯಕರ್ತೆ ನೀಲಮ್ಮ ಸಾಲಿಮಠ ಓದಿ ತಹಶೀಲ್ದಾರರಿಗೆ ಅರ್ಪಿಸಿದರು ನಗರದ ಆಶಾ ಕಾರ್ಯಕರ್ತೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ: ವಿನೋದ ಬಾರಿಗಿಡದ
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ