April 26, 2024

Bhavana Tv

Its Your Channel

ಕುಡಿಯುವ ನೀರು ಪೂರೈಕೆ ಬಂದ್, ಅಂಬೇಡ್ಕರ ಕಾಲೋನಿ ನಿವಾಸಿಗಳಿಂದ ಸುರೇಶ ಜಂಗ್ಲಿ ಅವರ ನೇತೃತ್ವದಲ್ಲಿ ಪ್ರತಿಭಟನೆ

ಇಳಕಲ್ ನಗರಸಭೆ ಸಿಬ್ಬಂದಿಗಳು ಅಂಬೇಡ್ಕರ್ ಕಾಲೋನಿಯಲ್ಲಿ ವಾಸಿಸುವ ಹಲವಾರು ಜನರ ಮನೆಗಳಿಗೆ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಬಂದ್ ಮಾಡಿದ್ದರಿಂದ ಆಕ್ರೋಶಗೊಂಡ ಜನರು ನಗರಸಭೆಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ನಗರಸಭೆ ಸದಸ್ಯ ಸುರೇಶ ಜಂಗ್ಲಿ ನೇತೃತ್ವದಲ್ಲಿ ನೂರಾರು ಜನರು ಮಹಿಳೆಯರ ಸಮೇತ ನಗರಸಭೆ ಕಚೇರಿಗೆ ಆಗಮಿಸಿ ಘೋಷಣೆ ಕೂಗಿದರು. ಸುದ್ದಿ ತಿಳಿದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅಲ್ಲಿಗೆ ಬಂದು, ನಗರಸಭೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಆದರೆ, ಆ ವೇಳೆ ಸಂಬAದಪಟ್ಟ ಅಧಿಕಾರಿಗಳು ಕಚೇರಿಯಲ್ಲಿ ಇರಲಿಲ್ಲ. ಹೀಗಾಗಿ ಅವರಿಗೆ ಉತ್ತರವನ್ನು ನಗರಸಭೆಯ ವ್ಯವಸ್ಥಾಪಕ ನಬೀಸಾಬ ಕಂದಗಲ್ಲ ನೀಡಿದರು. ಆದರೂ ಕೇಳದ ಮಾಜಿ ಶಾಸಕರು ಜಿಲ್ಲಾಧಿಕಾಗಳಿಗೆ ಮೊಬೈಲ್ ಮೂಲಕ ಪರಿಸ್ಥಿತಿಯನ್ನು ವಿವರಿಸಿ. ಸಾಕಷ್ಟು ಬಾಕಿ ಇರುವ ನಳದ ಬಾಕಿ ಹಣವನ್ನು ತೆಗೆದುಕೊಳ್ಳದೇ ಬಡಪಾಯಿ ಪೌರ ಕಾರ್ಮಿಕರು ವಾಸಿಸುವ ಬಡಾವಣೆಯ ನಲ್ಲಿ ನೀರನ್ನು ನಿಲ್ಲಿಸಿರುವುದು ಅಮಾನವೀಯ ಕಾರ್ಯವಾಗಿದೆ. ನಿಸರ್ಗ ಸಂಪತ್ತಾದ ನೀರು, ಗಾಳಿ, ಬೆಳಕು ಬಂದ್ ಮಾಡುವದು ಯಾರಿಗೆ ಅಧಿಕಾರವಿಲ್ಲ, ಕೂಡಲೇ ನಲ್ಲಿ ನೀರನ್ನು ಪೂರೈಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರಿಂದ ನಗರಸಭೆಯವರು ಕುಡಿಯುವ ನೀರು ಪೂರೈಕೆ ಮರು ಪ್ರಾರಂಭಿಸಿದರು.

ವರದಿ. ವಿನೋದ ಬಾರಿಗಿಡದ

error: