
ಇಳಕಲ್: ಇಂದಿನ ಮಕ್ಕಳು ಯುವಕರು, ಸಮಾಜ ಅಡ್ಡದಾರಿ ಹಿಡಿಯುತ್ತಿರುವ ಸಮಾಜವನ್ನು ಸರಿಯಾದ ದಾರಿ ಕಡೆ ತೆಗೆದುಕೊಂಡು ಹೋಗುವಲ್ಲಿ ಭಾರತ ಭವ್ಯ ಪ್ರಜೆಗಳನ್ನಾಗಿ ಮಾಡುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದಾಗಿದೆ ಎಂದು ಮಧುರಖಂಡಿಯ ಪ್ರವಚನಕಾರರಾದ ಡಾ. ಈಶ್ವರ ಮಂಟೂರ ಹೇಳಿದರು.
ಶ್ರೀ ಮಠದ ದಾಸೋಹ ಭವನದಲ್ಲಿ ಬೆಂಗಳೂರಿನ ಬ್ರೇಡ್ಸ್ ಸಂಸ್ಥೆ ದೇವದುರ್ಗದ ಡಾನ್ ಬೋಸ್ಕೊ ಸಮಾಜ ಸೇವಾ ಸಂಸ್ಥೆ, ಬಾಗಲಕೋಟೆಯ ಮಕ್ಕಳ ಹಕ್ಕು ಶಿಕ್ಷಣ ಮತ್ತು ಜಾಗೃತಿ ಆಂದೋಲನ ಹಾಗೂ ಇಳಕಲ್ಲಿನ ಶ್ರೀ ಅನ್ನಪೂರ್ಣೇಶ್ವರಿ ಸೇವಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಪ್ರಯುಕ್ತ ಪತ್ರಕರ್ತರಿಗೆ, ಮಾದ್ಯಮದವರಿಗೆ ಅಭಿನಂದನಾ ಸಮಾರಂಭ ಜರುಗಿತು
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಪತ್ರಕರ್ತರೆಲ್ಲರನ್ನು ರಕ್ಷಿಸುವದು ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಶಿರೂರದ ಡಾ.ಬಸವಲಿಂಗ ಮಹಾಸ್ವಾಮಿಗಳು ಮಾತನಾಡುತ್ತಾ ಮಾನವನ ಹಕ್ಕುಗಳನ್ನು ಪತ್ರಕರ್ತರು ಬೆಳಕಿಗೆ ತರಬೇಕು, ಸಮಾಜ ಸೇವೆಯೇ ಲಿಂಗ ಪೂಜೆ ಇದ್ದಂತೆ ಎಂದರು.
ಅಧ್ಯಕ್ಷತೆ ವಹಿಸಿದ್ದ ದೇವದುರ್ಗದ ಡಾನ್ ಬೋಸ್ಕೊ ಸಂಸ್ಥೆ ನಿರ್ದೇಶಕ ಫಾ.ಕುರಿಯಾಕೋಸ ಮಾತನಾಡುತ್ತಾ ದೇಶದಲ್ಲಿ ೧೩೨ ಡಾನ್ ಬೋಸ್ಕೊ ಸಂಸ್ಥೆಗಳಿದ್ದು ಮಕ್ಕಳ ಸೇವೆ ಮಾಡುತ್ತಿವೆ ಎಂದರು.
ದಿವ್ಯ ಸಾನಿದ್ಯ ವಹಿಸಿದ್ದ ಪೂಜ್ಯ ಗುರುಮಹಾಂತ ಸ್ವಾಮಿಗಳು ಆಶೀರ್ವಚನೆ ನೀಡುತ್ತಾ ಪತ್ರಕರ್ತರು ತಮ್ಮ ಪ್ರಾಣದ ಹಂಗನ್ನು ತೋರೆದು ಸೇವೆ ಮಾಡುತ್ತಿದ್ದು ಅಂತವರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವದು ಶ್ಲಾಘನೀಯ ಎಂದರು.
ಪತ್ರಕರ್ತರು ಮತ್ತು ಮಾಧ್ಯಮದವರನ್ನು ಇದೇ ಸಂದರ್ಭದಲ್ಲಿ ಪೂಜ್ಯರು ಗೌರವಿಸಿ ಸತ್ಕರಿಸಿದರು. “ಮಕ್ಕಳ ಸಂರಕ್ಷಣೆ ನಮ್ಮೆಲ್ಲರ ಹೊಣೆ” ಎಂಬ ಕರಪತ್ರವನ್ನು ಬಿಡುಗಡೆ ಮಾಡಲಾಯಿತು.
ಸಿದ್ದಲಿಂಗಪ್ಪ ಕಕರಗಾಳ್ ಪ್ರಾಸ್ತವಿಕವಾಗಿ ಮಾತನಾಡಿ ಮಕ್ಕಳ ಬಾಲ್ಯಬದುಕು ಉಳಿಸೋಣ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಶ್ರಮಿಸೋಣ, ಮಕ್ಕಳ ಬದುಕುವ ಹಕ್ಕು, ಮಕ್ಕಳ ರಕ್ಷಣೆ ಹಕ್ಕು, ಮಕ್ಕಳ ವಿಕಾಸ ಹೊಂದುವ ಹಕ್ಕು, ಮಕ್ಕಳು ಭಾಗವಹಿಸುವ ಹಕ್ಕುಗಳನ್ನು ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿಅಥಣಿಯ ಶಿವಯೋಗಿ ಶ್ರೀಗಳು ಯಾದವಾಡದ ಶ್ರೀಗಳು, ಅನ್ನಪೂರ್ಣೆಶ್ವರಿ ಸಂಸ್ಥೆಯ ಅಧ್ಯಕ್ಷ ದಶರತ ಹಣಗಿ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಇಳಕಲ್ ತಾಲೂಕ ಘಟಕದ ಅಧ್ಯಕ್ಷ ವಿಜಯ ಗವಿಮಠ ಉಸ್ಥಿತರಿದ್ದರು.ಸಿದ್ದರಾಮ ಸೂರೆ ಪ್ರಾರ್ಥಿಸಿದರು,ಲಕ್ಷ್ಮಣ್ ಅಂಜಿಕಾರ ಸ್ವಾಗತಿಸಿದರು, ಯಲ್ಲಪ್ಪ ಬಾರಕೇರ ನಿರೂಪಿಸಿದರು.
ರಾಘವೇಂದ್ರ ವಂದಿಸಿದರು.
ವರದಿ. ವಿನೋದ ಬಾರಿಗಿಡದ ಇಳಕಲ್
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ