ಇಳಕಲ್ : ಇಳಕಲ್ ನಗರಸಭೆಯ ತೆರಿಗೆ ವ್ಯವಸ್ಥೆ ಗೊಂದಲ ಗೂಡಿನಲ್ಲಿ . ಸಾರ್ವಜನಿಕರ ನೋವು ಕೇಳುವವರೆ ಇಲ್ಲದಂತಾಗಿದೆ ಇದಕ್ಕೆ ರಾಜ್ಯ ಸರಕಾರ ಪರಿಹಾರ ಒದಗಿಸಬೇಕು .
ದೇಶದಲ್ಲೆ ಅತಿಹೆಚ್ಚು ತೆರಿಗೆಯನ್ನ ಭರಿಸಿಕೊಳ್ಳುವ ಇಳಕಲ್ ನಗರಸಭೆ .ಇಳಕಲ್ ನಗರಸಭೆಯ ಆಸ್ತಿ ತೆರಿಗೆ ೧ ಸಾವೀರ ಚದರ ಅಡಿಗೆ ತೆರಿಗೆ ೩೦೦೦ ಸಾವಿರ ರೂಪಾಯಿ. ಅದೇ ದೆಹಲಿಯಲ್ಲಿ ಒಂದು ಸಾವಿರ ಚದರ ಅಡಿಗೆ ಮನೆಗೆ ೧೭೦೦ರೂ ಕಟ್ಟುತ್ತಾರೆ. ನಮ್ಮ ಬೆಂಗಳೂರಿನಲ್ಲಿ ಸಾವಿರ ಚದರ ಅಡಿಗೆ ೨೨೦೦.ಆದರೆ ನಾವು ಇಳಕಲ್‌ನಲ್ಲಿ ೩೦೦೦ ರೂ ಕಟ್ಟುತ್ತೆವೆ.ಇಳಕಲ್ ತೆರಿಗೆ ಹಾಗೂ ಬೇರೆ ಬೇರೆ ಮಹಾನಗರಗಳ ತೆರಿಗೆಗೆ ಸಾಕಷ್ಟು ವ್ಯತ್ಯಾಸವಿದೆ. ಇದು ಇಳಕಲ್‌ಗೆ ಸೀಮಿತವಾದ ಹೋರಾಟವಲ್ಲ.
ಈಡಿ ರಾಜ್ಯದ ತುಂಬೆಲ್ಲ ಅವೈಜ್ಞಾನಿಕವಾಗಿದೆ.ಗೊಂದಲ ಗೂಡಿನಲ್ಲಿ ನಮ್ಮ ನಗರಸಭೆ ಆಸ್ತಿ ತೆರಿಗೆ ವಿಧಿಸುತ್ತದೆ ಇಂತಹ ತೆರಿಗೆ ನಮಗೆ ಬೇಕಾ?? ಸಮಾನ ಮನಸ್ಕ ಚಿಂತಕರೊAದಿಗೆ ನಾವು ವಿಚಾರಮಾಡಿ ಈ ಒಂದು ವ್ಯವಸ್ಥೆಯ ರದ್ಧಾಗ ಬೇಕು.
ಅವೈಜ್ಞಾನಿಕ ತೆರಿಗೆ ಪದ್ದತಿ ಹೋಗಲಾಡಿಸಿ ಜನಸ್ನೇಹಿ ತೆರಿಗೆ ವ್ಯವಸ್ಥೆ ರೂಪಿತವಾಗಬೇಕು. ಬೇರೆ ರಾಜ್ಯಗಳ ರೀತಿಯಲ್ಲಿ ದೆಹಲಿ, ಕೇರಳ, ಆಂದ್ರ, ಮಹಾರಾಷ್ಟ್ರ, ಪಶ್ಚಿಮಬಂಗಾಳ, ತೆಲಂಗಾಣ, ಮಧ್ಯಪ್ರದೇಶ, ಈ ರಾಜ್ಯಗಳಲ್ಲಿ ಯಾವ ಯಾವ ರೀತಿಯ ವ್ಯವಸ್ಥೆ ಇದೆ ಎಂದು ಅಧ್ಯಯನ ಮಾಡಬೇಕು. ಅದರ ಆಧಾರಮೇಲೆ ಒಂದು ಜನ ಸ್ನೇಹಿ ತೆರಿಗೆ ವ್ಯವಸ್ಥೆ ರೂಪಿಸಿ ಎಂದು ಕಳೆದ ಮಾರ್ಚನಿಂದ ರಾಜ್ಯ ಸರಕಾರಕ್ಕೆ ಕೇಳುತ್ತಾ ಬಂದಿದ್ದೆವೆ.ಆದರೆ ಸರಕಾರ ನಮ್ಮ ಮನವಿಗೆ ಇಲ್ಲಿಯವರೆಗೂ ಸ್ಪಂದಿಸಲಿಲ್ಲ.ಕೊನೆಯ ಹಂತವಾಗಿ ನಮಗೆ ಉಳಿದಿರುವ ಮಾರ್ಗ ನ್ಯಾಯಾಲಯ ಒಂದೆ.ಈ ಒಂದು ಅವೈಜ್ಞಾನಿಕ ತೆರಿಗೆ ವ್ಯವಸ್ಥೆಯನ್ನ ರದ್ದುಪಡಿಸಿ ಕಾನೂನಿನ ವಿಧಿ ವಿಧಾನಗಳು ಅವುಗಳನ್ನ ರದ್ದುಪಡಿಸಿ.ಜನ ಸ್ನೇಹಿ ವ್ಯವಸ್ಥೆಯನ್ನು ರೂಪಿಸಬೇಕು.ಸರಕಾರಕ್ಕೆ ನಿರ್ದೇಶನ ಕೊಡಬೇಕೆಂದು ಕರ್ನಾಟಕ ರಾಜ್ಯ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಮಾಡಿದ್ದೆವೆ. ಇಂದು ಮುಖ್ಯ ನ್ಯಾಯಮೂರ್ತಿಗಳ ಪೀಠದ ಮುಂದೆ ನಮಗೆ ನ್ಯಾಯ ಸಿಗುತ್ತೆ ಅನ್ನುವ ವಿಶ್ವಾಸವಿದೆ ಎಂದು ನಾಗರಾಜ ಹೊಂಗಾಲ ತಿಳಿಸಿದರು
ವರದಿ : ವಿನೋದ ಬಾರಿಗಿಡದ ಭಾವನಾ ಟಿವಿ ಇಳಕಲ್
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ