December 20, 2024

Bhavana Tv

Its Your Channel

ಇಲಕಲ್ ಪೊಲೀಸರ ಮಿಂಚಿನ ಕಾರ್ಯಾಚರಣೆ.

ಇಲಕಲ್: ರಾಜ್ಯಾಧ್ಯಂತ ದರೋಡೆ, ಸುಲಿಗೆ ಒಟ್ಟು ೩೮ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಟು ಜನ ಆಂದ್ರ ಮೂಲದ ದರೋಡೆಕೋರರನ್ನು ಬಂಧಿಸಿ ಅವರು ಕಳುವು ಮಾಡಿದ ಸುಮಾರು ೯೮ ಲಕ್ಷ ರೂಪಾಯಿಗಳಲ್ಲಿ ಅವರಿಂದ ಮರಳಿ ೪೧ ಲಕ್ಷ ಹಣ, ಬಂಗಾರವನ್ನು ವಾಪಸ್ ಪಡೆಯಲಾಗಿದೆ.

ಹಾಗೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದಲ್ಲಿ ೬ ಪ್ರಕರಣಗಳು ಜಿಲ್ಲೆಗೆ ಸಂಬAಧಿಸಿದ್ದು, ೬೦ ಗ್ರಾಂ ತೂಕದ ಬಂಗಾರ ಕಳೆದುಕೊಂಡವರಿಗೆ ಆಯಾ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತೇವೆ.

ದಸ್ತಗಿರಿ ಮಾಡಿದ ಇಲಾಖೆಯ ಸಿಬ್ಬಂದಿಗಳಿಗೆ ೫೦೦೦೦ ನಗದು ಬಹುಮಾನ ರೂಪದಲ್ಲಿ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಪತ್ರಿಕಾ ಗೋಷ್ಠಿ ತಿಳಿಸಿದರು

ಹುನಗುಂದ ವೃತ್ತ ಅಧಿಕಾರಿಗಳಾದ ಸಿಪಿಐ ಹೋಸಕೇರಪ್ಪ ಕೋಳೂರ, ಪಿಎಸ್‌ಐ ಎಸ್.ಬಿ.ಪಾಟೀಲ ಹಾಗೂ ಡಿ ವಾಯ್ ಎಸ್ ಪಿ ನಂದರೆಡ್ಡಿ ನೇತೃತ್ವ ವಹಿಸಿದ್ದರು.

ವರದಿ. ವಿನೋದ ಬಾರಿಗಿಡದ

error: