ಡಾ|| ಶ್ರೀಕಾಂತ ಸಾಕಾರವರು ಜಿಲ್ಲೆಯಲ್ಲಿ ಪ್ರಥಮಬಾರಿಗೆ ಯಶಸ್ವಿಗೊಳಿಸಿದ ಥೈರಾಯ್ಡ ಗ್ರಂಥಿಯ ಲಾಪ್ರೊಸ್ಕೋಪಿ ಶಸ್ತ್ರ ಚಿಕಿತ್ಸೆ
ಇಳಕಲ್ : ಹನುಮಸಾಗರದ ರಹವಾಸಿಯಾದ ೩೦ ವರ್ಷದ ಮಹಿ ಳೆಯು ಥೈರಾಯ್ಡ ಗ್ರಂಥಿಯಿAದ ಬಳಲುತ್ತಿದ್ದು ಹಲವಾರು ಕಡೆ ಅನೇಕ ವೈದ್ಯರನ್ನು ಸಂಪರ್ಕಿಸಿ ಸಂದರ್ಶಿಸಿದರೂ ಫಲಕಾರಿಯಾಗದೆ ಕೊನೆಗೆ ಶಸ್ತ್ರ ಚಿಕಿತ್ಸೆಯೊಂದೇ ಪರಿಹಾರವೆಂದು ತಿಳಿದುಬಂದಾಗ ಆ ರೋಗಿಯು ಭೇಟಿ ಕೊಟ್ಟಿದ್ದು, ಸಂಪರ್ಕಿಸಿದ್ದು ಸಾಕಾ ಲ್ಯಾಪ್ರೊಸ್ಕೋಪಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ|| ಶ್ರೀಕಾಂತ ಸಾಕಾ ಅವರು ಈ ಶಸ್ತ್ರ ಚಿಕಿತ್ಸೆಯನ್ನು ಲ್ಯಾಪ್ರೊಸ್ಕೋಪಿ ಮೂಲಕ ಮಾಡಬೇಕು ಎಂದು ಸೂಚಿಸಿದಾಗ, ಅವರು ಒಪ್ಪಿಕೊಂಡರು.
ಥೈರಾಯ್ಡ ಗ್ರಂಥಿಯAಥಹ ಶಸ್ತ್ರಚಿಕಿತ್ಸೆಯನ್ನು ಲ್ಯಾಪ್ರೊಸ್ಕೋಪಿ ಮುಖಾಂತರ ಮಾಡುವುದು ರಾಜ್ಯದಲ್ಲಿಯೇ ತುಂಬಾ ವಿರಳ. ಅದರಲ್ಲೂ ಕಲೆರಹಿತ ಶಸ್ತ್ರ ಚಿಕಿತ್ಸೆ ಇಂದಿನ ಯುವತಿಯರಿಗೆ / ಮಹಿಳೆಯರಿಗೆ ತುಂಬಾ ಉಪಯುಕ್ತ. ಅಲ್ಲದೆ ರಕ್ತ ಸ್ರಾವ ಕಡಿಮೆ ಮತ್ತು ನೋವು ರಹಿತ ಶಸ್ತ್ರ ಚಿಕಿತ್ಸೆಯಾಗಿರುತ್ತದೆ.
ಇಂತಹ ಶಸ್ತ್ರ ಚಿಕಿತ್ಸೆಯನ್ನು ಡಾ|| ಶ್ರೀಕಾಂತ ಸಾಕಾ ಅವರು ಜಿಲ್ಲೆಯಲ್ಲಿಯೇ ಪ್ರಪ್ರಥಮಬಾರಿಗೆ ಈ ಥೈರಾಯ್ಡ ಗ್ರಂಥಿಯ ಲಾಪ್ರೊಸ್ಕೋಪಿ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಗೊಳಿಸಿದ್ದಾರೆ.
ಈ ಶಸ್ತ್ರಚಿಕಿತ್ಸೆ ಯಶಸ್ವಿ ಗೊಳಿಸಲು ಕಾರಣಿಭೂತರಾದ ಡಾ ಶರಣು ಬೇವೂರ, ಡಾ ಆರತಿ ಸಾಕಾ ಹಾಗೂ ಸಹಾಯಕರಾದ ಸೋಮು ಕುಂಬಾರ ಮತ್ತು ಶಿವು ಸಂಗಮ
ಈ ಶಸ್ತ್ರಚಿಕಿತ್ಸೆಗೆ ಒಳಪಟ್ಟ ಮಹಿಳೆ ಕೂಡ ಸಂಪೂರ್ಣ ಗುಣಮುಖ ಹೊಂದಿದ್ದಾಳೆ
ವರದಿ: ವಿನೋದ ಬಾರಿಗಿಡದ
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ