December 22, 2024

Bhavana Tv

Its Your Channel

ಮಾನವೀಯತೆ ಮೆರೆದ ಸಿ.ಪಿ.ಐ ಹೋಸಕೆರಪ್ಪ ಕೋಳೂರ.

ಇಳಕಲ್ ನಗರದಲ್ಲಿ ರಾತ್ರಿ ಸುಮಾರು 8 ಘಂಟೆಗೆ ಬಸ್ಟ್ಯಾಂಡ್ ಎದುರಿಗೆ ಎರಡು ಬೈಕ್ ಮುಖಾ -ಮುಖಿ ಡಿಕ್ಕಿ ಹೋಡೆದ ಪರಿಣಾಮ ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯ ಗೊಂಡಿದರು.
ಇಳಕಲ್‌ನ ನಿವಾಸಿಗಳಾದ ಸಂಗಮೇಶ ಮಾದರ ಮತ್ತು ರವಿ ಕಲ್ಯಾಣ್ ಕರ್ ಎಂದು ತಿಳಿದುಬಂದಿದೆ

ಘಟನಾ ಸ್ಥಳದಲ್ಲಿ ಸೇರಿದ ಜನರು ಸಹಾಯ ಮಾಡದೆ ಸುಮ್ಮನೆ ನೋಡುತ್ತಿದ್ದನು ಗಮನಿಸಿದ ಸಿಪಿಐ ಅಲ್ಲಿ ಸೇರಿದ ಜನರಿಗೆ ವಾಹನದಲ್ಲಿ ಹತ್ತಿಸಿ ಆಸ್ಪತ್ರೆಗೆ ಹೋಗಲು ಹೇಳಿದರು ಆದರೂ ಯಾರೂ ಮುಂದಾಗಲಿಲ್ಲ ಅದನು ಗಮನಿಸಿ ತಮ್ಮ ವಾಹನದಲ್ಲೇ ಗಾಯಗೊಂಡ ರವಿ ಕಲ್ಯಾಣಕರ ಅವರನ್ನು ಹತ್ತಿಸಿ ನಗರದ ಪ್ರಸಿದ್ಧ ಪಾಟೀಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಬಗ್ಗೆ ಡಾಕ್ಟರ್ ಜೊತೆ ವಿಚಾರಿಸಿದರು ಮತ್ತು ಗಾಯಗೊಂಡ ವ್ಯಕ್ತಿಗೆ ಧೈರ್ಯ ಹೇಳಿದರು .

ಸಿಪಿಐ ಹೊಸಗೇರಪ್ಪ ಮಾರ್ಗದರ್ಶನದಂತೆ ಇನ್ನೋರ್ವ ವ್ಯಕ್ತಿ ಸಂಗಮೇಶ ಮಾದರನ್ನು ಬೀದಿಬದಿ ವ್ಯಾಪಾರಸ್ಥರ ಸಂಘದ ಜಿಲ್ಲಾ ಅಧ್ಯಕ್ಷ ರಿಯಾಜ್ ಮಕಾಂದಾರ್ ಅವರು ತಮ್ಮ ಆಟೋದಲ್ಲಿ ಹತ್ತಿಸಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ನೀಡಿದರು. ಆದರೆ ತಲೆಗೆ ಪೆಟ್ಟು ಬಿದ್ದ ಕಾರಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟ ಜಿಲ್ಲಾ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ
ಕಳುಹಿಸಿಕೊಡಲಾಯಿತು

ವರದಿ: ವಿನೋದ ಬಾರಿಗಿಡದ

error: