ಇಳಕಲ್ ನಗರದ ಶ್ರೀ ವಿಜಯ ಮಹಾಂತ ಶಿವಯೋಗಿಗಳ ತಪೋವಣದ ಹಿಂದುಗಡೆ ಇರುವ ಎಸ್ ಆರ್ ಕೆ ಬಡಾವಣೆ, ಗುರುಲಿಂಗಪ್ಪ ಕಾಲೋನಿ ಮತ್ತು ಕಂದಗಲ್ ರಸ್ತೆಪಕ್ಕದಲ್ಲಿರುವ 42 ಎಕರೆಯಲ್ಲಿರುವ ಪ್ಲಾಟುಗಳ ಹಕ್ಕು ಪತ್ರಗಳನ್ನು ವಿತರಿಸುವಂತೆ ಒತ್ತಾಯಿಸಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಮತ್ತು ಇಳಕಲ್ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಫೆ. 25 ಶುಕ್ರವಾರ ವಾರದಂದು ಬೃಹತ್ ಪ್ರತಿಭಟನಾ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಮಂಗಳವಾರ ತಮ್ಮ ನಿವಾಸದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಪತ್ರಿಕಾ ಗೋಷ್ಠಿ ಕರೆದು ಮಾತನಾಡುತ್ತಾ ಈಗಾಗಲೆ ತಮ್ಮ ತಂದೆಯವರು ಶಾಸಕ,ಆಶ್ರಯ ಕಮಿಟಿ ಅಧ್ಯಕ್ಷರಾಗಿದ್ದಾಗ ಗುರುಲಿಂಗಪ್ಪ ಕಾಲೋನಿಯ 184 ಪ್ಲಾಟಗಳು ತಮ್ಮ
ತಾಯಿಯವರು ಶಾಸಕರು, ಆಶ್ರಯ ಕಮಿಟಿ ಅಧ್ಯಕ್ಷ ರಾಗಿದ್ದಾಗ ಶ್ರೀವಿಜಯ ಮಹಾಂತ ಶಿವಯೋಗಿಗಳ ತಪೋವನದ ಹಿಂದೆ ಹನ್ನೋಂದು ಎಕರೆ ಜಾಗೆಯಲ್ಲಿ 334 ಪ್ಲಾಟಗಳನ್ನು.
ತಾವು ಶಾಸಕರು ಆಶ್ರಯ ಕಮಿಟಿ ಆಧ್ಯಕ್ಷರಾಗಿದ್ದಾಗ 42 ಎಕರೆಯಲ್ಲಿ 1560ಪ್ಲಾಟಗಳನ್ನು ನಿರ್ಮಾನ ಮಾಡಲಾಗಿದೆ.
ಈ ಎಲ್ಲಾ ಪ್ಲಾಟುಗಳು ರಾಜು ಗಾಂಧಿ ವಸತಿ ನಿಗಮದಿಂದ ಒಪ್ಪಿಗೆ ಪಡೆದುಕೊಂಡಿದ್ದಲ್ಲದೆ
ಅಧಿಕೃತ ಫಲಾನುಭವಿಗಳ ಹೆಸರಿನಲ್ಲಿ ಹಕ್ಕುಪತ್ರವು ಸಹ ಸಿದ್ದಗೊಂಡಿವೆ.
17-18ನೇ ಸಾಲಿನಲ್ಲಿ ಸಿದ್ದ ರಾಮಯ್ಯ ನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾಂಕೇತಿಕ ವಾಗಿ ಕೆಲವರಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಿದ್ದರು ಸಹ ಉಳಿದ ಹಕ್ಕುಪತ್ರಗಳನ್ನು ನಗರ ಸಭೆಯಲ್ಲಿ ಇಟ್ಟುಕೊಂಡು ವಿತರಿಸದೆ ಇರುವುದಕ್ಕೆ ಶಾಸಕ ದೊಡ್ಡನಗೌಡ ಪಾಟೀಲರು ತಡೆ ಒಡ್ಡುತಿದ್ದಾರೆ ಮಾಜಿ ಶಾಸಕ ವಿ ಎಸ್ ಕಾಶಪ್ಪನವರು ಕಾರವಾಗಿ ಮಾತನಾಡಿದರು.
ತಾವು ಈ ನಾಲ್ಕುತಿಂಗಳ ಹಿಂದೆ ಪ್ರತಿಭಟನೆ ಮಾಡುತ್ತೆವೆ ಎಂದಾಗ ತಮಗೆ ಬೇಕಾದ ಕೆಲವರಿಗೆ ಹಕ್ಕುಪತ್ರಗಳನ್ನು ವಿತರಿಸಿದ್ದು ಅದರಲ್ಲಿಯು ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ವಿ ಎಸ್ ಕಾಶಪ್ಪನವರು ಆಪಾದಿಸಿದರು.
ಈಗಾಗಲೆ ಎಲ್ಲಾ ಹಕ್ಕುಪತ್ರಗಳು ನಗರ ಸಭೆಯಲ್ಲಿ ಇವೆ ಎಂದು ಮಾಹಿತಿ ಹಕ್ಕಿನಲ್ಲಿ ಕೇಳಿದಾಗ ಜಿಲ್ಲಾ ಅಧಿಕಾರಿಗಳು ಲಿಖಿತ ವಾಗಿ ಉತ್ತರಿಸಿದ್ದಾರೆ.
ವಿಭಾಗಿಯ ಅಧಿಕಾರಿಗಳು ಮುಂದೆ ನಿಂತು ಹಕ್ಕುಪತ್ರಗಳ ವಿತರಣೆ ಮಾಡಬೇಕು ಇಲ್ಲದೆ ಹೋದಲ್ಲಿ ಜಿಲ್ಲಾಡಳಿತ ಸರಕಾರದ ವಿರುದ್ಧ ಉಗ್ರಪ್ರತಿಭಟನೆ ಕೈಗೊಳ್ಳನಾಗುವುದೆಂದು ಎಚ್ಚರಿಸಿದರು.
ಇದೆ 25 ಶುಕ್ರವಾರ ಬೃಹತ್ ಪ್ರತಿಭಟನಾ ರ‍್ಯಾಲಿಯನ್ನು ರಾಷ್ಟ್ರೀಯ ಹೆದ್ದಾರಿ ನಂ 50 ರ ಪಕ್ಕದಲ್ಲಿರುವ ಬಸವೇಶ್ವರ ವೃತ್ತದಿಂದ ಹೊರಟು ಪ್ರಭಾತ ಪೇರಿ ಮಾರ್ಗವಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು ಹಕ್ಕುಪತ್ರ ದೊರೆಯದವರು ಕಾಂಗ್ರೆಸ್ ಪಕ್ಷದ ಪ್ರಮುಖರು ಕಾರ್ಯಕರ್ತರು ಅಧಿಕ ಸಂಖೆಯಲ್ಲಿ ಭಾಗವಹಿಸುವಂತೆ ವಿನಂತಿಸಿಕೊAಡಿದ್ದು ಬಾಗಲಕೋಟ ವಿಭಾಗದ ಉಪ ಅಧಿಕಾರಿಗಳೆ ಬಂದು ಮನವಿಯನ್ನು ಸ್ವೀಕರಿಸಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ವಿಜಯಾನಂದ ಎಸ್ ಕಾಶಪ್ಪನವರ ವಿನಂತಿಸಿಕೊAಡಿದ್ದಾರೆ.
ವರದಿ: ವಿನೋದ ಬಾರಿಗಿಡದ ಇಳಕಲ್
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ